ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜೂ.15: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ತಿರುಮಲಹಟ್ಟಿ ಗ್ರಾಮದ ದಲಿತ ಯುವಕನಿಗೆ 75 ಸಾವಿರ ದುಡ್ಡು ಕೊಟ್ಟು, ಸುಮಾರು 5 ವರ್ಷದಿಂದ ದಿನ್ನೇರಿ ಹಾರೋಹಳ್ಳಿ ಗ್ರಾಮದ ವಕ್ಕಲಿಗ ಸಮುದಾಯಕ್ಕೆ ಸೇರಿದ ನವೀನ್ ಎಂಬುವ ವ್ಯಕ್ತಿ ಅವರು ಇಟ್ಟಿಗೆ ಕಾರ್ಖಾನೆಯಲ್ಲಿ, ಜಮೀನಿನಲ್ಲಿ ಕೆಲಸ ಮಾಡಿಸಿಕೊಂಡು, ದಬ್ಬಾಳಿಕೆ ನಡೆಸಿ, ಮನಬಂದಂತೆ ಹೊಡೆದು, ಮಾನಸಿಕ ಹಿಂಸೆ ನೀಡಿ, ಜೀತದ ಮೂಲಕ ಮನಬಂದಂತೆ ನಡೆಸಿಕೊಳ್ಳುತ್ತಿದ್ದರು.
ಈ ವಿಚಾರ ಅಂಬೇಡ್ಕರ್ ಸೇವಾ ಸಮಿತಿಗೆ ತಿಳಿದ ತಕ್ಷಣ ಆ ಯುವಕನನ್ನು ಜೀತ ಪದ್ದತಿಯಿಂದ ಮುಕ್ತಗೊಳಿಸಲಾಯಿತು ಎಂದು ಅಂಬೇಡ್ಕರ್ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ ಸಂದೇಶ್ ಹೇಳಿದರು.
