ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ -ಶೇಕಡ 22ರಷ್ಟು ಸಾವುಗಳು ಭಾರತದಲ್ಲಿ
ಜಗತ್ತಿನಲ್ಲಿ ಕೋವಿಡ್ ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಈಗಾಗಲೇ ಪ್ರಕಟವಾದ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದ್ದು ಇದು ಗಮನಾರ್ಹ ಆತಂಕದ ವಿಷಯವಾಗಿದೆ.
ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಜಗತ್ತಿನಾದ್ಯಂತ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇಕಡ 22ರಷ್ಟು ಸಾವುಗಳು ಭಾರತದಲ್ಲೇ ಸಂಭವಿಸಿವೆ ಎಂವ ವರದಿ ಲ್ಯಾನ್ಸೆಟ್ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖವಾಗಿದ್ದು, ಭಾರತ ದೇಶ ಕೇವಲ ಬಡಾಯಿ ಕೊಚ್ಚಿಕೊಂಡಿತ್ತು ಎಂಬ ವಾಸ್ತವ ಸಂಗತಿ ಲ್ಯಾನ್ಸೆಟ್ ವರದಿ ಬಹಿರಂಗವಾಗಿದೆ.
ಜಾಗತಿಕ ಮಟ್ಟದಲ್ಲಿ ಹೆಚ್ಚುವರಿ ಕೋವಿಡ್ ಸಾವು ಸಂಭವಿಸಿದ ಬಗ್ಗೆ ಇದು ಮೊಟ್ಟಮೊದಲ ತಜ್ಞರ ಅಂದಾಜು ಆಗಿದ್ದು, 2021ರ ಡಿಸೆಂಬರ್ ಕೊನೆವರೆಗೆ ವಿಶ್ವಾದ್ಯಂತ 1.82 ಕೋಟಿ ಮಂದಿ ಈ ಸಾಂಕ್ರಾಮಿಕ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಅಧಿಕೃತ ದಾಖಲೆಯಲ್ಲಿ ಬರೆï 59 ಲಕ್ಷ ಮಂದಿ ಇದ್ದು ಅದಕ್ಕೆ ಹೋಲಿಸಿದರೆ ಮೂರು ಪಟ್ಟು ಅಧಿಕ ಎನ್ನಲಾಗುತ್ತಿದೆ. ಬಿಲ್ ಎಂಡ್ ಮಿಲಿಂದ ಗೇಟ್ಸ್ ಫೌಂಡೇಷನ್ ನೆರವಿನ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಆ ವರದಿಯ ಪ್ರಕಾರ, ಭಾರತದಲ್ಲಿ ವಾಸ್ತವಕ್ಕಿಂತ ಎಂಟು ಪಟ್ಟು ಹೆಚ್ಚಿನ ಮಂದಿ ನಿಧನಯೊಂದಿದ್ದಾರೆ ಎನ್ನಲಾಗುತ್ತಿದೆ. ಅತ್ಯಂತ ಹಳೆಯ ಮೆಡಿಕಲ್ ಜರ್ನಲ್ ಆಗಿರುವ ಲ್ಯಾನ್ಸೆಟ್ ಎಂಬ ವಾರ ಪತ್ರಿಕೆಯ ವರದಿ ಪ್ರಕಾರ, 2020ರ ಜನವರಿ 1ರಿಂದ 2021ರ ಡಿಸೆಂಬರ್ 31ರ ವರೆಗೆ ಅವಧಿಯಲ್ಲಿ 18.2 (1ಕೋಟಿ 80 ಲಕ್ಷಕ್ಕೂ ಹೆಚ್ಚು) ಮಿಲಿಯನ್ ಸಾವುಗಳು ಸಂಭವಿಸಿವೆ. ಇದರಲ್ಲಿ ಶೇಕಡ 22ರಷ್ಟು ಸಾವುಗಳು ಭಾರತದಲ್ಲೇ ಆಗಿವೆ ಎಂದು ವಿಶ್ಲೇಷಿಸಲಾಗಿದೆ.
ಭಾರತ ಸರ್ಕಾರದ ಮಾಹಿತಿ ಪ್ರಕಾರ, ಶುಕ್ರವಾರ (ಮಾ.11) ಬೆಳಗ್ಗಿನವರೆಗೆ ಕೋವಿಡ್ ನಿಂದ 5,15,714 ಜನರು ಸಾವನ್ನಪ್ಪಿದ್ದಾರೆ. ಆದರೆ, ಲ್ಯಾನ್ಸೆಟ್ ವರದಿ ಅನ್ವಯ 2021ರ ಡಿಸೆಂಬರ್ 31ರೊಳಗೇ 4.1 ಮಿಲಿಯನ್ ಅಂದರೆ 41 ಲಕ್ಷ ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಜಗತ್ತಿನಾದ್ಯಂತ ಅರ್ಧದಷ್ಟು ಸಾವುಗಳನ್ನು ಕಂಡ ಏಳು ರಾಷ್ಟ್ರಗಳ ಪೈಕಿ ಭಾರತದಲ್ಲೇ ಅತಿ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ವರದಿ ಅಂದಾಜಿಸಿದೆ.
ಭಾರತ ಹೊರತುಪಡಿಸಿದರೆ ಅಮೆರಿಕ (1.1 ಮಿಲಿಯನ್), ರμÁ್ಯ (1.1 ಮಿಲಿಯನ್), ಮೆಕ್ಸಿಕೋ (7,98,000), ಬ್ರೆಜಿಲ್ (7,92,000) ಮತ್ತು ಇಂಡೋನೇμÁ್ಯ (7,36,000) ಮತ್ತು ಪಾಕಿಸ್ತಾನ (6,64,000)ದಲ್ಲಿ ಅಧಿಕ ಸಾವುಗಳು ಆಗಿದೆ.
ರಷ್ಯಾದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 375 ಜನರು ಮೃತಪಟ್ಟಿದ್ದಾರೆ. ಮೆಕ್ಸಿಕೋದಲ್ಲಿ ಒಂದು ಲಕ್ಷಕ್ಕೆ 325 ಜನ, ಬ್ರೆಜಿಲ್ನಲ್ಲಿ ಲಕ್ಷಕ್ಕೆ 187 ಜನ ಮತ್ತು ಅಮೆರಿಕದಲ್ಲಿ ಲಕ್ಷಕ್ಕೆ 179 ಮಂದಿ ಸಾವನ್ನಪ್ಪಿದ್ದಾರೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕಾರಣ ಭಾರತವು ಜಗತ್ತಿನ ಶೇಕಡ 22ರಷ್ಟು ಸಾವುಗಳನ್ನು ಕಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇತ್ತ, 5.3 ಮಿಲಿಯನ್ ಹೆಚ್ಚುವರಿ ಸಾವುಗಳನ್ನು ಕಂಡಿರುವ ದಕ್ಷಿಣ ಏಷ್ಯಾದಲ್ಲಿ ಕೋವಿಡ್ ನಿಂದ ಅಧಿಕ ಸಾವುಗಳ ಸಂಭವಿಸಿವೆ. ನಂತರ ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ (1.7 ಮಿಲಿಯನ್) ಮತ್ತು ಪೂರ್ವ ಯುರೋಪ್ (1.4 ಮಿಲಿಯನ್) ಹೆಚ್ಚು ಸಾವುಗಳಾಗಿವೆ. ಈ ಅಂಕಿ-ಅಂಶಗಳು ಕೋವಿಡ್ ಸೋಂಕಿನ ಪರಿಣಾಮ ತುಂಬಾ ಅಧಿಕವಾಗಿತ್ತು ಎಂಬುವುದನ್ನು ಸೂಚಿಸುತ್ತವೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸ್ವತಂತ್ರ ಜಾಗತಿಕ ಆರೋಗ್ಯ ಸಂಶೋಧನಾ ಕೇಂದ್ರವಾದ ಆರೋಗ್ಯ ಛಂದಶ್ಯಾಸ್ತ್ರ (ಮೆಟ್ರಿಕ್ಸ್) ಮತ್ತು ಮೌಲ್ಯಮಾಪನ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ.
ಅಧಿಕೃತವಾಗಿ ವರದಿಯಾದ ಕೋವಿಡ್ ಸಾವಿನ ಸಂಖ್ಯೆ ಮತ್ತು ಹೆಚ್ಚುವರಿ ಸಾವಿನ ಸಂಖ್ಯೆಯನ್ನು ತಾಳೆ ಮಾಡಿದಾಗ ಕೋವಿಡ್ ಸಾವಿನ ಸಂಖ್ಯೆ ಗೊತ್ತಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಅಧಿಕೃತವಾದ ವರದಿಯಾದ ಸಂಖ್ಯೆಕ್ಕಿಂತ 9.5 ಪಟ್ಟು ಅಧಿಕವಾಗಿ ಪತ್ತೆಯಾಗುತ್ತವೆ. ಅದೇ ರೀತಿ ಪೂರ್ವ ಯುರೋಪ್ನಲ್ಲಿ 14.2 ಪಟ್ಟು ಹೆಚ್ಚು ಸಾವಿನ ಸಂಖ್ಯೆಗಳು ಕಂಡು ಬರುತ್ತವೆ ಎಂದು ವಿವರಿಸಲಾಗಿದೆ.
ಸಾಂಕ್ರಾಮಿಕದಿಂದ ಸಂಭವಿಸಿದ ನಿಜವಾದ ಸಾವಿನ ಸಂಖ್ಯೆ ತಿಳಿದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸ ಬೇಕಾದ ಅನಿವಾರ್ಯತೆ ಉಂಟಾಗಿದೆ. ಸ್ವೀಡನ್ ಮತ್ತು ನೆದಲ್ಯಾರ್ಂಡ್ ಸೇರಿ ಇತರ ರಾಷ್ಟ್ರಗಳಲ್ಲಿ ನಡೆದ ಅಧ್ಯಯನದ ಪ್ರಕಾರ ನೇರವಾಗಿ ಕೋವಿಡ್ ನಿಂದ ಉಂಟಾದ ಸಾವಿನ ಬಗ್ಗೆ ಗೊತ್ತಾಗುತ್ತದೆ. ಆದರೆ, ಅನೇಕ ಕಡೆಗಳಲ್ಲಿ ಅಗತ್ಯವಾದ ಪುರಾವೆ ಸಿಗುವುದಿಲ್ಲ. ಮುಂದಿನ ಅಧ್ಯಯನವು ನೇರವಾಗಿ ಕೋವಿಡ್ ನಿಂದ ಸಂಭವಿಸಿದ ಸಾವುಗಳು ಮತ್ತು ಪ್ರತ್ಯಕ್ಷವಾಗಿಯೂ ಎಷ್ಟು ಪರಿಣಾಮ ಬೀರಿದೆ ಎಂಬುವುದು ತಿಳಿಯಲು ಸಾಧ್ಯವಾಗಲಿದೆ ಎಂದು ಮುಖ್ಯಲೇಖಕ ಡಾ.ಹೈಡಾಂಗ್ ವಾಂಗ್ ಹೇಳಿದ್ದಾರೆ.