ರಾಜ್ಯದಲ್ಲಿ ಶಾಲಾ ಮಕ್ಕಳಿಗೆ 2021-22 ಸಾಲಿನ ದಸರಾ ರಜೆ ಘೋಷಣೆ

JANANUDI.COM NETWORK


ಬೆಂಗಳೂರು: ಪ್ರಸ್ತೂತ 2021-22 ಅಕಾ/ದೆಮಿಕ್ ವರ್ಷದ ದಸರಾ ರಜೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಘೋಶಿಸಿದೆ. ಕರ್ನಾಟಕದ ಎಲ್ಲಾ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಆಕ್ಟೋಬರ್ 10 ರಿಂದ 20 ರವರೆಗೆ ದಸರಾ ರಜೆ ಇದೆಯೆಂದು ಆದೇಶ ಹೊರಡಿಸಲಾಗಿದೆ.
ಮುಂದಿನ ವರ್ಷ ಮೇ ತಿಂಗಳ 1ನೇ ತಾರೀಖಿನಿಂದ 28ನೇ ತಾರೀಖಿನವರೆಗೆ ಬೇಸಿಗೆ ರಜೆಯೂ ಇರಲಿದೆ ಎಂದು ತಿಳಿಸಿದೆ.
ಆಕ್ಟೋಬರ್ 10 ರಿಂದ 20 ರವರೆಗೆ ಒಟ್ಟು 10 ದಿನಗಳ ಕಾಲ ರಾಜ್ಯದ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದ್ದು. ಇದು 10 ದಿನಗಳ ರಜೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಲಿದೆ. ಇನ್ನು ಇದೇ ಸಮಯದಲ್ಲಿ 2021-2022 ಶೈಕ್ಷಣಿಕ ವರ್ಷದ ಬೇಸಗಿಗೆ ರಜೆಯ ಬಗ್ಗೆಯೂ ಮಾಹಿತಿ ನೀಡಿದೆ. ಶಾಲಾ ಮಕ್ಕಳಿಗೆ 2022ರ ಮೇ 1 ರಿಂದ ಮೇ 28 ರವರೆಗೆ ಬೇಸಿಗೆ ರಜೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಅನ್ವಯಿಸಲಿದೆ. 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಮಕ್ಕಳಿಗೆ 66 ದಿನಗಳ ಕಾಲ ರಜೆಗಳನ್ನು ನೀಡಲಾಗಿದ್ದು.. ಒಟ್ಟು 223 ದಿನಗಳು ಕಲಿಕಾ ಪ್ರಕ್ರಿಯೆಗೆ ಮೀಸಲಿಡಲಾಗಿದೆ.