

ಕುಂದಾಪುರ,ಎ. 18: ಇಂದು ಶುಭ ಶುಕ್ರವಾರದಂದು ಬೆಳಿಗ್ಗೆ ಎಂಟಕ್ಕೆ, ಕುಂದಾಪುರ ಚರ್ಚಿನ ಇಗರ್ಜಿ ಮೈದಾನದಲ್ಲಿ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪೌಲ್ ರೇಗೊ ಶಿಲುಭೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು.. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಪಾಲನ ಮಂಡಳಿ, ಉಪಾಧ್ಯಕ್ಷರು, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ, ಧರ್ಮಭಗಿನಿಯರು, ವಾಳೆಯ ಗುರಿಕಾರರು, ಪ್ರತಿನಿಧಿಗಳು ಕುಂದಾಪುರ ಚರ್ಚಿನ ಭಕ್ತಾಧಿಗಳು ದೊಡ್ಡ ಸಂಖ್ಯೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು.








































































