ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಮಂಗಳವಾರ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿರುವ ಭೈರವೇಶ್ವರ ವಿದ್ಯಾ ನಿಕೇತನದ ವಿದ್ಯಾರ್ಥಿನಿ ಕೆ.ಪೂರ್ವಿ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಸಿಆರ್‍ಪಿ ಎಂ.ಅಮರನಾಥ್, ಮುಖ್ಯ ಶಿಕ್ಷಕ ವೆಂಕಟರೆಡ್ಡಿ, ಬಾಲಕಿಯ ತಂದೆ ಕೃಷ್ಣಾರೆಡ್ಡಿ, ತಾಯಿ ಬಯಮ್ಮ ಇದ್ದರು.