JANANUDI.COM NETWORK
ಕುಂದಾಪುರ, ಜೂ. 12: ಕೊರೊನಾ ಮಹಾಮಾರಿಯಿಂದ ಅನೇಕರು ಆರ್ಥಿಕ ಸಮಸ್ಯೆಯಿಂದ ತೊಂದರೆಗಿಡಾಗಿದ್ದಾರೆ. ಇದಕ್ಕೆ ಸ್ಪಂದಿಸಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿ, ರೋಜರಿ ಕ್ರೆಡಿಟ್ ಕೋ ಆಪರೆಟೀವ್ ಸೊಸೈಟಿ.ಲಿಮಿಟೆಡ್ ಕುಂದಾಪುರ ಮತ್ತು ಶೆವೊಟ್ ಪ್ರತಿಷ್ಠಾನ್ (ರಿ) ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ವಲಯದಿಂದ ಆರಿಸಲ್ಪಟ್ಟ 50 ಕಡು ಬಡ ಕುಟುಂಬದವರಿಗೆ ಕುಂದಾಪುರ ಹೋಲಿ ರೋಜರಿ ಮಾತಾ, ಚರ್ಚಿನ ಸಭಾ ಭವನದ ಹೊರಗಡೆ ಕಿಟ್ ವಿತರಣೆಯ ಚಾಲನೆಯನ್ನು ಕುಂದಾಪುರ ವಲಯ ಪ್ರಧಾನ ಕಥೊಲಿಕ್ ಸಭೆಯ ಅಧ್ಯಾತ್ಮಿಕ ನಿರ್ದೇಶಕ ಅತೀ ವಂ. ಫಾ| ಸ್ಟ್ಯಾನಿ ತಾವ್ರೊ ನಡೆಸಿಕೊಟ್ಟರು.
“ಕಥೊಲಿಕ್ ಸಭಾ ಎಲ್ಲಾ ಸಂದರ್ಭಗಳಲ್ಲೂ ಸಮಾಜ ಸೇವೆ ಮಾಡುತ್ತದೆ. ವ್ಯಾಕ್ಸಿನ್ ತೆಗೆದುಕೊಳ್ಳಲು, ಪೆÇ್ರೀತ್ಸಾಹ ಮಾರ್ಗದರ್ಶನ ನೀಡಿ ಜನತೆಗೆ ಸಹಾಯ ಮಾಡಿದ್ದಿರಿ, ಅದಲ್ಲದೆ ಈಗ ಸಂಕಷ್ಟದಲ್ಲಿರುವರಿಗೆ ಆರ್ಥಿಕ ಸಹಾಯವನ್ನು ಮಾಡುತ್ತಿರಿ, ನಿಮ್ಮ ಸೇವೆ ಸಮಾಜ ಪರಿಗಣಿಸುತ್ತದೆ” ಎಂದು ಪೆÇ್ರೀತ್ಸಾಹದ ನುಡಿಗಳನ್ನಾಡಿದರು.
ಕುಂದಾಪುರ ವಲಯ ಸಮಿತಿಯ ಅಧ್ಯಕ್ಷೆ ಮೇಬಲ್ ಡಿಸೋಜಾ ಕಥೊಲಿಕ್ ಸಭೆಯ ಉದ್ದೇಶವನ್ನು ನುಡಿದು, “ನಾವು ನಮ್ಮವರಲ್ಲದೆ ಸಂಕಷ್ಟದಲ್ಲಿರುವ ಇತರರಿಗೂ ಸಹಾಯ ನೀಡುವ ಉದ್ದೇಶ ಇಟ್ಟುಕೊಂಡಿದ್ದೆವೆ” ಎಂದರು, ನಿಕಟ ಪೂರ್ವ ಅಧ್ಯಕ್ಷ ಹೇರಿಕ್ ಗೊನ್ಸಾಲ್ವಿಸ್, ಶೆವೊಟ್ ಪ್ರತಿಷ್ಟಾನದ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ, ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷ, ಪತ್ರಕರ್ತ ಬರ್ನಾಡ್ ಡಿಕೋಸ್ತಾ, ರೋಜರಿ ಕ್ರೆಡಿಟ್ ಕೋ ಆಪರೆಟೀವ್ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ, ನಿರ್ದೇಶಕಿ ಶಾಂತಿ ಕರ್ವಾಲ್ಲೊ, ಕುಂದಾಪುರ ವಲಯ ಸಮಿತಿಯ ಸಹಕಾರ್ಯದರ್ಶಿ ಪ್ರೇಮಾ ಡಿಕುನ್ಹಾ, ಪದಾಧಿಕಾರಿ ಡಾ| ಸೋನಿ ಡಿಕೋಸ್ತಾ ಉಪಸ್ಥಿತರಿದ್ದರು. ಕಾರ್ಯದಶಿ ಡಯಾನಾ ಸೆರಾವೊ ಧನ್ಯವಾದಗಳನ್ನು ಅರ್ಪಿಸಿದರು.