ಶ್ರೀನಿವಾಸಪುರ : ಕರ್ನಾಟಕ ರಾಜ್ಯದ ಕೃಷಿ ರಂಗದಲ್ಲಿ ಹೈನುಗಾರಿಕೆ ಕ್ಷೇತ್ರ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಹೈನುಗಾರಿಕೆ ಬಹುತೇಕ ರೈತಾಪಿ-ಕೃಷಿ ಕೂಲಿಕಾರರ ಕುಟುಂಬಗಳ ಆರ್ಥಿಕ ಮೂಲವು ಆಗಿದೆ. ಮಹಿಳೆಯರ ಶ್ರಮವೇ ಪ್ರಧಾನವಾಗಿರುವ ಈ ಹೈನುಗಾರಿಕೆಯು ಆನೇಕ ಬಿಕ್ಕಟ್ಟುಗಳನ್ನು ಎದುರುಸುತ್ತಿದೆ ಎಂದು ರಾಜ್ಯ ಹಾಲು ಉತ್ಪಾದಕರ ರೈತರ ಕ್ಷೇಮಾಭಿವೃದ್ಧಿ ಸಂಘ ಸಂಚಾಲಕ ಪಿ.ಆರ್.ಸೂರ್ಯನಾರಾಯಣ ಒತ್ತಾಯಿಸಿದರು.
ಪಟ್ಟಣದ ಕೋಚಿಮುಲ್ ಶ್ರೀನಿವಾಸಪುರ ತಾಲೂಕು ಶಾಖಾ ಘಟಕದ ಮುಂಭಾಗ ಸೋಮವಾರ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ರೈತರ ಕ್ಷೇಮಾಭಿವೃದ್ಧಿ ಸಂಘ ಹಾಗು ಕರ್ನಾಟಕ ಪ್ರಾಂತ ರೈತ ಸಂಘದವತಿಯಿಂದ ಮುಖ್ಯ ಮಂತ್ರಿಗಳಿಗೆ ಇಳಿಕೆ ಮಾಡಿರುವ ಹಾಲಿನ ಧರವನ್ನು ಕೂಡಲೇ ವಾಪಸ್ಸು ಪಡೆಯಲು ಮನವಿ ಪ್ರತವನ್ನು ಶಾಖಾ ವ್ಯವಸ್ಥಾಪಕರಾದ ಮುನಿರಾಜುರವರಿಗೆ ಸಲ್ಲಿಸಿ ಮಾತನಾಡಿದರು.
ಕೆಪಿಆರ್ಎಸ್ ತಾಲೂಕು ಅಧ್ಯಕ್ಷ ಪಾತಕೋಟೆ ನವೀನ್ ಕುಮಾರ್ ಮಾತನಾಡಿ ಕೂಡಲೆ ಬಾಕಿ ಉಳಿಸಿಕೊಂಡಿರುವ ಪೆÇ್ರೀತ್ಸಾಹಧನ ಬಿಡುಗಡೆ ಮಾಡಿ, ರಾಜ್ಯದ ಸಹಕಾರಿತತ್ವದ ಹೈನುಗಾರಿಕೆ ಸಂರಕ್ಷಿಸಿ ಉತ್ಪಾದಕರನ್ನು ಉಳಿಸಲು ಸರ್ಕಾರ ಮುಂದಾಗಬೇಕೆಂದು ರಾಜ್ಯದ ಹಾಲು ಉತ್ಪಾದಕರ ಆಗ್ರಹವಾಗಿದೆ.
ಗೌರವಾಧ್ಯಕ್ಷ ಎನ್.ವೀರಪ್ಪರೆಡ್ಡಿ, ಕೆಪಿಆರ್ಎಸ್ನ ತಾಲೂಕು ಪ್ರದಾನ ಕಾರ್ಯದರ್ಶಿ ಬಿ.ಎ. ಸೈಯದ್ ಫಾರೂಕ್, ಉಪಾಧ್ಯಕ್ಷರಾದ ಆರ್.ವೆಂಕಟೇಶ್, ಎಂ.ಎಸ್.ನಾಗರಾಜ್, ವೆಂಕಟಲಕ್ಷ್ಮಮ್ಮ, ಸಹ ಕಾರ್ಯದರ್ಶಿಗಳಾದ ಜಿ.ಮಂಜುಳ, ಎಸ್.ಶಿವಾರೆಡ್ಡಿ, ಸದಸ್ಯರಾದ ಪಾತಕೋಟೆ ನಾರಾಯಣಕುಮಾರ್, ನಾಗರಾಜ್, ಕೆ.ಶ್ರೀನಿವಾಸ್, ಕೆ.ನಾರಾಯಣಸ್ವಾಮಿ, ಎಂ.ರಾಮಪ್ಪ ಇದ್ದರು.