ಶ್ರೀನಿವಾಸಪುರ : ತಾಲೂಕಿನಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆಯ್ಕೆಯಾಗಿ ಹತ್ತು ವರ್ಷಗಳು ಕಳದಿದೆ. ಸಂಘದ ಪದಾಧಿಕಾರಿಗಳು ಗ್ರಾಮಗಳಲ್ಲಿ ಸಂಘಗಳ ರಚನೆ, ಅವುಗಳ ಕಾರ್ಯವೈಖರಿಯ ಬಗ್ಗೆ ಪದಾಧಿಕಾರಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಸಿ.ಹೆಚ್.ಪದ್ಮಯ್ಯ ಮಾಹಿತಿ ನೀಡದರು.
ಪಟ್ಟಣದ ಮಾರತಿ ಸಭಾಭವನದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಸಂಘದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶವನ್ನು ಉದ್ಗಾಟಿಸಿ ಮಾತನಾಡಿದರು.
ಬೈರವೇಶ್ವರ ವಿದ್ಯಾನಿತೇನದ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಅನುಕೂಲವಾಗುವ ಹಾಗೂ ಗ್ರಾಮೀಣ ಭಾಗದ ಮಹಿಳೆಯರ ಕೌಶಲ್ಯ ಹೊರಹೊಮ್ಮಿಸುವ ಸಲುವಾಗಿ ಬೆನ್ನೆಲುಬಾಗಿ ನಿಂತು ಹಾಗು ಬಡಕುಟುಂಬಗಳ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸುವ ಸಲುವಾಗಿ , ಸಮಾಜಕ್ಕೆ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಚಲ್ದಿಗಾನಹಳ್ಳಿಯ ಕಸ್ತೂರಿ ಸಂಘದ ಸದಸ್ಯೆ ಗೋಪಮ್ಮ ಮಾತನಾಡಿ ಧರ್ಮಸ್ಥಳ ಸಂಘವು ಗ್ರಾಮೀಣ ಭಾಗದ ಮಹಿಳೆಯರಿಗೆ ವರದಾನವಾಗಿದೆ ಎನ್ನುತ್ತಾ, ಸಂಘವು ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕ ಸಬಲರಾಗುವಂತೆ ಹುರುದುಂಬಿಸುತ್ತಿದೆ ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ವಿ.ರವಿಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಬಂದಕ ವಿಶ್ವನಾಥ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಎನ್.ವಿ.ಜಯರಾಮೇಗೌಡ, ಮುಖಂಡ ಎಂ.ಲಕ್ಷö್ಮಣಗೌಡ, ತಾಲೂಕು ಯೋಜನಾಧಿಕಾರಿ ಗೋಪಾಲಕೃಷ್ಣ, ಪ್ರಕಾಶ್ ಕುಮಾರ್ , ಉಪಸ್ಥಿತರಿದ್ದರು.