ರಾಯಲ್ಪಾಡು 1 :ಈ ಚಾರ್ತರ್ಮಾಸದ ಸಮಯದಲ್ಲಿ ಭಕ್ತಿ ಮತ್ತು ತಪಸ್ಸು ಇತರ ತಿಂಗಳುಗಳಲ್ಲಿ ಮಾಡುವುದಕಿಂತ ಹೆಚ್ಚಿನ ಪುಣ್ಯವನ್ನು ಮತ್ತು ಭಕ್ತಿ ಮತ್ತು ತಪಸ್ಸಿನಿಂದ ನಮ್ಮ ಇಂದ್ರಿಯಗಳು ಮತ್ತು ಮನಸ್ಸು ಶುದ್ಧವಾಗುವುದು ಮತ್ತು ಶುದ್ಧವಾದ ಮನಸ್ಸು ಮಾತ್ರ ದೇವರಿಗೆ ಸಂಪರ್ಕ ಹೊಂದುತ್ತದೆ ಎಂದು ಚಾರ್ತಮಾಸ್ಯೆ ಸೇವಾ ಸಮಿತಿಯ ಪ್ರಧಾನ ಸಂಚಾಲಕ ಹಾಗೂ ಆಖಿಲ ಕರ್ನಾಟಕ ಬ್ರಾಹ್ಮಣರ ಸಂಘದ ಮಾಹಾ ಸಭೆಯ ಉಪಾಧ್ಯಕ್ಷ ಬಿ.ಎಸ್.ರಾಘವೇಂದ್ರಭಟ್ ಹೇಳಿದರು.
ರಾಯಲ್ಪಾಡಿನ ಮೇಧಾಗುರು ಜ್ಯೋರ್ತಿವಿಜ್ಞಾನ ಕೇಂದ್ರದಲ್ಲಿ ಗುರುವಾರ ಬೆಂಗಳೂರಿನ ಚಾರ್ತಮಾಸ್ಯೆ ಸೇವಾ ಸಮಿತಿ ವತಿಯಿಂದ ಹರಿಹರ ಮಠದ ಸ್ವಾಮಿಗಳು ಚಾರ್ತಮಾಸದ ಆಹ್ವಾನ ಪತ್ರಿಕೆಯನ್ನು ನೀಡಿ ಮಾತನಾಡಿದರು.
ಚಾರ್ತರ್ಮಾಸದ ಮೊದಲ ಆಹ್ವಾನ ಪತ್ರಿಕೆಯನ್ನು ಮೇಧಾಗುರು ಜ್ಯೋರ್ತಿವಿಜ್ಞಾನ ಕೇಂದ್ರ ಸಂಸ್ಥಪಾಕ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ ರವರಿಗೆ ವಿತರಿಸಿದರು.
ಮೇಧಾಗುರು ಜ್ಯೋರ್ತಿವಿಜ್ಞಾನ ಕೇಂದ್ರ ಸಂಸ್ಥಪಾಕ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ ಮಾತನಾಡಿ ಆತ್ಮಜ್ಞಾನದಿಂದಲೇ ಮುಕ್ತಿ ದೊರಕುವುದು ನಿಜ , ಆದರೆ ಜ್ಞಾನಮಾರ್ಗವನ್ನು ಹಿಡಿಯಲಾರದವನು ಭಗವಂತನನ್ನು ಭಕ್ತಿಯಿಂದ ಪೂಜಿಸಬೇಕು. ಭಕ್ತಿ ಸಾಮನ್ಯ ಜನರಿಗಷ್ಟೇ ಮೀಸಲಲ್ಲ ,ಭಗವಂತನ ದೃಷ್ಟಿಯಲ್ಲಿ ಬಡವ -ಶ್ರೀಮಂತನೆಂಬ ಬೇಧಬಾವವಿಲ್ಲ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸಹ ಕಾರ್ಯದರ್ಶಿ ಡಾ|| ಪಿ.ಎಸ್.ರಾಜೇಂದ್ರಪ್ರಸಾದ್, ಹರಿಹರ ಮಠದ ಸೇವಾ ಸದಸ್ಯ ಡಾ|| ಜಯಂತಿ ಆಗಸ್ತ್ಯ , ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ.ಎಸ್.ಅಂಜನ್‍ಕುಮಾರ್‍ಶರ್ಮ, ಕೆ.ಸತೀಶ್ ಶಾಸ್ತ್ರಿ, ಕೆ.ಎಸ್.ಅರುಣ್‍ಕುಮಾರ್, ಜಿಲ್ಲಾ ಸಹ ಸಂಚಾಲಕರಾದ ಎಸ್.ಸುಬ್ರಮಣ್ಯ, ನವೀನ್‍ಬಾಬು ಇದ್ದರು.