ಬೈಲಾ ಗಾಳಿಗೆ ತೂರಿ ಡಿಸಿಸಿ ಬ್ಯಾಂಕ್‌ ವತಿಯಿಂದ ಸಹಕಾರ ಸಂಘಗಳಿಗೆ ಸಾಲ ವಿತರಣೆ ಮಾಡಲಾಗುತ್ತಿದೆ:ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ : ಬೈಲಾ ಗಾಳಿಗೆ ತೂರಿ ಡಿಸಿಸಿ ಬ್ಯಾಂಕ್‌ ವತಿಯಿಂದ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಸಹಕಾರ ಸಂಘಗಳಿಗೆ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ದೂರಿದರು . ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಆ .೧೦ ರಂದು ಶ್ರೀನಿವಾಸಪುರದ ಮಾವಿನ ಕಾಯಿ ಮಂಡಿಯೊಂದರಲ್ಲಿ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ತಾಲ್ಲೂಕಿನ ಯಲ್ಲೂರು , ಮಣಿಗಾನಹಳ್ಳಿ , ದಳಸನೂರು ಹಾಗೂ ಅಡ್ಡಗಲ್ ಸಹಕಾರ ಸಂಘಗಳ ವ್ಯಾಪ್ತಿಗೆ ಬರುವ ೩೭೬ ಸ್ತ್ರೀ ಶಕ್ತಿ ಸಂಘಗಳಿಗೆ ರೂ . ೧೮.೫೪ ಕೋಟಿ ಸಾಲ ವಿತರಣೆ ಮಾಡಲಾಗಿದೆ . ಸಂಘಗಳ ಕಾರ್ಯದರ್ಶಿಗಳ ಮೇಲೆ ಒತ್ತಡ ಹೇರಿ ಸದಸ್ಯರನ್ನು ಸಭೆಗೆ ಕರೆಸಿಕೊಳ್ಳಲಾಗಿದೆ ಹಾಗೂ ಸಾಲ ವಿತಣಾ ಸಮಾರಂಭಕ್ಕೆ ಸುಮಾರು ರೂ .೩.೫೦ ಲಕ್ಷ ವೆಚ್ಚ ಮಾಡಲಾಗಿದೆ ಎಂದು ಹೇಳಿದರು . ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕ್‌ ನೀಡುವ ಹಣದಿಂದ ಡಿಸಿಸಿ ಬ್ಯಾಂಕ್ ಬಡ್ಡಿರಹಿತ ಸಾಲ ನೀಡುತ್ತಿದೆ . ಆದರೆ ತಾಲ್ಲೂಕಿನ ಶಾಸಕರು ಸ್ವಂತ ಹಣ ನೀಡಿದಂತೆ ಬಿಂಬಿಬಿಸಿಕೊಳ್ಳುತ್ತಿದ್ದಾರೆ . ಹಾಗೇನಾದರೂ ಕೊಡುವುದಾದರೆ , ಅವರೇ ಹೇಳಿರುವಂತೆ ಮೂರು ನಾಲ್ಕು ತಲೆಮಾರಿಗೆ ಸಾಕಾಗುಷ್ಟು ಮಾಡಲಾಗಿರುವ ಸಂಪಾದನೆಯಲ್ಲಿ ನೀಡಲಿ ಎಂದು ಕುಟುಕಿದರು .

‘ಸ್ತ್ರೀ ಶಕ್ತಿ ಸಂಘಗಳ ಬಗ್ಗೆ ನನಗೆ ಗೌರವವಿದೆ . ಸಂಘಗಳಿಗೆ ಸಾಲ ನೀಡುವ ಬಗ್ಗೆ ಯಾವುದೇ ಆಕ್ಷೇಪ ಇಲ್ಲ . ಮಹಿಳೆಯರ ಸಬಲೀಕರಣ ಆಗಲೇಕು . ಆದರೆ ಅವರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವುದನ್ನು ವಿರೋಧಿಸುತ್ತೇನೆ ಎಂದು ಹೇಳಿದರು . ಕಸಬಾ ಬ್ಯಾಂಕ್ ಶಾಖೆ ಸೇರಿದಂತೆ ತಾಲ್ಲೂಕಿನ ಕೆಲವು ಬ್ಯಾಂಕ್‌ಗಳಲ್ಲಿ ಕೆಲವು ಪ್ರಭಾವಿಗಳು ಪಡೆದುಕೊಂಡಿರುವ ಸಾಲ ಮರುಪಾವತಿಯಾಗಿಲ್ಲ . ಸ್ತ್ರೀ ಶಕ್ತಿ ಸಂಘಗಳಿಂದ ಸಂಗ್ರಹಿಸಲಾಗಿರುವ ಶೇರು ಹಣಕ್ಕೆ ಲೆಕ್ಕವಿಲ್ಲ . ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು . ಕೆ.ಆರ್.ರಮೇಶ್ ಕುಮಾರ್ ಅವರು ನೀಡಿರುವ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ . ಸಮಯ ಇದ್ದಾಗ ಸುಮ್ಮನಿದ್ದ ಅವರು , ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾರಾಟ ಮಾಡುತ್ತಿದ್ದಾರೆ . ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್.ಡಿ.ಕುಮಾರಸ್ವಾಮಿ ಎಂದು ಹೇಳಿದರು . ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ . ಅವರು ಬಾಯಿಬಿಟ್ಟರೆ ಶಾಸಕರ ಬಣ್ಣ ಬಯಲಾಗುತ್ತದೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್‌.ನಾರಾಯಣಸ್ವಾಮಿ , ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ , ಮುಖಂಡರಾದ ಪೂಲ ಶಿವಾರೆಡ್ಡಿ , ಏಜಾಜ್ ಪಾಷ , ಸುಬ್ಬರೆಡ್ಡಿ , ನಾರಾಯಣಸ್ವಾಮಿ , ಏನಾಜ್ ಖಾನ್ , ಮನು ಮತ್ತಿತರರು ಇದ್ದರು