ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತ್ ನ ವಿರೋಧ ಪಕ್ಷದ ನಾಯಕರ ಶ್ರೀನಿವಾಸ್ ಅಮೀನ್ ರವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಸಭೆ ಕರೆಯಲಾಯಿತು, ಶ್ರೀನಿವಾಸ ಅಮಿನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೋಟ ಕಾಂಗ್ರೆಸ್ ನ ಅಧ್ಯಕ್ಷರಾದ ಶಂಕರ್ ಎ ಕುಂದರ್ ರವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಸಿಕೊಂಡು 2008 & 2013ರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ಮತ್ತು 2023ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಎರಡು ಬಾರಿ ಟಿಕೆಟ್ ವಂಚಿತರಾಗಿರುತ್ತಾರೆ, ಹಾಗೆ ಅದರ ಮಧ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ, ಆ ಎಲ್ಲ ಸಂದರ್ಭದಲ್ಲಿ ಇವರಿಗೆ ಅವಕಾಶ ಸಿಗದೇ ಇದ್ದಾಗ ಇವರ ನಾಯಕರಾದ ಓಸ್ಕರ ಫೆರ್ನಾಂಡಿಸ್ ರವರ ಮನವಲಿಕೆಯಿಂದ ಇವರನ್ನು ಸಮಾಧಾನಪಡಿಸಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನವನ್ನು ನೀಡುವೆ ಎಂದು ಹಾಗೆ ಕರ್ನಾಟಕ ಸರ್ಕಾರದ ಕೆ.ಎಫ್. ಡಿ.ಸಿ ನಲ್ಲಿ ನಿಗಮದಲ್ಲಿ ಚೇರ್ಮನ್ ಹುದ್ದೆ ನೀಡುವ ಕುರಿತು ಸಮಾಧಾನಪಡಿಸಿದರು. 2013 ರ ಸಿದ್ದರಾಮಯ್ಯ ಸರ್ಕಾರದಲ್ಲಿ ನಿಗಮ ಮಂಡಳಿ ಸ್ಥಾನಕ್ಕೆ ಇವರು ಆಕಾಂಕ್ಷಿಯಾಗಿದ್ದು ಕೊನೆಗಳಿಗೆನಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿರುತ್ತದೆ. ಅಂದು ಪಕ್ಷದ ನಾಯಕರ ಮೇಲೆ ಬೇಸರಗೊಂಡಿದ್ದ ಶಂಕರ್ ಎ ಕುಂದರ್ ಅವರಿಗೆ ಇದುವರೆಗೂ ಪಕ್ಷದಲ್ಲಿ ಯಾವುದೇ ಉನ್ನತ ಹುದ್ದೆ ನೀಡುವಲ್ಲಿ ವಿಫಲವಾದರು ಎಂದು ಖಂಡಿಸಿದರು. ಹಾಗೆ ಹನೆಹಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ರಮಾನಂದ ಶೆಟ್ಟಿ ಬಾರಕೂರ್ ರವರು ಮಾತಾಡಿ ಉಡುಪಿ ಜಿಲ್ಲೆಯಲ್ಲಿ ಪಕ್ಷದ ಸ್ವಂತ ಬ್ಲಾಕ್ ಆಫೀಸಿದ್ರೆ ಅದು ಕೋಟ ಬ್ಲಾಕ್ ಕಾಂಗ್ರೆಸ್, ಇದರ ಸಂಪೂರ್ಣ ಜವಾಬ್ದಾರಿ ಹೊತ್ತು ಪಕ್ಷಕ್ಕಾಗಿ ಒಂದು ಸ್ವಂತ ಆಫೀಸ್ ಇರಬೇಕು ಎಂದು ಕನಸು ಹೊತ್ತು ಅದನ್ನು ಅನುಷ್ಠಾನಗೊಳಿಸಿ ಇಂದು ಪಕ್ಷದ ನಾಯಕರೆ ಇವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ದೊರಕಿಸಿಕೊಡದೆ ಇರುವುದು ತುಂಬಾ ಬೇಸರ ತಂದಿದೆ ಎಂದು ಹೇಳಿದರು.
ಹಾಗೆ ಕೋಟ ಬ್ಲಾಕ್ ಕಾಂಗ್ರೆಸ್ ನ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ವಡ್ಡರ್ಸೆ ರವರು ಮಾತನಾಡಿ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ನಾಯಕರು ಇಲ್ಲದಿರುವ ಸಂದರ್ಭದಲ್ಲಿ ನಮ್ಮಂತ ತಳಮಟ್ಟದ ಕಾರ್ಯಕರ್ತರುಗಳಿಗೆ ಹೆಗಲುಕೊಟ್ಟು ನಿಂತಂತ ವ್ಯಕ್ತಿ ಶಂಕರ್ ಎ ಕುಂದರವರು, ಪಕ್ಷ ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕೈಗೆ ನೇರವಾಗಿ ಸಿಗುವ ವ್ಯಕ್ತಿ ಶಂಕರ್ ಎ ಕುಂದರ್ ರವರು, ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರ ನಾಯಕತ್ವದ ಕೊರತೆಯಿಂದ ಇವತ್ತು ಉಡುಪಿ ಜಿಲ್ಲೆಗೆ ಯಾವುದೇ ಸ್ಥಾನಮಾನ ಸಿಗದಿರುವುದು ಬೇಸರ ತಂದಿದೆ. ಈ ಬಾರಿ ಲೋಕಸಭಾ ಚುನಾವಣೆ ಒಳಗೆ ಕಾಂಗ್ರೆಸ್ ಪಕ್ಷದಲ್ಲಿ ಶಂಕರ್ ಎ ಕುಂದರವರಿಗೆ ಉನ್ನತ ಸ್ಥಾನಮಾನ ದೊರಕದೆ ಇದ್ದ ಸಂದರ್ಭದಲ್ಲಿ ನಾವೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ಅಧ್ಯಕ್ಷರಾದ ದಿನೇಶ್ ಬಂಗೇರ ಗುಂಡ್ಮಿ ಅವರು ಮಾತನಾಡಿ ಶಂಕರ ಎ ಕುಂದರ್ ರವರು 2008 ರಿಂದ ಸತತವಾಗಿ ಜಿಲ್ಲಾ ಪಂಚಾಯತ್ ವಿಧಾನಸಭೆ, ವಿಧಾನ ಪರಿಷತ್ ಹಾಗೂ ನಿಗಮ ಮಂಡಳಿಗೆ ಆಕಾಂಕ್ಷಿಯಾಗಿದ್ದರು, ಪ್ರತಿ ಬಾರಿಯೂ ಅವಕಾಶ ತಪ್ಪಿದರೂ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು, ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಪ್ರಭಾವಿ ಆಕಾಂಕ್ಷಿಗಳಲ್ಲಿ ಅತಿ ಹಿರಿಯ ಮುಖಂಡರು ಇವರಾಗಿದ್ದು ಪಕ್ಷ ಕೊನೆಗಳಿಗೆಯಲ್ಲಿ ಪ್ರಸಾದ್ ರಾಜ್ ಕಾಂಚನ ಅವರಿಗೆ ಟಿಕೆಟ್ ನೀಡಿದಾಗ ಸೌಜನ್ಯಕ್ಕೂ ಕೂಡ ಪ್ರಸಾದ್ ರಾಜ್ ಕಾಂಚನ ರಾಗಲಿ, ಜಿಲ್ಲಾ ಮಟ್ಟದ ಪ್ರಮುಖ ನಾಯಕರಾಗಲಿ ದೂರವಾಣಿಯಲ್ಲಿ ಕೂಡ ಸಂಪರ್ಕಿಸದೆ ಇವರನ್ನು ಕಡೆಗಣಿಸಿದ್ದರಿಂದ ಅಂದೆ ರಾಜೀನಾಮೆ ನಿರ್ಧಾರವನ್ನು ಕೈಗೊಂಡಿದ್ದರು, ಆದರೆ ನನ್ನ ರಾಜೀನಾಮೆಯಿಂದ ಕುಂದಾಪುರ ಕ್ಷೇತ್ರಕ್ಕೆ ಮೊದಲು ಟಿಕೆಟ್ ಖಚಿತ ಪಡಿಸಿ ಕೊಂಡಿರುವ ದಿನೇಶ್ ಹೆಗಡೆಯವರ ಗೆಲುವಿಗೆ ತೊಂದರೆ ಆಗಬಾರದು ಅನ್ನೋ ದೃಷ್ಟಿಯಿಂದ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡರು, ಈ ಬಾರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾದ ತಕ್ಷಣ ಮತ್ತೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಜಿಲ್ಲಾ ಮಟ್ಟದ ಎಲ್ಲಾ ನಾಯಕರ ಶಿಫಾರಸು ಪತ್ರದೊಂದಿಗೆ ತನ್ನ ವೈಯಕ್ತಿಕ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರಿಗೆ ಸಲ್ಲಿಸಿದರು, ಆದರೆ ಪಕ್ಷದ ಜಿಲ್ಲಾ ಮಟ್ಟದ ನಾಯಕರು ವೈಯಕ್ತಿಕವಾಗಿ ಇವರ ಜೊತೆಗೆ ತೆರಳಿ ಇವರ ಹಿರಿತನವನ್ನು ಹಾಗೂ ಇವರ ಪಕ್ಷ ನಿಷ್ಠೆಯ ಬಗ್ಗೆ ರಾಜ್ಯಮಟ್ಟದ ನಾಯಕರ ಬಳಿ ತಿಳಿಸಿ ಇವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ದೊರಕಿಸಿ ಕೊಡುವಲ್ಲಿ ಮನಸ್ಸು ಮಾಡಲಿಲ್ಲ, ಹಾಗೆಯೇ ಸರ್ಕಾರ ರಚನೆಯಾದ ತಕ್ಷಣ ಜಿಲ್ಲಾ ಕಾಂಗ್ರೆಸ್ ಆದೇಶದಂತೆ ಮಾನ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಬ್ಲಾಕ್ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನ, ಸರಕಾರಿ ಆಸ್ಪತ್ರೆ, ಭೂ ನ್ಯಾಯ ಮಂಡಳಿ ಹೀಗೆ ಹಲವಾರು ಸಮಿತಿಗಳಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ನೆಲೆಯಲ್ಲಿ ಹಿರಿಯರನ್ನು ಗುರುತಿಸಿ ನೇಮಕ ಮಾಡಲಾಗಿದೆ. ಈ ಪಟ್ಟಿಯನ್ನು ಪರಾಜಿತ ಅಭ್ಯರ್ಥಿಯವರು ಪದೇ ಪದೇ ಬದಲಿಸಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿರುವುದನ್ನು ಖಂಡಿಸಿ ಬೇಸರದಿಂದ ರಾಜೀನಾಮೆ ನಿರ್ಧಾರಕ್ಕೆ ಬಂದಿರುತ್ತಾರೆ, ಇವರ ನಿರ್ಧಾರವನ್ನು ಬೆಂಬಲಿಸಿ ನಾವು ಇಂದು ಎಲ್ಲಾ ಗ್ರಾಮೀಣ ಸಮಿತಿಯ ಘಟಕ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಯ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.
ಕೋಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಬಂಗೇರವರು ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರನ್ನ ಗುರುತಿಸಿ ಅವರಿಗೆ ಹುದ್ದೆಯನ್ನು ನೀಡದೇ ಇದೊಂದು ಘೋರ ದುರಂತ, ನಮ್ಮ ನಾಯಕರಾದ ಶಂಕರ್ ಎ ಕುಂದರ್ ರವರಿಗೆ ಯಾವುದೇ ಸ್ಥಾನಮಾನವನ್ನ ನೀಡದೇ ಇದ್ದಲ್ಲಿ ಇನ್ನೂ ಒಂದು ವಾರದಲ್ಲಿ ಶಂಕರ್ ಕುಂದರವರು ಕರೆಯಲಿರುವ ಬೃಹತ್ ಬೆಂಬಲಿಗರ ಸಮಾವೇಶದಲ್ಲಿ ಅವರನ್ನು ಬೆಂಬಲಿಸಿ, ಅವರ ಜೊತೆಗೂಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವ್ಯಾರು ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಹಾಗೆ ಶಂಕರ್ ಎ ಕುಂದರ್ ರವರ ಎಲ್ಲ ಅಭಿಮಾನಿ ಬಳಗದವರು ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಿ ತಟಸ್ಥ ನಿಲುವನ್ನು ತೋರಪಡಿಸಲಿದ್ದೇವೆ ಎಂದು ಹೇಳಿದರು.
ಇಂದಿನ ಶಂಕರ್ ಎ ಕುಂದರ್ ರವರ ಬೆಂಬಲಿಗರ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಕೋಟ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ರೇಖಾ ಪಿ ಸುವರ್ಣ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ರವಿ ಕಾಮತ್ ಗುಂಡ್ಮಿ ಪುನೀತ್ ಪೂಜಾರಿ ಪಾರಂಪಳ್ಳಿ ಹಾಗೂ ಗಣೇಶ್ ಬಡಹೋಳಿ, ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ರವಿ ಪೂಜಾರಿ ಕೋಟ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುನಿಲ್ ಮಡಿವಾಳ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ನಜಿರ್ ಬಾರ್ಕೂರು, ಸೋಶಿಯಲ್ ಮೀಡಿಯಾ ಘಟಕದ ಅಧ್ಯಕ್ಷರಾದ ಶ್ರೀಕಾಂತ್ ಆಚಾರ್ಯ, ಪ್ರಚಾರ ಸಮಿತಿ ಘಟಕದ ಅಧ್ಯಕ್ಷರಾದ ವಾಸು ಕೋಟ್ಯಾನ್, ಪಾಂಡೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ವೈ ಬಿ ರಾಘವೇಂದ್ರ, ಪಾಂಡೇಶ್ವರ ಗ್ರಾಮೀಣ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ರಮೇಶ್ ಆಚಾರ್ ಪಾಂಡೇಶ್ವರ, ಕಿಶನ್ ಘಟಕದ ಅಧ್ಯಕ್ಷರಾದ ಸುಧಾಕರ್ ಪೂಜಾರಿ ಐರೋಡಿ, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿಗಾರ್ ಗುಂಡ್ಮಿ, ಕೋಟತಟ್ಟು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಕೆಚ್ಗೆರೆ, ಬಾರ್ಕುರ್ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ನಾರಾಯಣ ರಾವ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಮಾಜಿ ಸದಸ್ಯರಾದ ಮಹಾಬಲ ಮಡಿವಾಳ, ಪಾಂಡೇಶ್ವರ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರ ವಿಠಲ ಪೂಜಾರಿ ಸಾಸ್ತಾನ, ಕೋಟ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರ ಆಚಾರ್ ಕೋಟ, ಇಂಟಕ್ ಘಟಕದ ಅಧ್ಯಕ್ಷರಾದ ದೇವೇಂದ್ರ ಗಾಣಿಗ ಕೋಟ, ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ವಿಜಯ ಪೂಜಾರಿ ಸಾಸ್ತಾನ, ಪಾಂಡೇಶ್ವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಅವಿನಾಶ್ ಪೂಜಾರಿ, ವಡ್ದರ್ಸೆ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರ ಶೆಟ್ಟಿ, ಬಿಲ್ಲಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಕುಲಾಲ್,
ಕಾಂಗ್ರೆಸ್ ಮುಖಂಡರಾದ ಸುರೇಶ್ ಶೆಟ್ಟಿ ಕಾವಡಿ, ಸೂರ್ಯಕಾಂತ್ ಶೆಟ್ಟಿ ಚಿತ್ರಪಾಡಿ, ಮಂಜುನಾಥ್ ಪೂಜಾರಿ ಗೋಳಿಬೆಟ್ಟು,ಸಾಸ್ತಾನ ವ್ಯವಸಾಯಕ ಸಹಕಾರಿ ಬ್ಯಾಂಕ್ ನ ಸದಸ್ಯರಾದ ಆನಂದ ಗಾಣಿಗ ಐರೋಡಿ, ಕಾರ್ಕಡ ತೆಂಕೋಳಿ ಬೂತ್ ಅಧ್ಯಕ್ಷರಾದ ಸುರೇಶ್ ನೆಲ್ಲಿಬೆಟ್ಟು,
ಕಾಂಗ್ರೆಸ್ ಮುಖಂಡರಾದ ರತ್ನಾಕರ್ ಪೂಜಾರಿ ಪಾರಂಪಳ್ಳಿ, ಶಂಕರ್ ಪೂಜಾರಿ ಪಾರಂಪಲ್ಲಿ, ರಘು ಭಂಡಾರಿ ಸಾಲಿಗ್ರಾಮ,
ಪ್ರತಾಪ್ ಪೂಜಾರಿ ಪಾರಂಪಳ್ಳಿ, ಗಣೇಶ್ ಪೂಜಾರಿ ಕೋಟ, ಚಂದ್ರ ಪೂಜಾರಿ ಕೋಟ, ರತ್ನಾಕರ್ ಶ್ರೀಯಾನ್ ಪಡುಕೆರೆ, ಪ್ರತಾಪ್ ಪೂಜಾರಿ ಪಾರಂಪಳ್ಳಿ, ರಾಜು ಗುಂಡ್ಮಿ, ಮಂಜುನಾಥ್ ಪೂಜಾರಿ ಗುಂಡ್ಮಿ, ನಾಗೇಂದ್ರ ಪುತ್ರನ್ ಕೋಟ, ಭದ್ರ ಗೆಂಡೆಕೆರೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು, ಗಣೇಶ್ ಕೆ ನೆಲ್ಲಿಬೆಟ್ಟು ಸ್ವಾಗತಿಸಿ ಧನ್ಯವಾದಿಸಿದರು.