ಅನಧಿಕೃತವಾಗಿ ಅಕ್ರಮಿಸಿಕೊಂಡಿದ್ದ ಜಮೀನು ತೆರವುಗೊಳಿಸಿ ಗ್ರಾಮಕ್ಕೆ ಬೇಕಾದ ಅಂಗನವಾಡಿ, ಸಮುದಾಯಭವನ, ಡೈರಿ, ಸೌಲಭ್ಯಕ್ಕಾಗಿ ಬಳಸಲು ತೀರ್ಮಾನ.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ತಾಲ್ಲೂಕಿನ ನೆಲವಂಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಕ್ಕರಂಗೇಪಲ್ಲಿ ಗ್ರಾಮದಲ್ಲಿ 4 ಎಕರೆ 10 ಗುಂಟೆ ಪಂಚಾಯಿತಿಗೆ ಸೇರಿದ ಜಮೀನಿನಲ್ಲಿ ಕೆಲವರು ಅನಧಿಕೃತವಾಗಿ ಅಕ್ರಮಿಸಿಕೊಂಡಿದ್ದರು, ಇದನ್ನು ತೆರವುಗೊಳಿಸಿ ಗ್ರಾಮಕ್ಕೆ ಬೇಕಾದ ಅಂಗನವಾಡಿ ಕೇಂದ್ರ, ಸಮುದಾಯಭವನ, ಡೈರಿ, ಈ ಸೌಲಭ್ಯಗಳನ್ನು ಒದಗಿಸಲು ಜಾಗವನ್ನು ಗುರುತಿಸಿ ಸಾರ್ವನುಮತದಿಂದ ತೀರ್ಮಾನಿಸಲಾಯಿತು.
ತಾಲ್ಲೂಕಿನ ನೆಲವಂಕಿ ಗ್ರಾಮ ಪಂಚಾಯಿತಿಯ ಚಿಕ್ಕರಂಗೇಪಲ್ಲಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷಣಿ ಗೌತಮಿಮುನಿರಾಜು ಈ ಗ್ರಾಮಕ್ಕೆ ಸರ್ಕಾರದಿಂದ ಈಗಾಗಲೇ ಅಂಗನವಾಡಿ ಕೇಂದ್ರ ಸಮುದಾಯಭವನ ಮಂಜೂರಾಗಿದ್ದು ಜಾಗ ಗ್ರಾಮಸ್ಥರು ನೀಡದ ಕಾರಣ ಸರ್ಕಾರಕ್ಕೆ ವಾಪಸ್ಸು ಹೋಗಲಾಗಿತ್ತು. ನಿಮ್ಮ ಗ್ರಾಮಕ್ಕೆ ಮಂಜೂರಾಗಿರುವ ಸೌಲಭ್ಯಗಳನ್ನು ಯಾಕೇ ನಿರಾಕರಿಸಿತ್ತೀರಿ? ಈ ಅಂಗನವಾಡಿ ಕೇಂದ್ರದಿಂದ ನಿಮ್ಮ ಊರಿಗೆ ನಿಮ್ಮ ಮಕ್ಕಳಿಗೆ ಅನುಕೂಲವಾಗುತ್ತದೆ. ಇದನ್ನು ಕಟ್ಟಲು ನೀವು ಎಲ್ಲರು ಜಾಗವನ್ನು ಗುರುತಿಸುವುದಕ್ಕೆ ಸಹಕಾರ ನೀಡಬೇಕೆಂದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಕಾರ್ಯಾಲಯದಿಂದ ಪಂಚಾಯಿತಿಗೆ ಆದೇಶ ಬಂದಿದ್ದು, ಯಾರೂ ಗ್ರಾಮ ಠಾಣೆ ಬಿಟ್ಟು ಹೊರಗಡೆ ಸ್ವಂತ ಸರ್ವೆ ನಂಬರ್‍ಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ಸಕ್ರಮಗೊಳಿಸಲು ಅವಕಾಶವಿದ್ದು, ಗ್ರಾಮಸ್ಥರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಸರ್ವೆ ನಂಬರ್‍ನಲ್ಲಿ ಕಟ್ಟಿದ ಮನೆಗಳಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ. ಎಂದರು.
ಈ ಗ್ರಾಮ ಪಂಚಾಯಿತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಮನೆ ಮತ್ತು ನಿವೇಶನಗಳ ಚೆಕ್ಕುಬಂದಿ ಮತ್ತು ವಿಸ್ತೀರ್ಣ ಗುರುತಿಸಿ ದಾಖಲು ಮಾಡಲು ಈ ಗ್ರಾಮದಿಂದಲೆ ಪ್ರಾರಂಭ ಮಾಡಿದ್ದೇವೆ. ಈ ಚಿಕ್ಕರಂಗೇಪಲ್ಲಿ ಗ್ರಾಮದಲ್ಲಿ ಕೆಲಸಗಳು ಪ್ರಾರಂಭ ಮಾಡಿದರೆ ಎಲ್ಲವೂ ಶುಭವಾಗುತ್ತದೆ. ಗ್ರಾಮಸ್ಥರು ಮನೆ ಮತ್ತು ನಿವೇಶನಗಳ ಬಾಕಿಯ ಕಂದಾಯ ಕಟ್ಟಿ ಚೆಕ್ಕುಬಂದಿ ವಿಸ್ರ್ತೀಣವನ್ನು ದಾಖಲೆ ಮಾಡಿಸಲು ಗ್ರಾಮಸ್ಥರು ಸಹಕರಿಸಬೇಕೆಂದು ಕೋರಿದರು
.

ಗ್ರಾಮದ ಹಿರಿಯ ಮುಖಂಡ ವೆಂಕಟೇಶ್ ಮೂರ್ತಿ ಮಾತನಾಡಿ ಇರುವ ಜಾಗದಲ್ಲಿಯೇ ಸರ್ಕಾರದಿಂದ ಬಂದಿರುವ ಅಂಗನವಾಡಿ ಕೇಂದ್ರ, ಸಮುದಾಯಭವನ, ಡೈರಿ ಕಟ್ಟಿಕೊಳ್ಳೋಣ ಉಳಿದ ಜಾಗವನ್ನು ಸರಿಸಮಾನವಾಗಿ ಹಂಚೋಣ ಗ್ರಾಮಕ್ಕೆ ಮಂಜೂರಾಗಿರುವ ಸೌಲಭ್ಯಗಳು ಬಿಡುವುದು ಬೇಡ ಎಲ್ಲರೂ ಸಹಕಾರದಿಂದ ಈ ಕೆಲಸ ಮಾಡೋಣ ಎಂದರು. ಇದೇ ಸಂದರ್ಭದಲ್ಲಿ ಪಿಡಿಓ ಎಂ.ಗೌಸ್‍ಸಾಬ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ. ಮಂಜುನಾಥ್ ನೆಲವಂಕಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷಣಿ ಮಮತಸೋಮಶೇಖರ್, ಸದಸ್ಯರಾದ ಕೊತ್ತಪಲ್ಲಿ ರಘುನಾಥರೆಡ್ಡಿ, ಸಿ.ಎಂ. ರಮೇಶ್, ಗುಂದೇಡಿ ನಾರಾಯಣಸ್ವಾಮಿ, ಮಂಜುಳ ಸತ್ಯನಾರಾಯಣರೆಡ್ಡಿ, ರಮಣಾರೆಡ್ಡಿ, ಮುಖಂಡರಾದ ಕಲ್ಲೂರು ವೆಂಕಟರತ್ನಂ, ಬೀಡಗಾನಹಳ್ಳಿ ರಾಮಕೃಷ್ಣ, ಕೊಂಡಪ್ಪ, ಲಕ್ಷ್ಮೀಪತಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.