JANANUDI.COM NETWORK
ಕುಂದಾಪುರ, ಎ.26; ಇದು ವರೆಗೆ ಕುಂದಾಪುರ ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡ ಲಕ್ಶ್ಮೀ ಸೋಮ ಬಂಗೇರ ಹೆಣ್ಮಕ್ಕಳ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯನ್ನು ನೀಡಲಾಗುತಿತ್ತು. ಆದರೆ ಈಗ ಹೊಸ ಕಟ್ಟಡ ಸಹಿತ ಇಡೀ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಬದಲಾಯಿಸಿದ್ದರಿಂದ ಇವತ್ತಿನಿಂದ (ಎ.26) ಕೋವಿಡ್ ಲಸಿಕೆಯನ್ನು ಆಸ್ಪತ್ರೆಯ ಹತ್ತಿರ ಇರುವ ಸರಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿರುವ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನೀಡಲಾಗುತ್ತದೆ. ಪ್ರತಿ ದಿನ ಸುಮಾರು 180 ಮಂದಿಗೆ ಲಸಿಕೆಯನ್ನು ಹಾಕಿ ಕೊಳ್ಳುತಿದ್ದು, ಕಲಾಮಂದಿರದಲ್ಲಿ ಶಾಂತ ವಾತವರಣವಿದ್ದು, ಲಸಿಕೆ ನೀಡುವ ಜಾಗ ಪೂರಕವಾಗಿದೆ.
‘ಕಲಾಮಂದಿರದಲ್ಲಿ ವಿಶಾಲ ಸ್ಥಳವಾಕಾಶ ಇದ್ದು, ಆಲ್ಲಿ ಮೂರು ಕಡೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ|ರೊಬರ್ಟ್ ರೆಬೆಲ್ಲೊ ತಿಳಿಸಿದ್ದಾರೆ