![](https://jananudi.com/wp-content/uploads/2025/02/Screenshot-946-1.png)
![](https://jananudi.com/wp-content/uploads/2025/02/raithasanngha-mbl-photo.jpg)
ಮುಳಬಾಗಿಲು, ಫೆ-5, ರಾಷ್ಟ್ರೀಯ, ರಾಜ್ಯ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಹುರಳಿ, ರಾಗಿ, ಒಕ್ಕಣಿ ಮಾಡುವುದರಿಂದ ಆಗುವ ಅನಾಹುತಗಳ ಬಗ್ಗೆ ರೈತರಲ್ಲಿ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಿ, ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ರೈತ ಸಂಘದಿಂದ ಲೋಕೋಪಯೋಗಿ ಇಲಾಖೆ ಮುಂದೆ ಹುರಳಿ ಸಮೇತ ಹೋರಾಟ ಮಾಡಿ, ಮನವಿ ನೀಡಿ, ಒತ್ತಾಯಿಸಲಾಯಿತು.
ಕೋಟ್ಯಾಂತರ ರೂಪಾಯಿ ಅನುದಾನಗಳಲ್ಲಿ ಅಭಿವೃದ್ದಿ ಪಡಿಸಿರುವ ರಸ್ತೆಗಳಲ್ಲಿ ಮಾಡುತ್ತಿರುವ ಹುರಳಿ, ರಾಗಿ, ಒಕ್ಕಣಿಯಿಂದ ಆಗುತ್ತಿರುವ ಅನಾಹುತಗಳಿಗೆ ಜವಾಬ್ದಾರಿ ಯಾರು?. ಕೃಷಿ ಅಧಿಕಾರಿಗಳ ಬೇಜವಾಬ್ದಾರಿಯೇ ಇಲ್ಲವೆ, ಕಣ್ಮರೆಯಾಗಿರುವ ಹಳ್ಳಿಗಳಲ್ಲಿನ ಕಣಗಳ ನಿರ್ಮಾಣ ಮಾಡಲು ವಿಫಲವಾಗಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ನಿರ್ಲಕ್ಷವ್ಯೇ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ತಾಲ್ಲೂಕು ಆಡಳಿತವನ್ನು ಪ್ರಶ್ನೆ ಮಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರ ಅಭಾವ ಕೃಷಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮಯಕ್ಕೆ ಸಿಗದ ಯಂತ್ರೋಪಕರಣಗಳು ದುಬಾರಿ ಖಾಸಗಿ ಯಂತ್ರೋಪಕರಣಗಳ ವೆಚ್ಚ ಭರಿಸಲಾಗದೆ, ಗ್ರಾಮೀಣ ಪ್ರದೇಶದ ಬಡ ರೈತ ಕೂಲಿಕಾರ್ಮಿಕರು 3 ತಿಂಗಳು ಕಷ್ಟಾಪಟ್ಟು ಬೆಳೆದ ರಾಗಿ, ಭತ್ತ, ಹುರಳಿಕಾಳನ್ನು ಬೇರ್ಪಡಿಸಿಕೊಳ್ಳಲು ಅನ್ಯ ಮಾರ್ಗವಿಲ್ಲದೆ, ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನೇ ಅವಲಂಬಿಸಿಕೊಂಡು ಒಕ್ಕಣಿ ಮಾಡಲು ಮುಂದಾಗಿದ್ದು, ಆಗುವ ಅನಾಹುತಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವ ಅಧಿಕಾರಿಗಳೇ ಇಲ್ಲದಂತಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಪೂರ್ವಜರ ಕಾಲದಲ್ಲಿ ಬೆಳೆದ ಬೆಳೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ರೈತರು ಒಗ್ಗಟ್ಟಾಗಿ ಕಣಗಳನ್ನು ಸಿದ್ದಪಡಿಸಿಕೊಂಡು ಸಗಣಿಯಿಂದ ಸಾರಿಸಿ ಸಡಗರ ಸಂಭ್ರಮದಿಂದ ಬೆವರು ಸುರಿಸಿ ಬೆಳೆದ ಬೆಳೆಯನ್ನು ಒಕ್ಕಣಿ ಮಾಡುವ ಮುಖಾಂತರ ರಾಶಿ ಮಾಡಿ, ಪೂಜೆ ಮಾಡಿ ಮನೆ ತುಂಬಿಸಿಕೊಳ್ಳುವ ಸಂಪ್ರದಾಯ ಇಂದು ಕಣ್ಮರೆಯಾಗಿರುವುದಕ್ಕೆ ವಿಫಲವಾಗಿರುವ ಅಧಿಕಾರಿಗಳ ವೈಫಲ್ಯ ಎಂದು ಆರೋಪಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್ಪಾಷ ಮಾತನಾಡಿ ಪಂಚಾಯಿತಿವತಿಯಿಂದ ಸರ್ಕಾರದ ಜಾಗವನ್ನು ಗುರುತಿಸಿ ಪ್ರತಿ ಹಳ್ಳಿಯಲ್ಲೂ ನರೇಗದಲ್ಲಿ ಕಣ ನಿರ್ಮಾಣ ಮಾಡಿ ರೈತರಿಗೆ ಅನುಕೂಲಮಾಡಿ ರಸ್ತೆಗಳಲ್ಲಿ ಒಕ್ಕಣಿ ಮಾಡುವುದರಿಂದ ಅಪಘಾತಗಳು ಹೆಚ್ಚಾಗುವ ಜೊತೆಗೆ ಆ ವಾಹನಗಳಿಂದ ಸುರಿಯುವ ಡೀಸಲ್, ಆಯಿಲ್, ರಾಗಿ ಮತ್ತು ಹುರಳಿಯಲ್ಲಿ ಮಿಶ್ರಣವಾಗಿ ನಾನಾ ರೋಗಗಳಿಗೆ ಕಾರಣವಾಗುತ್ತದೆ ಎಂಬುದನ್ನು ಮನವರಿಕೆ ಮಾಡುವ ಜೊತೆಗೆ ಬಾರಿ ವಾಹನಗಳು ಓಡಾಡುವಾಗ ಹುಲ್ಲು ಸೈಲೇನ್ಸರ್ಗೆ ಸಿಲುಕಿಕೊಂಡು ಬೆಂಕಿ ಹಚ್ಚಿಕೊಂಡು ಅನಾಹುತಗಳು ಸಂಭವಿಸುತ್ತವೆ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಳ್ಳಲು ವಿಫಲವಾಗಿರುವ ಕಾರಣ ರೈತರು ರಸ್ತೆಯಲ್ಲೇ ಒಕ್ಕಣಿ ಮಾಡುತ್ತಿದ್ದಾರೆಂದರು.
ಮಾನ್ಯರು ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳಿಗೆ ತಾಲ್ಲೂಕು ಆಡಳಿತಕ್ಕೆ ಪತ್ರ ಬರೆದು ರಾಷ್ಟ್ರೀಯ, ರಾಜ್ಯ ಗ್ರಾಮೀಣ ರಸ್ತೆಗಳಲ್ಲಿ ಒಕ್ಕಣಿ ಮಾಡದಂತೆ ರೈತರಿಗೆ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಿ ಮುಂದೆ ಆಗುವ ಅನಾಹುತಗಳನ್ನು ಹಾಗೂ ಹದಗೆಡುವ ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಅಧಿಕಾರಿಗಳು ರಸ್ತೆಗಳಲ್ಲಿ ಒಕ್ಕಣಿ ಬಗ್ಗೆ ಸಂಬಂಧಪಟ್ಟ ಇಲಾಖೆಯ ಸಭೆ ಕರೆದು ಸಮಸ್ಯೆ ಬಗೆ ಹರಿಸುವ ಜೊತೆಗೆ ರೈತರಲ್ಲಿ ಜಾಗೃತಿ ಮೂಡಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜೇಶ್, ಭಾಸ್ಕರ್, ಸುನಿಲ್ಕುಮಾರ್, ಶ್ರೀನಿವಾಸ್, ಜುಬೇರ್ಪಾಷ, ವಿಜಯ್ಪಾಲ್, ಸುಪ್ರಿಂ ಚಲ, ಪದ್ಮಘಟ್ಟ ಧರ್ಮ, ನಾಗೇಶ್, ಹೆಬ್ಬಣಿ ಆನಂದರೆಡ್ಡಿ, ಕೇಶವ, ವೇಣು, ಯಾರಂಘಟ್ಟ ಗಿರೀಶ್, ಮುಂತಾದವರು ಇದ್ದರು.
![](https://jananudi.com/wp-content/uploads/2025/02/raithasanngha-mbl-photo-1.jpg)
![](https://jananudi.com/wp-content/uploads/2025/02/raithasanngha-mbl-photo-2.jpg)