JANANUDI.COM NETWORK
ದೇಶದಲ್ಲಿ ಕೊರೊನಾ ಅಲೆ ದಾಂದಲೆ ಮಾಡುತಿದ್ದು, ಜೊತೆಗೆ ಚಂಡಮಾರುತದ ಅಲೆಗಳು ಕೂಡ ದಾಂದಲೆ ಮಾಡಲಿಕ್ಕೆ ತೊಡಗಿವೆ ವಿವಿಧ ರಾಜ್ಯಗಳಲ್ಲಿ ಭಾರಿ ಅವಾಂತರ ಮಾಡಿದ್ದ ತೌಕ್ತೆ ಚಂಡಮಾರುತ ಈಗಷ್ಟೇ ಹಾನಿ ಮಾಡಿ ಹೋಗಿದ್ದು, ಇದರ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತದ ಬೀಸುವುದೆಂದು ಪೋರ್ಟ್ ಬ್ಲೇರ್ ನಿಂದ ಹವಮಾನ ಇಲಾಖೆ ಎಚ್ಚರಿಸಿದೆ.
ಪೋರ್ಟ್ ಬ್ಲೇರ್,ಮೇ : ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಹಾಗೂ ನೆರೆಯ ಉತ್ತರ ಅಂಡಮಾನ್ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ಅಧಿಕೃತ ಎಚ್ಚರಿಕೆ ಹೊರಡಿಸಿದೆ.
ಈ ತಿಂಗಳ 21ರಿಂದ 23ರವರೆಗೆ ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಹಾಗೂ ನೆರೆಯ ಉತ್ತರ ಅಂಡಮಾನ್ ಸಮುದ್ರದಲ್ಲಿ ವಾಯಭಾರ ಕುಸಿತವಾಗಲಿದ್ದು, ಇದು ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ ಇರುವುದಾಗಿ ಹವಾಮಾನ ಮುನ್ಸೂಚನೆ ತಿಳಿಸಿದ್ದು, ಇದರ ಪ್ರಭಾವದಿಂದ ಗಾಳಿಯ ವೇಗ ಹೆಚ್ಚಾಗಿ ಈ ತಿಂಗಳ 21ರಿಂದ 26ರವರೆಗೆ ಅಂಡಮಾನ್ ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಲಿದೆ. ಮೀನುಗಾರಿಕೆ ಇಲಾಖೆಗಳು ಮತ್ತು ನಾಗರಿಕ ಆಡಳಿತಗಳೊಂದಿಗೆ ಭಾರತೀಯ ಕರಾವಳಿ ಪಡೆ ಹವಾಮಾನ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇ 23 ರ ಆಸುಪಾಸಿನಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ
ಈ ಚಂಡಮಾರುತವು ಬಂಗಾಳಕೊಲ್ಲಿ ಸಮುದ್ರ ಭಾಗದಿಂದ ಬರಲಿದೆ. ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಎರಡರಲ್ಲೂ ಸಮುದ್ರದ ಮೇಲ್ಮೈ ಉಷ್ಣಾಂಶ ಸುಮಾರು ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಇದು ಚಂಡಮಾರುತದ ಸೂಚನ ವಾತಾವರಣವಾಗಿದ್ದು, ಮೇ 23ರ ಹೊತ್ತಿಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಹುಟ್ಟಿ, ಅದು ಭಾರತದ ಒರಿಸ್ಸಾ, ಮಯನ್ಮಾರ್ ಕಡೆಗೆ ಸಾಗುವ ಸಾಧ್ಯತೆ ಇದೆ ಎಂದು ಹವಮಾನ ತಜ್ನರು ಅಭಿಪ್ರಾಯ ಪಟ್ಟಿದ್ದಾರೆ. ಈ ಯಾಸ್ ಚಂಡಮಾರುತ ಭಾರತಕ್ಕೆ ಅಪ್ಪಳಿಸುವ ಸಂಭವ ಕಡಿಮೆ ಕಡಿಮೆ ಎಂದು ಕೂಡ ತಿಳಿಸಿದ್ದಾರೆ.