ದೇಶದ ಸಹಕಾರಿ ರಂಗದ ಇತಿಹಾಸದಲ್ಲೇ ಡಿಸಿಸಿ ಬ್ಯಾಂಕ್ ಕ್ರಾಂತಿಕಾರಿ ಹೆಜ್ಜೆ ನ .೧ ರಿಂದ ಪ್ಯಾಕ್ಸ್‌ಗಳ ಗಣಕೀಕರಣ ವಹಿವಾಟು – ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : – ಸಂಪೂರ್ಣ ಗಣಕೀಕರಣದ ಮೂಲಕ ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಪ್ಯಾಕ್‌ಗಳ ದೈನಂದಿನ ವಹಿವಾಟು ನ .೧ ರಿಂದ ಆರಂಭಗೊಳ್ಳಲಿದ್ದು , ಒಂದೇ ಬಾರಿಗೆ ಕೇಂದ್ರ ಕಚೇರಿಯಲ್ಲೇ ಮಾಹಿತಿ ಲಭ್ಯವಾಗುವ ಮೂಲಕ ದೇಶದ ಸಹಕಾರ ರಂಗದ ಇತಿಹಾಸದಲ್ಲೇ ಹೊಸ ಪ್ರಯೋಗದೊಂದಿಗೆ ಕ್ರಾಂತಿಕಾರಿ ಹೆಚ್ಚ ಇಡಲು ಡಿಸಿಸಿ ಬ್ಯಾಂಕ್ ಸಜ್ಜಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು . ಭಾನುವಾರ ಬೆಳಗ್ಗೆ ನಡದ ಅವಿಭಜಿತ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಗಣಕೀಕರಣದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , ಶೇ .೧೦೦ ಪಾರದರ್ಶಕ ವಹಿವಾಟಿಗೆ ಇದೊಂದು ಮೈಲಿಗಲ್ಲಾಗಲಿದೆ ಮತ್ತು ಸೊಸೈಟಿಗಳಲ್ಲೂ ಬ್ಯಾಂಕಿಂಗ್ ಸಿಸ್ಟಮ್‌ನಂತೆಯೇ ವಹಿವಾಟು ನಡೆಯಲಿದೆ ಎಂದರು .
ನ .೧ ರಿಂದ ಪ್ಯಾಕ್ಸ್‌ಗಳ ಗಣಕೀಕರಣ ವಹಿವಾಟು
ಅ .೧೫ ರೊಳಗಾಗಿ ಪ್ಯಾಕ್ಸ್‌ಗಳ ೨೦೨೦-೩೧ ನೇ ಸಾಲಿನ ಗಣಕೀಕೃತ ಲೆಕ್ಕ ಪುಸ್ತಕಗಳನ್ನು ಅಂತಿಮಗೊಳಿಸಿ ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸತಕ್ಕದ್ದು ಮತ್ತು ಅ .೩೧ ರೊಳಗಾಗಿ ೨೦೧-೨ ನೇ ಸಾಲಿನ ವೋಚರ್ ಎಂಟ್ರಿ ಮುಗಿಸುವ ಮೂಲಕ ನ .೧ ರ ರಾಜ್ಯೋತ್ಸವ ದಿನದಿಂದ ಎಲ್ಲಾ ಫ್ಯಾಕ್ಸ್‌ಗಳ ವರದಿಗಳು ಶಾಖೆಗಳಲ್ಲಿ ಹಾಗೂ ಕೇಂದ್ರ ಕಛೇರಿಯಲ್ಲಿ ಏಕಕಾಲದಲ್ಲಿ ಜನರೇಟ್ ಆಗುವಂತೆ ಕ್ರಮ ಕೈಗೊಳ್ಳಲು ಗಣಕೀಕರಣದ ಉಸ್ತುವಾರಿ ವಹಿಸಿರುವ ವಿ – ಸಾಫ್ಟ್ ಸಿಬ್ಬಂದಿಗೆ ತಾಕೀತು ಮಾಡಿದರು .
ದೇಶದಲ್ಲೇ ಈ ಪ್ರಯತ್ನ ಮೊದಲನೆಯದ್ದಾಗಿದ್ದು , ಸೊಸೈಟಿಗಳ ಸದಸ್ಯತ್ವ , ಪ್ರತಿದಿನದ ಸಾಲ ವಿತರಣೆ , ಸಾಲ ಮರುಪಾವತಿ , ಉಳಿತಾಯ ಖಾತೆ ತೆರೆಯುವಿಕೆ , ಸಾಲ ಬಾಕಿ ಎಲ್ಲಾ ಅಂಶಗಳು ಬೆರಳತುದಿಯಲ್ಲಿ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲೇ ಲಭ್ಯವಾಗಲಿದ್ದು , ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ , ಪಾರದರ್ಶಕ ವ್ಯವಸ್ಥೆ ಬಲಗೊಳ್ಳಲಿದೆ ಎಂದು ತಿಳಿಸಿದರು .
ರೈತರು , ಮಹಿಳಾ ಸ್ವಸಹಾಯ ಸಂಘಗಳ ತಾಯಂದಿರು ಸಾಲ ಪಡೆಯಲಮರುಪಾವತಿ ಮತ್ತಿತರ ಕಾರಣಗಳಿಗಾಗಿ ಅನುಭವಿಸುತ್ತಿದ್ದ ತೊಡಕುಗಳು ಮಾಯವಾಗಿ ಪ್ರತಿ ಹಂತದಲ್ಲೂ ಪಾರದರ್ಶಕತೆ ಮೂಡಲಿದೆ ಎಂದು ತಿಳಿಸಿದರು .


ಗಣಕೀಕರಣಕ್ಕೆ ಸಂದಿಸದಿದ್ದರೆ ಕ್ರಮ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೈದ್ರಾಬಾದಿನಿಂದ ಆನ್‌ಲೈನ್ ಸಭೆಯಲ್ಲಿ ಪಾಲ್ಗೊಂಡಿದ್ದ ವಿ – ಸಾಫ್ಟ್ ಕಂಪನಿ ಉಪಾಧ್ಯಕ್ಷರಾದ ಶೇಷಗಿರಿಭಟ್ ಹಾಗೂ ಸುರೇಶ್‌ಅವರು ಅ .೩೧ ರೂಳಗೆ ಸಂಪೂ ರ್ಣ ಗಣಕೀಕರಣ , ವೋಚರ್ ಎಂಟ್ರಿ , ಆಡಿಟ್ ಮುಗಿಸಿಕೊಡುವುದಾಗಿ ಭರವಸೆ ನೀಡಿ , ಪ್ಯಾಕ್ಸ್‌ಗಳ ಸ್ಪಂದನೆಗೆ ಮನವಿ ಮಾಡಿದರು . ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು , ಗಣಕೀಕರಣ ಕಾರ್ಯಕ್ಕೆ ಸ್ಪಂದಿಸದ ಸೊಸೈಟಿಗಳಿಗೆ ಸಾಲ ನೀಡುವುದಿಲ್ಲ ಎಂದು ಎಚ್ಚರಿಸಿದ ಅವರು , ಸ್ಪಂದಿಸದ ಕೆಜಿಎಫ್ ತಾಲ್ಲೂಕಿನ ಕೆಂಪಾಪುರ ಸೊಸೈಟಿಮಾಲೂರು ತಾಲ್ಲೂಕಿನ ಹಸಂಡಹಳ್ಳಿನೂಟ್‌ವೇ , ಮತ್ತಿತರ ಸೊಸೈಟಿಗಳ ಮಾಹಿತಿ ಪಡೆದು ಅಲ್ಲಿನ ಸಿಇಒರನ್ನು ಕೇಂದ್ರ ಕಚೇರಿಗೆ ಕರೆಯಿಸಿ ಇಲ್ಲೇ ಪ್ರಕ್ರಿಯೆ ನಡೆಸಲು ಸೂಚಿಸಿದರು . ಈ ವಿಜಯದಶಮಿ ವೇಳೆಗೆ ೧೮೫ ಸೊಸೈಟಿಗಳ ಪೈಕಿ ೧೫೦ ಸೊಸೈಟಿಗಳ ಗಣಕೀಕರಣ ಮುಗಿಸುವುದಗಿ ಹೇಳಿದ ವಿ – ಸಾಫ್ಟ್‌ ಅಧಿಕಾರಿಗಳ ಮಾತನ್ನು ಒಪ್ಪದ ಅಧ್ಯಕ್ಷರು ಅ .೩೧ ರೊಳಗೆ ಶೇ .೧೦೦ ಸಾಧನೆಯಾಗಿರಬೇಕು ಎಂದು ತಾಕೀತು ಮಾಡಿದರು . ಇದಕ್ಕೆ ಉತ್ತರಿಸಿದ ವಿ – ಸಾಫ್ಟ್ ಸಿಬ್ಬಂದಿ ಈಗಾಗಲೇ ಶೇ .೭೦ ರಷ್ಟು ಗಣಕೀಕರಣ ಕಾರ್ಯ ಮುಗಿದಿದ್ದು , ಇನ್ನು ಕೇವಲ ಶೇ .೩೦ ಗಣಕೀಕರಣ ಕಾರ್ಯವನ್ನು ಅ .೩೧ ಕ್ಕೆ ಮುನ್ನಾ , ಮುಗಿಸುವುದಾಗಿ ತಿಳಿಸಿ , ಗಣಕೀಕರಣಕ್ಕೆ ಸ್ಪಂದಿಸದ ಸೊಸೈಟಿಗಳ ಸಿಇಒಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಮನವಿ ಮಾಡಿದರು . ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಅ .೩ ರಂದು ಬೆಳಗ್ಗೆ ೧೦ ಗಂಟೆಗೆ ಗಣಕೀಕರಣ ಕಾರ್ಯದಲ್ಲಿ ಸಮಸ್ಯಾತ್ಮಕವಾಗಿರುವ ಸೊಸೈಟಿಗಳ ಸಿಇಒಗಳು ಮತ್ತು ಕಂಪ್ಯೂಟರ್ ಆಪರೇಟರ್‌ಗಳ ಸಭೆ ಕರೆಯಲು ಸೂಚಿಸಿದರು . ಆನ್‌ಲೈನ್ ಸಭೆಯಲ್ಲಿ ಬ್ಯಾಂಕಿನ ಎಜೆಎಂ ಶಿವಕುಮಾರ್ , ಜಬ್ಬಾರ್ , ಅಮೀನಾ , ವಿ – ಸಾಪ್ ಉಪಾಧ್ಯಕ್ಷರಾದ ಶೇಷಗಿರಿಭಟ್ , ಸುರೇಶ್ , ಅಧಿಕಾರಿಗಳಾದ ವಿಶ್ವಪ್ರಸಾದ್ , ಮದನ್ ಸೇರಿದಂತೆ ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಬ್ಯಾಂಕ್ ಶಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು .

ಹೆಚ್ಚು ಮಹಿಳೆಯರಿಗೆ ಸಾಲ ಟೀಕೆಗೆ ಕೆಲಸವೇ ಉತ್ತರ

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗೋವಿಂದಗೌಡರು , ಸಾಲ ವಿತರಣೆಯಲ್ಲಿ ರಾಜಕೀಯಜಾತಿಪಕ್ಷಬೇಧ ಮಾಡಲು ಸಾಧ್ಯವೇ ಇಲ್ಲ , ನಬಾರ್ಡ್ ನಿಯಮಗಳಡಿ ಮಹಿಳಾ ಸ್ವಸಹಾಯ ಸಂಘ ರಚಿಸಿಕೊಂಡು ಸಾಲಕ್ಕೆ ಅರ್ಜಿ ಹಾಕಿದ ಎಲ್ಲಾ ಸಂಘಗಳಿಗೂ , ತಾಯಂದಿರಿಗೂ ಸಾಲ ನೀಡಿದ್ದು , ದೇಶದಲ್ಲೇ ಅತಿ ಹೆಚ್ಚು ಮಹಿಳೆಯರಿಗೆ ಸಾಲ ನೀಡಿದ ಹೆಗ್ಗಳಿಕೆ ಕೋಲಾರ ಡಿಸಿಸಿ ಬ್ಯಾಂಕಿನದ್ದಾಗಿದೆ ಎಂದರು . ಈ ಸಂಬಂಧ ಯಾರೇ ನನ್ನ ಹಾಗೂ ಬ್ಯಾಂಕಿನ ಬಗ್ಗೆ ಮಾತನಾಡಿದರೂ ನಾವು ತಪ್ಪು ಮಾಡಿಲ್ಲ , ಎಲ್ಲಾ ಟೀಕೆಗಳಿಗೂ ನಾವು ನಮ್ಮ ಆಡಳಿತ ಮಂಡಳಿ ಪ್ರಾಮಾಣಿಕ ಕೆಲಸದ ಮೂಲಕವೇ ಉತ್ತರ ನೀಡುತ್ತೇವೆ , ಟೀಕೆಗಳಿಗೆ ಎಂದೂ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು . ಕೆಲಸ ಮಾಡೋರ ಬಗ್ಗೆ ಟೀಕೆಗಳು ಸಾಮಾನ್ಯ , ಎಲ್ಲರ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ , ಯಾರಿಗೂ ಟೀಕೆಯ ಮೂಲಕ ಉತ್ತರ ನೀಡೊಲ್ಲ ಕೆಲಸ ಮಾಡಿ ತೋರಿಸುತ್ತೇವೆ ಎಂದರು