ಮತಾಂತರ ನಿಷೇಧ ಕಾಯ್ದೆ ಅನುಮೋದನೆಯ ಮೊದಲೇ ಧರ್ಮಾಂಧರ ದುಷ್ಕ್ರತ್ಯ 160 ವರ್ಷ ಹಳೆಯ ಚರ್ಚಿನ ಪ್ರತಿಮೆಗೆ ಹಾನಿ

JANANUDI.COM NETWORK


ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮತಾಂತರ ವಿರೋಧಿ ಮಸೂದೆ ಚರ್ಚೆ ನಡೆಯುತ್ತಿದ್ದು, ಅದು ಅನುಮೋದನೆ ಆಗುವ ಮೊದಲೇ ಧಮಾರ್ಂಧ ಶಕ್ತಿಗಳ ಉಟಳ ಆರಂಭಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು 160 ವರ್ಷಗಳಷ್ಟು ಹಳೆಯ ಸೇ0ಟ್ ಜೋಸೆಫ್ ಚರ್ಚಿಗೆ ದಾಳಿ ಮಾಡಿ ಚರ್ಚಿನ ಕುಠೀರ, ಸೇಂಟ್ ಆ0ಟನಿಯ ಪ್ರತಿಮೆಯನ್ನು ಧ್ವಂಸಗೈಯ್ಯಲಾಗಿದೆ.
ಮತಾಂತರ ನಿಷೇಧ ಕಾಯ್ದೆ ಅನುಮೋದನೆಯ ಮೊದಲೇ ಧಮಾರ್ಂಧರ ದುಷ್ಕ್ರತ್ಯ 160 ವರ್ಷ ಹಳೆಯ ಚರ್ಚಿನ ಪ್ರತಿಮೆಗೆ ಹಾನಿಬೆ0ಗಳೂರಿನಿಂದ 65 ಕಿಲೋ ಮೀಟರ್ ದೂರದ ನುಸೈಪಾಳಯದಲ್ಲಿ ಈ ಚರ್ಚ್ ಇದ್ದು ಗುರುವಾರ ಬೆಳಗ್ಗೆ 5.30ಕ್ಕೆ ದಾಳಿ ನಡೆಯಿತ0ದು ಫಾದರ್ ಆಂಟನಿ ಡೆನಿಯಲ್ ಹೇಳಿದರು. ಬೆಳಗ್ಗೆ 5:40ಕ್ಕೆ ಈ ಘಟನೆ ಚರ್ಚಿನ ಅಧಿಕಾರಿಗಳ ಗಮನಕ್ಕೆ ಬಂತು. ಇಲ್ಲಿ ಇ0ತಹ ಒಂದು ದಾಳಿ ಮೊದಲ ಬಾರಿಗೆ ನಡೆದಿದೆ ಫಾದರ್ ಆಂಟನಿ ಡೆನಿಯಲ್ ತಿಳಿಸಿ, ರಾಜ್ಯದ ವಿವಿಧ ಕಡೆಗಳಲ್ಲಿ ಕ್ರೈಸ್ತರ ಚರ್ಚಿಗಳ ಮೇಲೆ ನಿರ0ತರ ದಾಳಿ ನಡೆಯುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಘಟನೆಗೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಿದ್ದಾರೆ.
ವಿಧಾನಸಭೆಯಲ್ಲಿ ಮತಾ0ತರ ನಿಷೇಧ ಕಾನೂನು ಮಂಡಿಸಲಾಗಿದ್ದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಬಲವ0ತದ ಮತಾ0ತರ ತಡೆಯಲು ಹೊಸ ಮಸೂದೆ ತರಲಾಗುತ್ತಿದೆ ಎ0ದು ಸರಕಾರ ಹೇಳುತ್ತಿದೆ. ಸಂವಿಧಾನದಲ್ಲಿ ಬಲವ0ತದ ಮತಾ0ತರ ಮಾಡಲು ಆಸ್ಪದ ಇಲ್ಲದಿರುವಾಗ, ಹಿಂದು ಸ್ವಾಮಿಗಳನ್ನು, ಸಂಘ ಪರಿವಾದದವರನ್ನು ಸಂತೋಷ ಪಡಿಸಲು, ಮತ ಭೇಟೆಯಾಡುವ ದ್ರಷ್ಟಿಯಿಂದ ಬಿಜೆಪಿ ಈ ಮಸೂದೆ ತರಲು ಪ್ರಯತ್ನಿಸುತ್ತದೆ ಎಂದು ಜನರು ಆಡಿ ಕೊಳ್ಳುತಿದ್ದಾರೆ..
ಕರ್ನಾಟಕದ ಈ ಮಸೂದೆ ಬೇರೆಡೆಗಿಂತ ಹೆಚ್ಚು ತೀವ್ರತೆಯನ್ನು ಹೊಂದಿದೆ ಎ0ದು ಟೀಕಾಕಾರರು ಹೇಳುತ್ತಿದ್ದಾರೆ. ಬೆ0ಗಳೂರು ಮತ್ತು ಇತರ ನಗರದಲ್ಲಿ ಮಸೂದೆ ವಿರುದ್ಧ ಪ್ರತಿಭಟನೆ ನಡೆದಿದೆ.