ಶ್ರೀನಿವಾಸಪುರ : ತಾಲೂಕಿನ ಜನರಲ್ಲಿ ವಿಶೇಷ ಉತ್ಸಾಹ, ಪುಳಕ, ಅವರವರ ಮುಖದಲ್ಲೂ ತೇಜಸ್ಸು, ಉತ್ಸಾಹ, ಶ್ರೀರಾಮ್ ಘೋಷಣೆಗಳು, ಒಟ್ಟಿನಲ್ಲಿ ಸೋಮವಾರ ದಿನವು ಸರ್ಕಾರಿ ರಜ ದಿನವಂತೆ ಘೋಚರವಾಗಿತ್ತು. ತಾಲೂಕಿನ ಪ್ರಮುಖ ರಸ್ತೆಗಳು ದಟ್ಟಣೆ , ಅಂಗಡಿ ಬೀದಿಗಳು ಅಘೋಷಿತ ಬಂದ್ನಂತೆ ಕಂಡು ಬಂದವು.ತಾಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ರಾಮಮಯವಾಗಿ ಕಂಡುಬಂತು.
ಅಲ್ಲದೆ ಕೆಲವು ರಾಮನ ದೇವಸ್ಥಾನಗಳಲ್ಲಿ ರಾಮನ ಪಟ್ಟಾಭಿಷೇಕ, ಕಲ್ಯಾಣೋತ್ಸಾವ , ಮೆರವಣಿಗೆ, ಭಜನೆ, ರಾಮಕೋಟಿ ಹೀಗೆ ಅನೇಕ ರೀತಿಯಲ್ಲಿ ಅಯೋದ್ಯಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ದಿನದೊಂದು ರಾಮನ ಭಕ್ತರು ರಾಮನನ್ನು ಪೂಜಿಸಿ ಆರಾಧಿಸಿದರು.
ಅರಿಕೆರೆಯ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಪಟ್ಟಾಭಿಷೇಕ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿರಥದಲ್ಲಿ ಉತ್ಸವ ವಿಗ್ರಹಗಳ ಮೆರವಣಿಗೆಯನ್ನು ಭಜನೆ ಹಾಗೂ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು . ಅರಿಕರೆ ಶ್ರೀಕೋದಂಡರಾಮಸ್ವಾಮಿ ದೇವಸ್ಥಾನ ಧರ್ಮದರ್ಶಿ ಇಂದಿರಾಭವನ್ ರಾಜಣ್ಣ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು