ಕುಂದಾಪುರ: ‘ಬಟ್ಟೆಯ ಚೀಲ ಬಳಸಿ, ಪರಿಸರ ರಕ್ಷಿಸಿ’ ಎನ್ನುವ ಧೋರಣೆಯೊಂದಿಗೆ ಗೆಳೆಯರ ಸ್ವಾವಲಂಬನ ವೆಲ್ಫೇರ್ ಅಸೋಶಿಯೇಶನ್ (ರಿ.) ವತಿಯಿಂದ 1 ತಿಂಗಳ ಕಾಲ ಬಟ್ಟೆ ಚೀಲಗಳ ಪ್ರದರ್ಶನ ಹಾಗೂ ತರಬೇತಿ ಶಿಬಿರ ನಡೆಯಲಿದೆ.
50ಕ್ಕೂ ಮಿಕ್ಕಿ ವಿವಿಧ ವಿನ್ಯಾಸಗಳ, ಪರಿಸರ ಸ್ನೇಹಿ ಬಟ್ಟೆಯ ಚೀಲಗಳನ್ನು ಹಾಗೂ ಬಟ್ಟೆಯ ಇತರ ವಸ್ತುಗಳನ್ನ ಸ್ವಾವಲಂಬನ ಕೇಂದ್ರದ 200ಕ್ಕೂ ಮಿಕ್ಕಿ ಪುರುಷ, ಮಹಿಳೆಯರು ಹೊಲಿಯುತ್ತಿದ್ದು, ಅವುಗಳ ಪ್ರದರ್ಶನವನ್ನು ಶನಿವಾರ 21 ಸೆಪ್ಟೆಂಬರ್ ರಂದು ಬೆಳಿಗ್ಗೆ 11:00 ಗಂಟೆಗೆ ಉದ್ಘಾಟಿಸಲಾಗುತ್ತದೆ. ಪ್ರದರ್ಶನ ಹಾಗೂ ತರಬೇತಿ ಅಕ್ಟೋಬರ್ 21ರ ತನಕ ನಡೆಯಲಿದೆ. ಬೆಳಿಗ್ಗೆ 10:00 ರಿಂದ ಸಂಜೆ 3:30ರ ತನಕ ನಡೆಯಲಿರುವ ಈ ಪರಿಸರ ಸ್ನೇಹಿ ಕಾರ್ಯಕ್ರಮಕ್ಕೆ ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳೆಯರು ಆಗಮಿಸಿ, ಪ್ರೋತ್ಸಾಹಿಸಬೇಕಾಗಿ ಕೇಂದ್ರದ ಅಧ್ಯಕ್ಷರಾದ ವೆಂಕಟೇಶ ಪೈ ಅವರು ವಿನಂತಿಸಿದ್ದಾರೆ. ವಿಳಾಸ : ರಮಾನಂದ ಭಟ್ ಕಂಪೌಂಡ್, ವಿಜಯ ಟೆಕ್ಸ್ಟೈಲ್ಸ್ ಎದುರು, ರಾಮ ಮಂದಿರ ಮಾರ್ಗ, ಹೊಸ ಬಸ್ ಸ್ಟ್ಯಾಂಡ್ ಸಮೀಪ, ಕುಂದಾಪುರ.