JANANUDI.COM NETWORK
ಕುಂದಾಪುರ,ಮೇ. : ಗ್ರಾ.ಪಂ ಗಳನ್ನು ಸೀಲ್ ಡೌನ್ ಮಾಡಿರುವುದು ಪರಿಣಾಮಕಾರಿಯಾಗಿ ಪರಿಣಮಿಸಿದೆ.ಆದರಿಂದ ಮಂಗಳವಾರದಂದು ಸಭೆ ನಡೆಸಿ ಯಾವ್ಯಾವ ಪಂಚಾಯತ್ ಮತ್ತು ಹಾಗೂ ಪುರಸಭೆ ವಾರ್ಡ್ ಗಳನ್ನು ಸೀಲ್ ಡೌನ್ ಮಾಡಬೇಕೆಂದು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಇಂದು ಶನಿವಾರ ನಗರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸರಕಾರದ ಆದೇಶದಂತೆ ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ. ಅರ್ಹರಿಗೆ ಮಾತ್ರ ಲಸಿಕೆ ದೊರೆಯಕಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಲಸಿಕಾ ಕೇಂದ್ರದಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು,ಕುಂದಾಪುರ ಕಲಾಮಂದಿರದ ಲಸಿಕಾ ಕೇಂದ್ರಕ್ಕೆ ಉಸ್ತುವಾರಿಯಾಗಿ ದಿನಕರ ಶೆಟ್ಟಿ(ಹಿರಿಯ ಭೂ ವಿಜ್ನಾನಿ, ಅಂತರ್ಜಲ ಇಲಾಖೆ,ಉಡುಪಿ) ನೋಡಲ್ ಅಧಿಕಾರಿಯಾಗಿ, ಕಾರ್ಕಳ ಬೋರ್ಡ್ ಹೈಸ್ಕೂಲ್ ಲಸಿಕಾ ಕೇಂದ್ರೆಕ್ಕೆ ಸೂರ್ಯಕಾಂತ ಖಾರ್ವಿ, ಕಾರ್ಕಳ ಪುರಸಭೆ ಮ್ಯಾನೇಜರ್, ಇವರನ್ನು ನೋಡೊಲ್ ಅಧಿಕಾರಿಯಾಗಿ ನೇಮಿಸಲಾಗಿದೆಯೆಂದು ತಿಳಿದು ಬಂದಿದೆ.