JANANUDI.COM NETWORK

ಬೆಂಗಳೂರು, ಸೌದಿ ಅರೇಬಿಯಾ ದೇಶವು, ಯುಎಇ, ದಕ್ಷಿಣ ಆಫ್ರಿಕಾ ಮತ್ತು ಅರ್ಜೆಂಟೀನಾಗಳಿಗೆ ಸೆಪ್ಟೆಂಬರ್ 8 ರಿಂದ (ಬುಧವಾರ) ಪ್ರಯಾಣಿಕರ ವಿಮಾನ ಹಾರಾಟಕ್ಕೆ ಅನುಮತಿ ನೀಡಿದೆ ಎಂದು ರಾಜ್ಯ ಮಾಧ್ಯಮದಿಂದ ತಿಳಿದು ಬಂದಿದೆ.. ಜುಲಾಯ್ 3 ರಿಂದ ಸೌದಿ ಅರೇಬಿಯಾವು ಕೋವಿಡ್ -19 ರೂಪಾಂತರಗಳಿಂದಾಗಿ ತೊಂದರೆಯುಂಟಾಗುತ್ತದೆಯೆಂದು ಯುಎಇ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣಿಕರ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಸೌದಿ ಆಂತರಿಕ ಸಚಿವಾಲಯವು ಈ ದೇಶಗಳಿಗೆ ಪ್ರಯಾಣದ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಘೋಷಿಸಿದ್ದು, ಪ್ರಯಾಣದ ನವೀಕರಣಗಳ ಪ್ರಕಾರ, ಸೌದಿ ನಾಗರಿಕರಿಗೆ ನಾಳೆಯಿಂದ ಮೂರು ದೇಶಗಳಿಗೆ ಪ್ರಯಾಣಿಸಲು ಅವಕಾಶವಿದೆ. ಅಲ್ಲದೇ ಈ ಬೆಳವಣಿಗೆಯಿಂದ ನೇರವಾಗಿ ಸೌದಿಗೆ ಪ್ರಯಾಣಿಸಲಾಗದೇ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರಿಗೆ ತುಂಬಾ ಅನುಕೂಲವಾಗಲಿದೆ