ಯುಎಇ ಯಲ್ಲಿ ಇಬ್ಬರು ಭಾರತೀಯ ಮೂಲದ ಉದ್ಯಮಿಗಳ ಬಂಧನ

JANANUDI.COM NETWORK  

ಭಾರತೀಯ ಮೂಲದ ಉದ್ಯಮಿಗಳ ಉದ್ಯಮಿಗಳಾದ  ರಾಜೇಶ್ ಗುಪ್ತಾ ಮತ್ತು ಅತುಲ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಇವರಿಬ್ಬರು ಸೋದರರಾಗಿದ್ದಾರೆ. ಇವರು ಮೂಲತಃ ಉತ್ತರ ಪ್ರದೇಶದ ಸಹಾರನ್ ಪುರ ಜಿಲ್ಲೆಯವರಾಗಿದ್ದು  ಗುಪ್ತಾ ಸಹೋದರರು ದಕ್ಷಿಣ ಆಫ್ರಿಕಾದಲ್ಲಿ ಭ್ರಷ್ಟಾಚಾರ ನಡೆಸಿದ್ದು, 2018 ರಲ್ಲಿ ದಕ್ಷಿಣ ಆಪ್ರಿಕಾದಿಂದ ಪರಾರಿಯಾಗಿ ದುಬೈನಲ್ಲಿ ನೆಲೆಸಿದ್ದರು‌.ಇವರು ದಕ್ಷಿಣ ಆಫ್ರಿಕಾದಲ್ಲಿ ಉದ್ಯಮ ಹೊಂದಿದ್ದು. ದಕ್ಷಿಣ ಆಫ್ರೀಕಾ ದೇಶದ ಮನವಿ ಮೇರೆಗೆ ರಾಜೇಶ್ ಮತ್ತು ಅತುಲ್ ಗುಪ್ತಾ ಅವರನ್ನು ಯುಎಇ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಮುಂದಿನ ಕ್ರಮಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ದಕ್ಷಿಣ ಆಫ್ರಿಕಾದ ನ್ಯಾಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.