ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಕೆ.ಇ ಕುಮಾರಸ್ವಾಮಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಮೇ.3: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ 6ನೇ ಪೀಠದ ಆಯುಕ್ತ ಡಾ.ಕೆ.ಇ ಕುಮಾರಸ್ವಾಮಿ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ ಅಡಿ ಕ್ರಿಮಿನಲ್ ಪ್ರಕರಣವನ್ನು ವಿಧಾನಸೌಧ ಪೊಲೀಸರು ದಾಖಲೆ ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುಮಾರು 1000 ಕೋಟಿ ರೂಪಾಯಿಗಳ ಗಂಗಾ ಕಲ್ಯಾಣ ಯೋಜನೆಯಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ, ಬೆಂಗಳೂರು, ಡಾ. ದೇವರಾಜ್ ಅರಸು ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಬೆಂಗಳೂರು, ಕರ್ನಾಟಕ ಬಂಜಾರ ಅಭಿವೃದ್ಧಿ ನಿಗಮ ಬೆಂಗಳೂರು, ಹಗರಣ ನಡೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಹಿತಿ ಹಕ್ಕುಕಾಯ್ದೆ ನಿಗಮ 2005 ರಂತೆ ಕೋಲಾರ ಜಿಲ್ಲೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿ ಮಾಹಿತಿ ಕೇಳಲಾಗಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದೇ ಇರುವ ಕಾರಣ ರಾಜ್ಯ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಸದರಿ ಅರ್ಜಿ ವಿಚಾರಣೆ ಆಯೋಗದ 6ನೇ ಪೀಠದಲ್ಲಿ ವಿಚಾರ ನಡೆಯಿತು. ಈ ಸಂದರ್ಭದಲ್ಲಿ ಪೀಠ ಆಯುಕ್ತರಾದ ಡಾ.ಕೆ.ಇ ಕುಮಾರಸ್ವಾಮಿ ರವರು ಅಧಿಕಾರಿಗಳ ಪರ ಮಾತನಾಡುತ್ತಾ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜಾತಿ ಪರಿಶಿಷ್ಟ ಜಾತಿಗೆ ಸೇರಿದ ನನ್ನನ್ನು ಜಾತಿ ನಿಂದನೆ ಮಾಡಿರುತ್ತಾರೆ. ಈ ಸಂಬಂಧ ವಿಧಾನಸೌಧ ಪೊಲೀಸರಿಗೆ ದೂರು ನೀಡಲಾಗಿ ಪೊಲೀಸರು ಒತ್ತಡಗಳಿಗೆ ಮಣಿದು ಪ್ರಕರಣವನ್ನು ದಾಖಲು ಮಾಡಿರುವುದಿಲ್ಲ.

ಈ ಹಿನ್ನಲೆಯಲ್ಲಿ ನಗರ ಸಿವಿಲ್ ಮತ್ತು ಸೆಷನ್ ಸತ್ರ ನ್ಯಾಯಾಲಯಕ್ಕೆ (ಸಿಸಿಹೆಚ್-71) ಮೊರೆ ಹೋದ ಹಿನ್ನಲೆಯಲ್ಲಿ ಸಹಾಯಕ ಪೊಲೀಸ್ ಕಮೀಷನರ್ ಅವರಿಗೆ ನ್ಯಾಯಾಲಯ ಆದೇಶ ನೀಡಿದ ಕಾರಣ ದಿನಾಂಕ 1-5-2021 ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿರುತ್ತಾರೆ. (ಪ್ರಕರಣದ ಸಂಖ್ಯೆ 0033/2021) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಾದ ಶ್ರೀನಿವಾಸಪುರದ ಎನ್ ನಾರಾಯಣಸ್ವಾಮಿ ಪರವಾಗಿ ಖ್ಯಾತ ಕ್ರಮಿನಲ್ ವಕೀಲರಾದ ಬೈರಕೂರು ಬಿ.ಎನ್ ಶ್ರೀನಿವಾಸ್ ರವರು ವಾದ ಮಂಡಿಸಿರುತ್ತಾರೆ. ಸದರಿ ಸುದ್ಧಿಯೊಂದಿಗೆ ನ್ಯಾಯಾಲಯದ ಆದೇಶ ಮತ್ತು ಎಫ್.ಐ.ಆರ್ ಪ್ರತಿಯನ್ನು ಲಗತ್ತಿಸಲಾಗಿದೆ.