

ಕುಂದಾಪುರ :- ವಿದುಷಿ ಸಹನಾರೈ ಅವರ ಮುಳ್ಳಿಕಟ್ಟೆಯಲ್ಲಿ ನಡೆಯಲ್ಪಡುವ ನೃತ್ಯ ತರಗತಿಯಲ್ಲಿ ಅಭ್ಯಾಸಸುವ ವಿದ್ಯಾರ್ಥಿಗಳಿಂದ 5 ಶಾಸ್ತ್ರಿಯ ನೃತ್ಯಗಳಾದ ಗಜವದನ ಬೇಡುವೆ, ಪುಷ್ಪಾಂಜಲಿ, ಭಾಗ್ಯದ ಲಕ್ಷ್ಮಿ ಬಾರಮ್ಮ, ಉಮಾಮಹೇಶ್ವರಿ ಜತಿಶ್ವರ , ವಿವಿಧ ಬಗೆಯ ನೃತ್ಯದಲ್ಲಿ 43 ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಗೆಜ್ಜೆ ಕಟ್ಟುವುದರೊಂದಿಗೆ ನರ್ತಿಸಿ ಸಂತೋಷಪಟ್ಟರು ಸಾಂಸ್ಕೃತಿಕ ಪ್ರೀಯ ಪ್ರೇಕ್ಷಕರನ್ನು ಕೂಡ ಸಂತೋಷ ಪಡುವಂತೆ ನೃತ್ಯ ಅಭ್ಯಾಸಿಸುವ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನೀಡಿದರು.
ಆರಾಟೆ ಉಮಲ್ತಿಯಮ್ಮ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ.
ಉಮಲ್ತಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಸಹಭಾಗಿತ್ವ ಮತ್ತು ವಿದ್ಯಾರ್ಥಿಗಳಿಗೆ ವೇದಿಕೆ ನೀಡುವುದರ ಮೂಲಕ ಒಂದು ಭಾರತೀಯ ಸಾಂಸ್ಕೃತಿಕ ನೃತ್ಯಕ್ಕೆ ಮನ್ನಣೆ ನೀಡಿರುವುದು ದೇವಸ್ಥಾನದ ಆಡಳಿತ ಮಂಡಳಿಯು ಪ್ರಸಂಶನೀಯ ಕಾರ್ಯ ಮಾಡಿರುತ್ತದೆ.
ವಿದ್ಯಾರ್ಥಿಗಳ ಪಾಲಕರು ನೃತ್ಯ ನಿರ್ದೇಶಕಿ, ವಿದುಷಿ ಸಹನಾ ರೈಯವರ ಅಚ್ಚುಕಟ್ಟಾದ ಕಾರ್ಯಕ್ರಮ ನಿರ್ವಹಣೆ ಬಗ್ಗೆ ಪ್ರಶಂಶಿಸಿದರು.
