JANANUDI.COM NETWORK

ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಆಡಳಿತಗೊಳಪಟ್ಟ ಕೋಣಿ ಮೂರೂರು ಶ್ರೀ ಮಹಾಲಿಂಗೇಶ್ವರ, ಉಮಾಮಹೇಶ್ವರ, ವೇಣುಗೋಪಾಲ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ನೇಮಕಗೊಳಿಸಿದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ನ್ಯೂ ಮೆಡಿಕಲ್ ಮತ್ತು ನೂತನ್ ಡ್ರೈ ಕ್ಲಿನರ್ಸ್‍ನ ಮುಖ್ಯಸ್ಥರಾದ ಲಯನ್ ದಿನಕರ ಶೆಟ್ಟಿ ಕಂದಾವರ ಅವರನ್ನು ಅಯ್ಕೆಗೊಳಿಸಿ ಅದೇಶಿಸಿದೆ. ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಅರ್ಚಕರ ಪ್ರತಿನಿಧಿ ಭಾಸ್ಕರ ಜೆ, ಐತಾಳ, ಕೆ. ನರಸಿಂಹ ಕಾರಂತ, ನಾರಾಯಣ ಆಚಾರ್, ಸಿಂಗಾರಿ ಎಸ್. ಶೆಟ್ಟಿ, ಗಣೇಶ ಕೆ. ಶ್ರೀಯಾನ್, ಅಶೋಕ ಪೂಜಾರಿ, ಸುಬ್ಬಣ್ಣ ಕೋಣಿ, ಶಾರದಾ ಕೆ. ಆಯ್ಕೆಗೊಳಿಸಿ ಆದೇಶಿಸಿದೆ. ದಿನಕರ ಶೆಟ್ಟಿಯವರು ಎಪ್ರಿಲ್ 30 ರಂದು ಅಧಿಕಾರ ಸ್ವೀಕರಿಸಿರುತ್ತಾರೆ.