ಶ್ರೀನಿವಾಸಪುರ, ಮಾ-13, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಅನಧಿಕೃತ ಹುದ್ದೆಗಳನ್ನು ಸೃಷ್ಟಿ ಮಾಡುತ್ತಿರುವ ಶಿಶು ಅಭಿವೃದ್ದಿ ಅಧಿಕಾರಿ ವಿರುದ್ದ ಕಾನೂನು ಕ್ರಮ ಕೈಗೊಂಡು, ಶಿಥಲಗೊಂಡಿರುವ ಅಂಗನವಾಡಿ ಕೇಂದ್ರಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿ ಮಕ್ಕಳ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ದಂದೆ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ಶಿಶು ಅಭಿವೃದ್ದಿ ಇಲಾಖೆ ಮುಂದೆ ಹೋರಾಟ ಮಾಡಿ ಶಿಶು ಅಭಿವೃದ್ಧಿ ಅಧಿಕಾರಿ ನವೀನ ಮುಖಾಂತರ ಉಪ ನಿರ್ದೇಶಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸರ್ಕಾರ ನಿಯಮದ ಪ್ರಕಾರ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಶಿಕ್ಷಕ ಶಿಕ್ಷಕಿಯರ ಹುದ್ದೆಯನ್ನು ಭರ್ತಿ ಮಾಡುವ ಶಿಶು ಅಭಿವೃದ್ದಿ ಅಧಿಕಾರಿಗಳು ನಿಯಮ ಮೀರಿ ಕಾನೂನು ಬಾಹಿರವಾಗಿ ಲಕ್ಷ ಲಕ್ಷಕ್ಕೆ ಸಾರ್ವಜನಿಕವಾಗಿ ಹುದ್ದೆಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡುವ ದಂದೆಯಲ್ಲಿ ತೊಡಗಿರುವುದು ದುರದೃಷ್ಟಕರ ಅವಶ್ಯಕತೆ ಇಲ್ಲದ ಕಡೆ ಹುದ್ದೆಗಳ ಸೃಷ್ಟಿ ಮಾಡಿ, ಉದ್ಯೋಗ ನೀಡುತ್ತೇವೆಂದು ಅಮಾಯಕರನ್ನು ವಂಚನೆ ಮಾಡುತ್ತಿರುವ ಶಿಶು ಅಭಿವೃದ್ದಿ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಅಕ್ರಮ ನೇಮಕಾತಿಗೆ ಕಡಿವಾಣ ಹಾಕಬೇಕು ಜೊತೆಗೆ ವಿದ್ಯಾರ್ಹತೆ ತಕ್ಕಂತೆ ಹುದ್ದೆ ನೀಡುವ ನಿಯಮ ಪಾಲನೆ ಮಾಡುವಂತೆ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಹಿರಿಯ ಅಧಿಕಾರಿಗಳಿಗೆ ಒತ್ತಾಯ ಮಾಡಿದರು.
ಜಿಲ್ಲಾದ್ಯಂತ ನೂರಾರು ಅಂಗನವಾಡಿ ಕೇಂದ್ರಗಳು ಶೀಥಲ ಅವ್ಯವಸ್ತೆ ತಲುಪುವ ಜೊತೆಗೆ ಅಭಿವೃದ್ದಿ ಮಾಡಲು ಹಣವಿಲ್ಲದೆ ಬೇಸಿಗೆಯಲ್ಲಿ ಹಾಗೂ ಮಳೆಗಾಲದಲ್ಲಿ ಬಡ ರೈತ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಕರು ಅಲ್ಲಿನ ಸಿಬ್ಬಂದಿ ಪ್ರಾಣ ಭಯದಿಂದ ಅಂಗನವಾಡಿ ಕೇಂದ್ರಗಳಲ್ಲಿ ಪಾಠ ಮಾಡಬೇಕಾದ ಪರಿಸ್ಥಿತಿ ಇದ್ದರೂ, ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರಗಳ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಲು ತಾರತಮ್ಯ ಮಾಡುತ್ತಿರುವುದು ದುರದೃಷ್ಟಕರ ಬಡವರ ಮಕ್ಕಳು ಏನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಶಿಕ್ಷಣದಿಂದ ಹಿಡಿದು ಆಹಾರದ ವರೆಗೂ ಸರ್ಕಾರದ ಮುಂದೆ ಕೈಚಾಚಬೇಕಾದ ಪರಿಸ್ತಿತಿ ಇರುವುದು ಪ್ರಜಾಪ್ರಭುತ್ವದ ಅವ್ಯವಸ್ಥೆ ಸಂವಿಧಾನದಲ್ಲಿರುವ ನಾವು ನಮ್ಮ ಹಕ್ಕುಗಳ ವಿರುದ್ದ ಹೋರಾಡಲೇ ಇರುವುದು ದುರದೃಷ್ಟಕರ ಎಂದು ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ತೆÀÉರ್ನಹಳ್ಳಿ ಆಂಜಿನಪ್ಪ ಮಾತನಾಡಿ ಒಂದ ಕಡೆ ಕಿತ್ತು ತಿನ್ನುವ ಬಡತನ ಮತ್ತೊಂದು ಕಡೆ ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳ ಭವಿಷ್ಯದ ಕನಸು ಕಾಣುತ್ತಿರುವ ಲಕ್ಷಾಂತರ ರೈತ ಕೂಲಿ ಕಾರ್ಮಿಕರು ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿ ದುಡಿಯುವ ಕೈಗೆ ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಕೂಲಿ ಹುಡುಕಿಕೊಂಡು ಹೊರ ಜಿಲ್ಲೆಗಳಿಗೆ ಗೂಳೆ ಹೋಗುವ ಬಡವರ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಆಹಾರಕ್ಕಾಗಿ ಸರ್ಕಾರ ಸಾವಿರಾರು ಕೋಟಿ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದರೂ, ಬಡ ಮಕ್ಕಳ ಹಾಗೂ ಗರ್ಭಿಣಿಯರ ಹಸಿವನ್ನು ಅಪೌಷ್ಠಿಕತೆಯನ್ನು ನಿವಾರಣೆ ಮಾಡಬೇಕಾದ ಸರ್ಕಾರದ ಆಹಾರ ಸರಬರಾಜು ಇಂದು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂದೆಯಲ್ಲಿ ಕಳೆದುಹೋಗುತ್ತಿರುವುದು, ಬಡವರ ಅನ್ನವನ್ನು ಗುತ್ತಿಗೆದಾರರು ಅಂಗನವಾಡಿ ಕಾರ್ಯಕರ್ತೆಯರು ಕಸಿದು ಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದರು.
ಒಂದು ಕಡೆ ಕಾಳಸಂತೆಯ ಮಾರಾಟ ಮತ್ತೊಂದು ಕಡೆ ಗುಣಮಟ್ಟವಿಲ್ಲದ. ಆಹಾರ ಪದಾರ್ಥಗಳನ್ನು ದುಬಾರಿ ಬೆಲೆಗೆ ನೀಡುತ್ತೇವೆಂದು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಹಣ ವಂಚನೆ ಮಾಡಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾನು ಮಾಡುತ್ತಿದ್ದರೂ, ಗುಣ ಮಟ್ಟ ಪರಿಶೀಲನೆ ಮಾಡಬೇಕಾದ ಆಧಿಕಾರಿಗಳು ಶಾಮೀಲಾಗುವ ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಅನಧಿಕೃತ ಹಾಜರಾತಿಯನ್ನು ಸೃಷ್ಟಿ ಮಾಡುತ್ತಿರುವ ದಂದೆಗೆ ಕಡಿವಾಣ ಇಲ್ಲದಂತಾಗಿದೆ. ಜೊತೆಗೆ ಸರ್ಕಾರದಿಂದ ಮೊಟ್ಟೆ, ಕಳಪೆ ಜೊತೆಗೆ ಹಾಲಿನ ಪುಡಿಯನ್ನು ಮಕ್ಕಳ ಹೆಸರಿನಲ್ಲಿ ಕಾಳಸಂತೆಯಲ್ಲಿ ಮರಾಟ ಒಟ್ಟಾರೆಯಾಗಿ ಹೆಜ್ಜೆ ಹೆಜ್ಜೆಗೂ ಅಂಗನವಾಡಿ ಕೇಂದ್ರಗಳ ಅವ್ಯವಸ್ತೆ ಸರಿಪಡಿಸುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ವಿಫಲವಾಗಿದ್ದಾರೆಂದು ಕಿಡಿಕಾರಿದರು.
ಮಾನ್ಯರು ಅಂಗನವಾಡಿ ಕೇಂದ್ರಗಳ ಅಕ್ರಮ ನೇಮಕಾತಿಯಲ್ಲಿ ತೊಡಗಿರುವ ಶಿಶು ಅಭಿವೃದ್ದಿ ಅಧಿಕಾರಿ ವಿರುದ್ದ ಕ್ರಮ ಕೈಗೊಂಡು ಶಿಥಲಗೊಂಡಿರುವ ಅಂಗನವಾಡಿ ಕೇಂದ್ರಗಳಿಗೆ ಕಾಯಕಲ್ಪ ಕಲ್ಪಿಸಿ ಕಾಳಸಂತೆಯಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ದಂದೆ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ, ಬರ ರೈತ ಕೂಲಿಕಾರ್ಮಿಕರ ಮಕ್ಕಳ ಹಾಗೂ ಗರ್ಭಿಣಿಯರ ಅಪೌಷ್ಠಿಕತೆ ನಿಯಂತ್ರಣ ಮಾಡಬೇಕೆಂದು ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರವರು ಸಮಸ್ಯೆಗಳ ಬಗ್ಗೆ ಸ್ಥಳೀಯವಾಗಿ ಸಭೆ ಕರೆದು ಬಗೆ ಹರಿಸುವ ಜೊತೆಗೆ ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಆಲವಾಟ ಶಿವು, ದ್ಯಾವಣ್ಣ, ರಾಜೇಂದ್ರಪ್ಪ, ಸಹದೇವಣ್ಣ, ಷೇಕ್ಷಪಿವುಲ್ಲಾ, ಮಂಗಸಂದ್ರ ತಿಮ್ಮಣ್ಣ, ಯಾರಂಘಟ್ಟ ಗಿರೀಶ್, ಮುನಿರಾಜು, ಸುಪ್ರಿಂ ಚಲ, ಮುಂತಾದವರು ಇದ್ದರು