ಕೋವಿಡ್-19 ಉಡುಪಿ ಜಿಲ್ಲೆಯಲ್ಲಿ ಮಾರ್ಗಸೂಚಿ ಪಾಲಿಸದ ಸಂಸ್ಥೆಳ ನೋಂದಣಿ ರದ್ದು :ಉಡುಪಿ ಡಿ.ಸಿ. ಜಿ. ಜಗದೀಶ್

JANANUDI.COM NETWORK

 

ಉಡುಪಿ, ಮೇ 25: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಕೆ.ಪಿ.ಎಂ.ಇ. ಅಡಿ ನವೀಕರಣ ಮಾಡದ ಹಾಗೂ ಕೋವಿಡ್-19 ಮಾರ್ಗಸೂಚಿ ಪಾಲಿಸದ ಸಂಸ್ಥೆಗಳ ಕೆ.ಪಿ.ಎಂ.ಇ ಹಾಗೂ ಎಪಿಡೆಮಿಕ್ ಕಾಯ್ದೆ ಅನ್ವಯ ರದ್ದು ಪಡಿಸಲಾವುದು ಎಂದು ಜಿಲ್ಲಾ ಕೆ.ಪಿ.ಎಂ.ಇ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.       

ಈಗಾಲಲೇ ಉಡುಪಿ ತಾಲೂಕಿನ 16, ಕುಂದಾಪುರ ತಾಲೂಕಿನ 3 ಹಾಗೂ ಕಾರ್ಕಳ ತಾಲೂಕಿನ 7 ಸಂಸ್ಥೆಗಳ ನೋಂದಣಿಯನ್ನು ಕೆ.ಪಿ.ಎಂ.ಇ ಹಾಗೂ ಎಪಿಡೆಮಿಕ್ ಕಾಯ್ದೆ ಅನ್ವಯ ರದ್ದು ಪಡಿಸಲಾಗಿದೆ ಎಂದು ತಿಳಿದು ಬಂದಿದೆ