ಬೀಜಾಡಿಯಲ್ಲಿ ಕೋವಿಶೀಲ್ಡ್ ವ್ಯಾಕ್ಸಿನೇಶನ್ ಶಿಬಿರ

JANANUDI.COM NETWORK


ಬೀಜಾಡಿ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಸಾರಥ್ಯದಲ್ಲಿ ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬೀಜಾಡಿ ಗ್ರಾಮ ಪಂಚಾಯಿತಿ, ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಆಶ್ರಯದಲ್ಲಿ 2ನೇ ಬಾರಿ ಬೀಜಾಡಿ ಮಿತ್ರಸೌಧದಲ್ಲಿ ಕೋವಿಶೀಲ್ಡ್ ವ್ಯಾಕ್ಸಿನೇಶನ್ ಶಿಬಿರ ಶುಕ್ರವಾರ ನಡೆಯಿತು.
ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ನಾಗರಾಜ ಶಿಬಿರಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರ ಬಿ.ಎನ್, ಮಂಜುನಾಥ್ ಕುಂದರ್, ಶೇಖರ ಛಾತ್ರಬೆಟ್ಟು, ಮಾಜಿ ಸದಸ್ಯ ಶಂಕರನಾರಾಯಣ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದ ಯಶಸ್ವಿಗೆ ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯರಾದ ಅಶ್ವಿನಿ, ಆಶಾ ಕಾರ್ಯಕರ್ತೆಯರಾದ ಸರೋಜಾ, ಚೇತನಾ, ನಾಗಶ್ರೀ, ಗೀತಾ, ಅನಿತಾ, ನೇತ್ರಾವತಿ, ಶೋಭಾ, ಸುವಾಸಿನಿ,ವೈಲೆಟ್ ಬರೆಟ್ಟೋ,ಬೀಜಾಡಿ ಗ್ರಾಮ ಪಂಚಾಯಿತಿ ಸಿಬಂದಿ ನಾರಾಯಣ, ಮಿತ್ರ ಸಂಗಮದ ಸದಸ್ಯರಾದ ನಾಗರಾಜ ಬೀಜಾಡಿ, ವಿನಯ ಹೆಬ್ಬಾರ್, ವಿವೇಕ್ ಹೆಬ್ಬಾರ್, ಪ್ರದೀಪ್ ದೇವಾಡಿಗ, ಗಜೇಂದ್ರ, ರಾಜೇಶ್ ಆಚಾರ್ಯ,ಅರುಣ್ ದೇವಾಡಿಗ, ಬೀಜಾಡಿ ರೋಟರಿ ಸಮುದಾಯ ದಳದ ಅಧ್ಯಕ್ಷ ಗಿರೀಶ್ ಕೆ.ಎಸ್,ಬೀಜಾಡಿ ಗೆಳೆಯರ ಬಳಗದ ಸುಕೇಶ್ ಮೊಗವೀರ ಮೊದಲಾದವರು ಸಹಕರಿಸಿದರು. ಈ ಶಿಬಿರದಲ್ಲಿ 163 ಮಂದಿಗೆ ಕೋವಿಶೀಲ್ಡ್ ವ್ಯಾಕ್ಸಿನೇಶನ್ ಮಾಡಲಾಯಿತು.