

ಭಾರತದ ದಂಪತಿಗಳು ಐಫೋನ್ ಖರಿದೀಸಲು ಅವರು ಹೆತ್ತ ಎಂಟು ತಿಂಗಳ ಹಸುಕೂಸನ್ನೆ ಮಾರಾಟ ಮಾಡಿದ ಘಟನೆ ಭಾರತದ ಪೂರ್ವ ರಾಜ್ಯವಾದ ಪಶ್ಚಿಮ ಬಂಗಾಳದಿಂದ ವರದಿಯಾಗಿದೆ. ರೀಲ್ಗಳನ್ನು ತಯಾರಿಸಲು ದುಬಾರಿ ಐಫೋನ್ ಬೇಕಾಗಿದ್ದಕ್ಕೆ ಮಗುವನ್ನು ಮಾರಟಮಾಡಲಾಗಿದೆ ಈ ವಿಲಕ್ಷಣ ಘಟನೆ ರಾಜ್ಯದ ಉತ್ತರ 24 ಪರಗಣ ಜಿಲ್ಲೆಯದ್ದಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು, ಮಗುವಿನ ತಾಯಿ ಸತಿ ಎಂಬ ಹೆಸರಿನ ಮಹಿಳೆಯನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಮಗುವಿನ ತಂದೆ ಜಯದೇವ್ ತಲೆಮರೆಸಿಕೊಂಡಿದ್ದಾನೆ.
ಪನಿಹಟಿ ಗಾಂಧಿನಗರ ಪ್ರದೇಶದಲ್ಲಿನ ಅವರ ನೆರೆಹೊರೆಯವರು ಈ ದಂಪತಿಯ ನಡವಳಿಕೆಯಲ್ಲಿ ಹಠಾತ್ ಬದಲಾವಣೆ ಮತ್ತು ಮಗುವಿನ ಅನುಪಸ್ಥಿತಿಯನ್ನು ಗಮನಿಸಿ ಗಮನಿಸಿದ ದಂಪತಿಯ ಮೇಲೆ ಅನುಮಾನಗೊಂಡರು
ದಂಪತಿಗಳು ಹಿಂದೆ ತಮ್ಮ ಜೀವನ ಸಾರಲು ಹೆಣಗಾಡುತ್ತಿದ್ದರು ಮತ್ತು ಇದ್ದಕ್ಕಿದ್ದಂತೆ ಅವರು ಐಫೋನ್ ಖರೀದಿಸಿದರು ಮತ್ತು ರೀಲ್ಗಳನ್ನು ಚಿತ್ರೀಕರಿಸಲು ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಮಾಡಿದರು.ಮಗು ಎಲ್ಲಿದೆ ಎಂದು ನೆರೆಹೊರೆಯವರು ಕೇಳಿದಾಗ, ದಂಪತಿಗಳು ಹಣಕ್ಕಾಗಿ ತಮ್ಮ ಮಗನನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿ, ಖಾರ್ದಾ ಪ್ರದೇಶದಲ್ಲಿ ಮಹಿಳೆಯೊಬ್ಬರಿಂದ ಮಗುವನ್ನು ರಕ್ಷಿಸಲಾಗಿದೆ. ಮೊಬೈಲ್ ಫೋನ್ ಖರೀದಿಸಲು ಹಣಕ್ಕಾಗಿ ದಂಪತಿಗಳು ತಮ್ಮ ಮಗನನ್ನು ಈ ಮಹಿಳೆಗೆ ಮಾರಾಟ ಮಾಡಿದ್ದರು. ಪ್ರಿಯಾಂಕಾ ಘೋಷ್ ಈ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ.