ಸೌದಿ ಜೆದ್ದಾ- ಮಂಗಳೂರು ನಡುವೆ ನೇರ ವಿಮಾನ ಹಾರಾಟ ಪ್ರಾರಂಭ

JANANUDI.COM NETWORK

ಮುಂಬರುವ ಮಾರ್ಚ್ ತಿಂಗಳ 2 ರಿಂದ ಸೌದಿ ಅರೇಬಿಯಾದ ಜೆದ್ದಾದಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಜೆದ್ದಾಕ್ಕೆ ನೇರ ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರಕಟಣೆ ತಿಳಿಸಿದೆ.
ಅದರಂತೆ ಮಾರ್ಚ್ 2, 9, 16 ಮತ್ತು 23 ದಿನಾಂಕಗಳಲ್ಲಿ ಜಿದ್ದಾದಿಂದ ಮಂಗಳೂರಿಗೂ, ಅದೇ ದಿನ ಮಂಗಳೂರಿನಿಂದ ಜೆದ್ದಾಕ್ಕೂ ನೇರ ವಿಮಾನ ಲಭ್ಯವಿದೆ.
ಮಂಗಳೂರಿನಿಂದ ಬೆಳಿಗ್ಗೆ 08-55 ಕ್ಕೆ ಹೊರಟು ಸೌದಿ ಸಮಯ ಮಧ್ಯಾಹ್ನ 12-45 ಕ್ಕೆ ಜಿದ್ದಾ ತಲುಪಲಿದೆ. ಜಿದ್ದಾದಿಂದ ಮಧ್ಯಾಹ್ನ 1-45 ಕ್ಕೆ ಹೊರಟು ರಾತ್ರಿ 9.40 ಕ್ಕೆ ಮಂಗಳೂರು ತಲುಪಲಿದೆ. ಈ ಮೂಲಕ ಕರಾವಳಿ ಮೂಲದ ಅನಿವಾಸಿ ಭಾರತೀಯರ ಬಹು ಕಾಲದ ಈ ಬೇಡಿಕೆ ಈಡೇರಿ , ಲಕ್ಷಾಂತರ ಯಾತ್ರಾರ್ಥಿಗಳಿಗೆ ಅನುಕೂಲವಾಗಿ ಈ ನೇರ ವಿಮಾನ ಹಾರಾಟವು ಸೌದಿಯಲ್ಲಿರುವ ಭಾರತೀಯ ಪ್ರಜೆಗಳಿಗೆ ವರದಾನವಾಗಲಿದೆ.