ಕೃಷಿಕರ ಮಗಳು ಗ್ರಾಮೀಣ ಪ್ರತಿಭೆ ಸಿವಿಲ್ ಜಡ್ಜ್ ಆಗಿ ಆಯ್ಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ನಂಬಿಗಾನಹಳ್ಳಿ ಸುಷ್ಮಾ

ಕೋಲಾರ,ಮಾ.14: ಕರ್ನಾಟಕ ಉಚ್ಚ ನ್ಯಾಯಾಲಯದ 2021ನೇ ನೇ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2021 ರಲ್ಲಿ ಹೊರಡಿಸಲಾದ ಅಧಿಸೂಚನೆಯಂತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಮಾಲೂರಿನ ನಂಬಿಗಾನಹಳ್ಳಿ ಸುಷ್ಮಾ ಅವರು ಆಯ್ಕೆಯಾಗಿದ್ದಾರೆ.
ಮಾಲೂರು ತಾಲೂಕಿನ ನಂಬಿಗಾನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಸುಷ್ಮಾ ಸಿವಿಲ್ ಜಡ್ಜ್ ಆಗುವ ಮೂಲಕ ಸಾಧನೆ ಮಾಡಿದ್ದಾರೆ.
ಸುಷ್ಮಾರವರು ಚಿಕ್ಕ ಮರಿಯಪ್ಪ ಹಾಗೂ ನಾರಾಯಣಮ್ಮ ದಂಪತಿಗಳ ಪುತ್ರಿಯಾಗಿದ್ದಾರೆ.
ತಾಲೂಕಿನ ನಂಬಿಗಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದರ ವರೆಗೂ ಹಾಗೂ ದೊಡ್ಡಶಿವಾರ ಗ್ರಾಮದಲ್ಲಿ 6ರಿಂದ 10ರವರೆಗೆ, ಮಾಲೂರು ಬಾಲಕಿಯರ ಕಾಲೇಜಿನಲ್ಲಿ ಪಿಯುಸಿ, ಮಾಲೂರು ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ.
ನಂತರ ಕೋಲಾರದ ಬಸವಶ್ರೀ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿರುತ್ತಾರೆ. ಮಾಲೂರಿನ ಹಿರಿಯ ವಕೀಲರಾದ ಎಂ ಮುನಿರಾಜು ಅವರ ಕಚೇರಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ವಕೀಲ ತರಬೇತಿ ವೃತ್ತಿಯಲ್ಲಿ ಸಾಗಿ ಇಂದು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿವಿಲ್ ಜಡ್ಜ್ ಹುದ್ದೆಗೆ ಆಯ್ಕೆಯಾಗಿದ್ದಾರೆ.