ಕುಂದಾಪುರ ವಲಯ ಕಥೊಲಿಕ್ ಸಭಾ ಮತ್ತು ಶೆವೊಟ್ ಪ್ರತಿಷ್ಟಾನ: ಪ್ರತಿಭಾವಂತರಿಗೆ ಪುರಸ್ಕಾರ

JANANUDI.COM NETWORK


ಕುಂದಾಪುರ,ಫೆ.21: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ ರಿ. ಕುಂದಾಪುರ ಇವರಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಈ ಸಲದ ಪಂಚಾಯತ್ ಚುನಾವಣೆಯಲ್ಲಿ ವಿಜೇತರಿಗೆ ಸನ್ಮಾನ ಕಾರ್ಯಕ್ರಮವು ಫೆ.21 ರಂದು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಜರಗಿತು
ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಕುಂದಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿ ‘ಬೆಳಕು ಹೇಗೆ ಪರಿಸರಕ್ಕೆ ನಮಗೆ ಬೆಳಕು ನೀಡುತ್ತದೊ, ಹಾಗೇ ನೀವು ಪ್ರತಿಭಾವಂತ ಮಕ್ಕಳು ಮೇಲ್ದರ್ಜೆಯ ಶಿಕ್ಷಣವನ್ನು ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸಿ ಇತರರಿಗೆ ಸೇವೆ ನೀಡುವ ಮೂಲಕ ಸಮಾಜಕ್ಕೆ ಬೆಳಕಾಗಬೆಕು, ಅಂತೇಯೆ ಚುನಾವಣೆಯಲ್ಲಿ ಗೆದ್ದವರು ಜನರಿಗೆ ಉತ್ತಮವಾದ ಸೇವೆ ನೀಡಿ ನೀವೂ ಸಮಾಜಕ್ಕೆ ಬೆಳಕಾಗಬೇಕು’ ಎಂದು ಸಂದೇಶ ನೀಡಿದರು
ಮುಖ್ಯ ಅತಿಥಿಗಳಾದ ಮೂಡುಬೆಳ್ಳೆ ಸಂತ ಲಾರೆನ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎಡ್ವರ್ಡ್ ಲಾರ್ಸನ್ ಡಿಸೋಜಾ ‘ಮಕ್ಕಳು ತಮ್ಮ ಉನ್ನತಿಗೆ ಉನ್ನತ ಮಟ್ಟದ ಕನಸನ್ನು ಕಾಣಬೇಕು, ಕನಸು ಕಂಡರೆ ಸಾಲದು ಕಠಿಣ ಪ್ರಯತ್ನ ಪಡಬೇಕು, ಒಂದು ಚೆಂದದ ಮೂರ್ತಿ ಕೆತ್ತಬೇಕೆಂದು ನಿರ್ಣಯಿಸಿದರೆ, ಅದಕ್ಕೆ ಕೆತ್ತನೆಯ ಪೆಟ್ಟು ಬೀಳುವಾಗ ನೊವುಟಾಂಗುತ್ತದೆ ಎಂದು ಹಿಂಜರಿಯಬಾರದು, ಹಾಗೇ ಎಷ್ಟೇ ಬಂದರೂ, ಪ್ರಯತ್ನ ಪಟ್ಟು ನಾವು ಕಂಡ ಕನಸನ್ನು ಸಾಕಾರಗೊಳಿಸಬೇಕು’ ಎಂದು ಮನದಟ್ಟು ಮಾಡಿದರು. ಇನ್ನೊರ್ವ ಮುಖ್ಯ ಅಥಿತಿ ಕುಂದಾಪುರ ಪುರ ಸಭೆಯ ಆಫಿಸ್ ಮೆನೇಜರ್ ಮೆಬಲ್ ಡಿಸೋಜಾ ಪುರಸ್ಕಾರ,ಸನ್ಮಾನ ಗೊಂಡವರಿಗೆ ಶುಭ ಹಾರೈಸಿದರು. ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷೆ ಮೆಬಲ್ ಡಿಸೋಜಾ “ಕಥೊಲಿಕ್ ಸಭಾ ಸುಮಾರು 30 ವರ್ಷಗಳಿಂದ, ಪ್ರತಿಭಾವಂತರಿಗೆ, ರಾಜಕಾರಣಿಗಳಿಗೆ, ಮಾರ್ಗದರ್ಶನ, ಪೆÇ್ರೀತ್ಸಾಹ ನೀಡುತಾ ಬಂದಿದೆ’ ಅಂದರು.
ಎಸ್.ಎಸ್.ಎಲ್.ಸಿ. ಸಿ.ಬಿ.ಎಸ್.ಸಿ, ಪಿ.ಯು.ಸಿ. ಮತ್ತು ಎಲ್ಲಾ ರೀತಿಯ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ, ಬಿ.ಸಿ.ಎ., ಬಿಎಡ್, ಎಂಜಿನಿಯರಿಂಗ್, ಮತ್ತು ಉನ್ನತ ವ್ಯಾಸಂಗ ಮಾಡಿದವರಿಗೆ, ಹಾಗೂ ಈ ಸಲದ ಪಂಚಾಯತ್ ಚುನಾವಣೆಯಲ್ಲಿ ಗೆದ್ದವರಿಗೆ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದವರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶೆವೊಟ್ ಪ್ರತಿಷ್ಟಾನದಿಂದ ಅಸಕ್ತರಿಗೆ ಧನಸಹಾಯ ನೀಡಲಾಯಿತು.

“ಇವತ್ತು ಚುನಾವಣೆಗೆ ಸ್ಫರ್ಧಿಸಲು ಹಿಂಜರಿಯುವ ಕಾಲದಲ್ಲಿ ಚುನಾವಣಾ ಸ್ಫರ್ಧಿಸಿ ಸೋತಿತ ಅಭ್ಯರ್ಥಿಗಳನ್ನು ಈ ಸಂದರ್ಭದಲ್ಲಿ ಪ್ರೋತ್ಸಾಹನೆಗಾಗಿ ಸನ್ಮಾನಿಸಿದ್ದು ವಿಶೇಷವಾಗಿತ್ತು”


ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ನಿರ್ಗಮನ ಅಧ್ಯಕ್ಷ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್, ಶೆವೊಟ್ ಪ್ರತಿಷ್ಟಾನದ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಹೆಮ್ಮಾಡಿ ಪಂಚಾಯತ್ ಉಪಾಧ್ಯಕ್ಷೆ ಸ್ಥಾನ ಪಡೆದ ಶೈನಿ ಕ್ರಾಸ್ತಾ, ಕಥೊಲಿಕ್ ಸಭಾ ಸಹ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ, ಸಹ ಖಚಾಂಚಿ ಮೆಲ್ವಿನ್ ಡಿಮೆಲ್ಲೊ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷೆ, ಕಾರ್ಯಕ್ರಮದ ಸಂಚಾಲಕಿ ಶಾಂತಿ ಪಿರೇರಾ ಸ್ವಾಗತಿಸಿದರು. ಕುಂದಾಪುರ ವಲಯದ ಎಲ್ಲಾ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಕಾರ್ಯದರ್ಶಿ ಮೆಲ್ವಿನ್ ಪುಟಾರ್ಡೊ ವಂದಿಸಿದರು. ಪ್ರಮೀಳಾ ಡೆಸಾ ಕಾರ್ಯಕ್ರವನ್ನು ನೆಡೆಸಿಕೊಟ್ಟರು
.