ಕೋಲಾರ,ಜೂ,3: ಇಂದು ಸ್ವರ್ಣಭೂಮಿ ಫೌಂಡೇಷನ್ ವತಿಯಿಂದ “ಸರ್ಕಾರಿ/ಅನುದಾನಿತ ಶಾಲೆಗಳ ಉಳಿವಿಗಾಗಿ ನಾವು-ನೀವು ” ಅಭಿಯಾನದಡಿ ಪ್ರತಿವರ್ಷದಂತೆ ಈ ಶೈಕ್ಷಣಿಕ ಸಾಲಿಗೂ ಸಹ ಅವಶ್ಯಕತೆ ಇರುವ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಇಂದು ಸುಗಟೂರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮುಖ್ಯವಾಗಿ ಶಿಕ್ಷಣದ ಮೂಲಭೂತ ಸೌಲಭ್ಯಗಳನ್ನು ಪೂರೈಸಿದಾಗ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ಬಿ.ಶಿವಕುಮಾರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆಯ ನಿರ್ದೇಶಕರಾದ ಸುಗಟೂರ್ ಸೈಯದ್ ತನವೀರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವರ್ಣಭೂಮಿ ಫೌಂಡೇಷನ್ನ ಅಧ್ಯಕ್ಷ ಬಿ.ಶಿವಕುಮಾರ್, ನಿರ್ದೇಶಕರಾದ ಸುಗಟುರು ಸೈಯದ್ ತನವೀರ್, ಎಸ್ಡಿಎಂಸಿ ಅಧ್ಯಕ್ಷ ಕಲಿಂ ಉಲ್ಲಾ, ಮುಖ್ಯ ಶಿಕ್ಷಕಿ ನೂರ್ ಕುತೇಜ, ಶಿಕ್ಷಕರಾದ ವರಲಕ್ಷ್ಮಿ, ನೂರ್ ಅಫ್ಶ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.