JANANUDI.COM NETWORK

ಕುಂದಾಪುರ,ಮೇ. ದೇವರಾಜ ಅರಸು ಹಾಸ್ಟೆಲ್ ಸದ್ಯ ಭಾರತೀಯ ರೆಡ್ ಕ್ರಾಸ್ ಕೊರೊನಾ ಕೇರ್ ಸೆಂಟರ್ ಆಗಿ ಇಂದಿನಿಂದ ಪರಿವರ್ತನೆ ಗೊಂಡಿದೆ. ಇದಕ್ಕೆ ಅಗತ್ಯವಿರುವ ಕುಡಿಯುವ ನೀರಿನ ವ್ಯವಸ್ತೆ ಮತ್ತುಕುಂದಾಪುರ ರೆಡ್ ಕ್ರಾಸ್ ಸಂಸ್ಥೆ ಬೆಡ್, ಹಾಸಿಗೆ, ಬೆಡ್ ಸೀಟ್, ಜಗ್ಗು, ಡಸ್ಟ್ ಬೀನ್ , ಮಾಟ್ಸ್ ಇತ್ಯಾದಿಗಳನ್ನು ಖರೀದಿಸಿ ಒದಗಿಸಿದೆ. ಒದಗಿಸಿದೆ. ನಿನ್ನೆ ಸಂಜೆ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿ ಯವರು ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ನಾಗಭೂಷಣ ಉಡುಪ ಇವರ ತಂಡ ಕ್ಕೆ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸದಸ್ಯರುಗಳಾದ ಗಣೇಶ್ ಆಚಾರ್ಯ , ಡಾ. ಸೋನಿ ಮತ್ತು ಬಶೀರ್ ಅಹಮದ್ ಹಾಜರಿದ್ದರು.