ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ದಲಿತ ಸಂಘಟನೆಗಳು ಗುರಿ ಸಾಧನೆಗೆ ಸಾಂಘಿಕ ಪ್ರಯತ್ನ ನಡೆಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನದಲ್ಲಿ ಕನರ್ಾಟಕ ದಲಿತ ಬುದ್ಧ ಸೇನೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಬುದ್ಧ ಜಯಂತಿ ಸಮಾರಂಭದಲ್ಲಿ ಮಾತನಾಡಿ, ದಲಿತ ವರ್ಗದ ಬವಣೆ ಸ್ವತ: ಅನುಭವಿಸಿದ ಡಾ. ಬಿ.ಆರ್.ಅಂಬೇಡ್ಕರ್, ವ್ಯವಸ್ಥೆ ಬಗ್ಗೆ ಬೇಸರಗೊಂಡಿದ್ದರು. ಅಸಮಾನತೆ ಸಹಿಸದ ಅವರು, ತಮ್ಮ ಮೂಲ ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸಿದರು ಎಂದು ಹೇಳಿದರು.
ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಹುಟ್ಟಿದರಾದರೂ, ಆ ಧರ್ಮದ ಅನುಯಾಯಿಯಾಗಿ ಸಾಯಲು ಇಷ್ಟಪಡಲಿಲ್ಲ. ಬುದ್ಧನ ವ್ಯಕ್ತಿತ್ವ ಹಾಗೂ ಬೌದ್ಧ ಧರ್ಮದ ಮಾನವೀಯ ಸ್ಪಂದನ ಅವರನ್ನು ಆಕಷರ್ಿಸಿದವು. ಬುದ್ಧನ ಜ್ಞಾನದ ಬೆಳಕಲ್ಲಿ ಹೊಸ ಬದುಕು ಕಟ್ಟಿಕೊಡರು. ಮಾನವೀಯತೆಗೆ ಮೊತ್ತೊಂದು ಹೆಸರಾಗಿ ಬಾಳಿದರು ಎಂದು ಹೇಳಿದರು.
ಅವರ ದೂರದೃಷ್ಟಿಯ ಸಂವಿಧಾನ ದೇಶವನ್ನು ಒಂದಾಗಿ ಉಳಿಸಲು ಶಕ್ತವಾಯಿತು. ತುಳಿತಕ್ಕೆ ಒಳಗಾದ ವರ್ಗಗಳು ನಿಧಾನವಾಗಿ ಮೇಲೇಳಲು ಸಾಧ್ಯವಾಯಿತು. ಸಾಮಾಜಿ ನ್ಯಾಯಕ್ಕಾಗಿ ಹೋರಾಡುವ ಶಕ್ತಿ ದೊರೆಯಿತು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ದಲಿತ ಮುಖಂಡರಾದ ವರ್ತನಹಳ್ಳಿ ವೆಂಕಟೇಶ್, ರಾಮಾಂಜಮ್ಮ, ಚಲಪತಿ ಮತ್ತಿತರರು ಇದ್ದರು.