

ಶ್ರೀನಿವಾಸಪುರ : ಇಂದಿನ ನಾಗರೀಕರು ತಮ್ಮ ಜೀವನದ ಬಹುಪಾಲು ಸಮಯವನ್ನು ಉದ್ಯೋಗ , ವ್ಯವಹಾರ , ಮತ್ತು ಹಣ ಸಂಪಾದನೆಗಾಗಿ ವಿನಿಯೋಗಿಸುತ್ತಿದ್ದಾರೆ . ದಿನಕ್ಕೊಂದಿಷ್ಟು ಸಮಯವನ್ನು ದೇವರ ದ್ಯಾನ, ಭಜನೆಯತ್ತಾ ವಿಯೋಗಿಸಿದರೆ ಮನಸ್ಸು ಉಲ್ಲಾಸವಾಗಲು ಸಾಧ್ಯವಾಗುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ವರದಬಾಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಸೋಮವಾರ ನಡೆದ ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶನಿವಾರ ಬ್ರಹ್ಮರಥೋತ್ಸವದ ಅಂಗವಾಗಿ ಅಂಕುರಾರ್ಪಣೆ, ದ್ವಜಾರೋಹಣ, ಶೇಷವಾಹನೋತ್ಸವ , ಕಲ್ಯಾಣೋತ್ಸವ , ಗರುಡೋತ್ಸವ, ಬ್ರಹ್ಮರಥೋತ್ಸವದ ಅಂಗವಾಗಿ ಹೆಸರು ಬೇಳೆ , ಪಾನಕವನ್ನ ವಿತರಿಸಲಾಯಿತು. ವರದ ಬಾಲಾಂಜನೇಯಸ್ವಾಮಿ ದೇವಾಲಯದ ಆಡಳಿತ ಮಂಡಲಿ ಅಧ್ಯಕ್ಷ ವೈ. ಆರ್ ಶಿವಪ್ರಕಾಶ್, ಕಾರ್ಯದರ್ಶಿ ಗೋಪಿನಾಥ್ರಾವ್ ಹಾಗೂ ಸದಸ್ಯರ ನೇತೃತ್ವದಲ್ಲಿ ಕಾರ್ಯಕ್ರಮವು ನಡೆಯಿತು.