ಕೊರೊನಾ ಸಂಕಷ್ಟ, ಆಮ್ಲಜನಕ ಸಿಲಿಂಡರ್ ವ್ಯವಸ್ಥೆಗೊಳಿಸಿದರೂ, ಬಿಜೆಪಿ ಶಾಸಕನ ಮಗನ ಸಾವು – ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ; ಬಿಜೆಪಿ ಶಾಸಕನ ಆರೋಪ

JANANUDI.COM NETWORK

[ಬಿಜೆಪಿಯ ಶಾಸಕನಿಗೇ ಇಂತಹ ಅವಸ್ಥೆ ಆದರೆ, ಸಾಮನ್ಯ ರೋಗಿಗಳ ಅವಸ್ಥೆ ಎನು? ಅವರ ಕುಟುಂಬದ ಪರಿಸ್ಥಿತಿ ಎನು, ಚಿಕಿತ್ಸೆ ಸರಿಯಾಗಿ ದೊರಕುತ್ತದೇಯೊ, ವೈದ್ಯರು ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೊ?  ಕೇವಲ ದಾದಿಯವರನ್ನು ರೋಗಿ ಬಳಿ ಕಳುಹಿಸಿಕೊಟ್ಟು ನಿರ್ದೇಶನ ಕೊಡುತ್ತಾರೊ? ಕೊರೊನಾ ರೋಗಕಿಂತ ಮೊದಲು,ಆ ರೋಗಿಗಳಿಗಿದ್ದ ರೋಗಗಳಿಗೆ, ಸಮಸ್ಯೆಗಳಿಗೆ ಸರಿಯಾದ ಮದ್ದು ದೊರಕುತ್ತದೆಯೊ? ಅಥವ ವೀಪರೀತವಾದ ಸ್ತೀರಾಯ್ಡ್ ಮದ್ದುಗಳನ್ನು ಕೊಟ್ಟು ದೇಹದ ಅಂಗ ವೈಫಲ್ಯಗಳಾಗುವಂತ್ತೆ, ತಪ್ಪು ಚಿಕಿತ್ಸಾ ಕಾರಣದಿಂದ ಸಾವುಗಳು ಸಂಭವಿಸುತ್ತವೆಯೊ? ಪ್ಲಾಸ್ಮ ಥೆರೆಪಿಯಅಡ್ಡ ಪರಿಣಾಮದಿಂದ (ಈಗ ಈ ಥೆರಪಿ ನೀಷೆಧಿಸಲಾಗಿದೆ)ಸತ್ತವರೆಷ್ಟು, ಇದರಿಂದಾಗಿ ಗುಣಮುಖರಾದರೂ, ಇತರ ಅಡ್ಡ ಪರಿಣಾಮಗಳೇನು? ಆದ ಅನಾಹುತಗಳೆಷ್ಟು? ಎಂಬಿತ್ಯಾದಿ ಅಧ್ಯನಯಗಳು ನಡೆಯಬೇಕಾಗಿದೆ]

ಉತ್ತರ ಪ್ರದೇಶ: ಕೊರೊನಾ ವೈರಸ್‌ನಿಂದ ಪುತ್ರ ಮೃತಪಟ್ಟಿರುವುದಕ್ಕೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಜ್‌ಕುಮಾರ್ ಅಗರವಾಲ್ ದೂರಿದ್ದಾರೆ. ಅಲ್ಲದೆ ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯ ವಿರುದ್ಧ ದೂರು ನೀಡಿದರೂ, ಉತ್ತರ ಪ್ರದೇಶದ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

     ಹರ್ದೊಯ್ ಜಿಲ್ಲೆಯ ಸಂಡಿಲಾದ ಬಿಜೆಪಿ ಶಾಸಕ ರಾಜ್‌ಕುಮಾರ್ ಅಗರವಾಲ್ ಅವರ ಪುತ್ರ ಆಶಿಶ್, ಕೋವಿಡ್ ಸೋಂಕು ತಗುಲಿ ಏಪ್ರಿಲ್ 26ರಂದು ಕಾಕೋರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಏಪ್ರಿಲ್ 26ರ ಬೆಳಗ್ಗೆ ಆಮ್ಲಜನಕ ಮಟ್ಟವು 94 ಆಗಿತ್ತು. ಅವರು ಆಹಾರ ಸೇವಿಸುತ್ತಿದ್ದರು ಮತ್ತು ನಮ್ಮೊಂದಿಗೆ ನಿಯಮಿತವಾಗಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಸಂಜೆಯ ವೇಳೆಗೆ ಆಮ್ಲಜನಕ ಮಟ್ಟ ಕಡಿಮೆಯಾಗುತ್ತಿದೆ ಎಂದು ವೈದ್ಯರು ಹೇಳಿದರು. ನಾವು ಹೊರಗಿನಿಂದ ಆಮ್ಲಜನಕ ಸಿಲಿಂಡರ್ ಅನ್ನು ವ್ಯವಸ್ಥೆಗೊಳಿಸಿದೆವು. ಆದರೆ ವೈದ್ಯರು ಆಮ್ಲಜನಕವನ್ನು ರೋಗಿಗೆ ಒದಗಿಸಲು ಅನುಮತಿಸಲಿಲ್ಲ. ಇದರಿಂದಾಗಿ ತನ್ನ ಮಗ ನಿಧನರಾದರು ಎಂದು ಆರೋಪಿಸಿದ್ದಾರೆ.

ಆಸ್ಪತ್ರೆ ಆಡಳಿತ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗ ಮೃತಪಟ್ಟಿದ್ದಾನೆ. ಮಗನಿಗೆ ನ್ಯಾಯ ಒದಗಿಸುವುದಕ್ಕಾಗಿ ಎಫ್‌ಐಆರ್ ದಾಖಲಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಆ ದಿನ ಆಸ್ಪತ್ರೆಯಲ್ಲಿ ಏಳು ಮಂದಿ ಮತಪಟ್ಟಿದ್ದಾರೆ. ನಾನು ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದೆ. ಆದರೂ ದೂರು ದಾಖಲಿಸಲಿಲ್ಲ. ಇನ್ನು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಬೇಕು ಮತ್ತು ನನ್ನ ಮಗನ ಸಾವಿಗೆ ಯಾರು ಕಾರಣ ಎಂಬುದನ್ನು ಕಂಡುಹಿಡಿಯಬೇಕು. ತಪ್ಪಿತ್ತಸ್ಥ ವೈದ್ಯರಿಗೆ ಶಿಕ್ಷೆಯಾಗಬೇಕು ಎಂಬುದು ನನ್ನ ಬೇಡಿಕೆಯಾಗಿದೆ ಎಂದು ಆಗ್ರಹಿಸಿದ್ದಾರೆ.ಬಿಜೆಪಿಯ ಶಾಸಕನಿಗೆ ಇಂತಹ ಅವಸ್ಥೆ ಆದರೆ, ಸಾಮನ್ಯ ರೋಗಿಗಳ ಅವಸ್ಥೆ ಎನು, ಅವರ ಕುಟುಂಬದ ಪರಿಸ್ಥಿತಿ ಎನು, ಚಿಕಿತ್ಸೆ ಸರಿಯಾಗಿ ದೊರಕುತ್ತದೇಯೊ, ವೈದ್ಯರು ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೋ,  ವ ಕೇವಲ ದಾದಿಯವರನ್ನು ಕಳುಹಿಸಿಕೊಟ್ಟು, ನಿರ್ದೇಶನ ನೀಡುತ್ತಾರೋ, ಕೊರೊನಾ ರೋಗಕಿಂತ ಮೊದಲು,ಆ ರೋಗಿಗಳಿಗಿದ್ದ ರೋಗಗಳಿಗೆ, ಸಮಸ್ಯೆಗಳಿಗೆ ಮದ್ದು ದೊರಕುತ್ತದೆಯೋ, ಅಥವ ವೀಪರೀತವಾದ ಸ್ತೀರಾಯ್ಡ್ ಮದ್ದುಗಳನ್ನು ಕೊಟ್ಟು ದೇಹದ ಅಂಗ ವೈಫಲ್ಯಗಳಾಗುವಂತ್ತೆ,ಚಿಕಿತ್ಸೆಯ ಕಾರಣದಿಂದ ಸಾವುಗಳು ಸಂಭವಿಸುತ್ತವೋ, ಪ್ಲಾಸ್ಮ ಥೆರೆಪಿಯಿಂದ ಅಡ್ಡ ಪರಿಣಾಮದಿಂದ (ಈಗ ಈ ಥೆರಪಿ ನೀಷೆಧಿಸಲಾಗಿದೆ)ಸತ್ತರೆವಷ್ಟು, ಇದರಿಂದಾಗಿ ಗುಣಮುಖರಾದರೂ, ಇತರ ಅಡ್ಡ ಪರಿಣಾಮಗಳಿಂದ ಅನಾಹುತಗಳೆಷ್ಟು ಎಂಬಿತ್ಯಾದಿ ಪರೀಶಿಲನೆಗಳು ನಡೆಯ ಬೇಕಿದೆ.