ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿ ಕೋಳ್ಳಬಾರದು :ಭಾರತ ಸರ್ಕಾರ

JANANUDI.COM NETWORK


ನವದೆಹಲಿ, 26: ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಹಂಚಿಕೋಳ್ಳುವುದು ಪ್ರತಿಶ್ಠೆಯಾಗಿ ಮಾರ್ಪಟ್ಟಿದೆ ಎಂದು ಜನ ಅಂದು ಕೊಂಡಿದ್ದಾರೆ, ಆದರೆ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ, ಹಂಚಿಕೊಳ್ಳ ಬಾರದೆಂದು, ಭಾರತ ಸರ್ಕಾರ ಹೇಳುತ್ತದೆ. ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಟ್ವಿಟರ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಅಥವಾ ವಾಟ್ಸಾಪ್‌ನಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು, ಏಕೆಂದರೆ ನಾಗರಿಕರು ಸೈಬರ್ ದಾಳಿಕೋರರಿಗೆ ಬಲಿಯಾಗ ಬಹುದುದೆಂದು ಅಭಿಪ್ರಾಯ ಪಟ್ಟಿದೆ ಮತ್ತುತಮ್ಮ ಮಾಹಿತಿಯನ್ನು ತಮ್ಮ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳಬಹುದೆಂದು ಹೇಳಿಕೊಂಡಿದೆ.
“ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಬಗ್ಗೆ ಎಚ್ಚರವಹಿಸಿ” ಎಂದು ಸೈಬರ್ ದೋಸ್ತ್ ಹೇಳುತದೆ., ಸೈಬರ್-ಸುರಕ್ಷತೆ ಮತ್ತು ಸೈಬರ್ ಸುರಕ್ಷತೆ ಜಾಗೃತಿಯನ್ನು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ನಿರ್ವಹಿಸುತ್ತದೆ. ಕೋವಿಡ್ 19 ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಹೆಸರುಗಳು ಮತ್ತು ಇತರ ವೈಯಕ್ತಿಕ ವಿವರಗಳಿವೆ’ ಆದರಿಂದ ಸೈಬರ್ ವಂಚಕರು ಇದನ್ನು ದುರುಪಯೋಗಪಡಿಸಿಕೊಳ್ಳಬಹುದು’ ಎಂದು ತಿಳಿಸಿದೆ.