JANANUDI.COM NETWORK
ಬೆ೦ಗಳೂರು.ಎ .4:ರಾಜ್ಯದಲ್ಲಿಪೆಟ್ರೋಲ್, ಡೀಸೆಲ್, ಅಡುಗೆ ಸಿಲಿಂಡರ್ ಎಲ್ಲವು ದರ ಏರಿಕೆಯಿಂದ ಜನ ತತ್ತರಿಸುವಾಗ ಇದರ ಬೆನ್ನಲ್ಲೇ ವಿದ್ಯುತ್ ದರ ಕೂಡ ಏರಿಕೆಯಾಗಿದೆ.ಈ ಬಾರಿ 1 ರೂಪಾಯಿ 50 ಪೈಸೆ ಹೆಚ್ಚಳ ಮಾಡುವಂತೆ ಪ್ರಸ್ತಾವನೆಯನ್ನು ಬೆಸ್ಕಾಂ ಸಲ್ಲಿಸಿತ್ತು.ಅದರೆ ಬೆಸ್ಕಾಂ ವ್ಯಾಪ್ತಿಯ ಪ್ರತಿ ಯುನಿಟ್ ಗೆ 35 ಪೈಸೆ ಹೆಚ್ಚಳಮಾಡಲಾಗಿದೆ. ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ. ಕಳೆದ ವರ್ಷವೂ ಸಹ ಪುತಿ ಯುನಿಟ್ ಗೆ 30 ಪೈಸೆ ಹೆಚ್ಮಳವಾಗಿದ್ದು, ರಾಜ್ಯದ ವಿದ್ಯುತ್ ಸರಬರಾಜು ಕ೦ಪನಿ ಗಳಾದ ಬೆಸ್ಕಾಂ, ಮೆಕ್ಕಾಂ, ಚೆಕ್ಕಾಂ ಸೇರಿದಂತೆ ಇತರ ಕ೦ಪನಿಗಳು.ಪ್ರತಿಬಾರಿಯಂತೆ ಈ ವರ್ಷದ ಸಹ ದರ ಹೆಚ್ಚಳಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.