JANANUDI.COM NETWORK
ಕುವೈಟ್: ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಸೂಚನೆ ನೀಡುವ ವರೆಗೆ ಭಾರತದಿಂದ ಬರುವ ಎಲ್ಲಾ ನೇರ ವಾಣಿಜ್ಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ, ಹಾಗೇಯೆ ಇತರ ದೇಶಗಳಿಂದ ಬರುವ ನಾಗರಿಕರಿಗೆ ಶರತ್ತುಗಳನ್ನು ವಿಧಿಸಿದೆ’ ಎಂದು ಕುವೈಟ್‌ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ಶನಿವಾರ ಪ್ರಕಟಿಸಿದೆ.
ಜಾಗತಿಕ ಕೋವಿಡ್ 19ರ ಸ್ಥಿತಿಯ ಬಗ್ಗೆ ಕುವೈಟ್ ಆರೋಗ್ಯ ಅಧಿಕಾರಿಗಳ ಮೌಲ್ಯಮಾಪನದ ಬಳಿಕ ಇದನ್ನು ಜ್ಯಾರಿಗೊಳಿಸಲಾಗಿದೆ. ಭಾರತದಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಕುವೈಟ್ ದೇಶಕ್ಕೆ ಕನಿಷ್ಠ 14 ದಿನಗಳ ಮೊದಲು ಭಾರತ ದೇಶದ ಹೊರಗೆ(ವಿದೇಶದಲ್ಲಿ) ವಾಸವಾಗದ ಹೊರತು ನೇರವಾಗಿ ಅಥವಾ ಬೇರೆ ದೇಶದ ಮೂಲಕ ಕುವೈಟ್ ಗೆ ಪ್ರವೇಶಿಸಲು ಅನುಮತಿ ಇಲ್ಲ’ ಎಂದು ಕುವೈಟ್ ನಾಗರಿಕ ವಿಮಾನಯಾನ ನಿರ್ದೇಶನಾಲಯ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.