JANANUDI.COM NETWORK
ಪಣಜಿ, ಮೇ.02: ವೈವಾಹಿಕ ಜೀವನ ಪಾವಿತ್ರ್ಯವನ್ನು ಪಡೆದುಕೊಂಡಿದೆ. ಇದು ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬಂದಂತಹ ಜೀವನ ಶೈಲಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ, ಎಲ್ಲವೂ ಬದಲಾಗಿದೆ, ಇದು ವೈವಾಹಿಕ ಜೀವನವನ್ನು ಹೊರತುಪಡಿಸಿಲ್ಲ. ಹಾಗಾಗಿ ವಿಚ್ಚೇದನ ಎಂಬುದು ಸಾಂಕ್ರಮಿಕ ರೋಗದಂತೆ ಹರಡಿದೆ. ಗೋವಾದಲ್ಲಿ ವಿಚ್ಚೇದನ ಎನ್ನುವುದು ಎಲ್ಲೆ ಮೀರಿದೆ.ಅಲ್ಲಿ ಎಷ್ಟು ಪ್ರಮಾಣದಲ್ಲಿ ವಿವಾಹ ನಡೆಯುತ್ತೊ ಅಷ್ಟೇ ಪ್ರಮೇಣದಲ್ಲಿ ವಿಚ್ಛೇದನ ಕೇಸ್ ದಾಖಲಾಗುವುದು ಸರಕಾರಕ್ಕೆ ದೊಡ್ಡ ಹೊಡೆತವಾಗಿದೆ
ಹೀಗಾಗಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೋವಾ ಸರಕಾರವು ವಿವಾಹಕ್ಕೆ ಮೊದಲು ವಧು-ವರರಿಗೆ ಕಡ್ಡಾಯ ಕೌನ್ಸೆಲಿಂಗ್ ನೀಡುವ ತೀರ್ಮಾನಕ್ಕೆ ಬಂದು. ಇದೀಗ ದಿಡೀರ್ ವಿವಾಹಕ್ಕೂ ಬ್ರೇಕ್ ಬಿದ್ದಿದೆ. ಸಾಧರಣವಾಗಿ ಕ್ಯಾಥೊಲಿಕ್ ರಲ್ಲಿ, ನಿಚ್ಚಿಥಾರ್ತ ಆಗಿ ಮೂರು ತಿಂಗಳ ಬಳಿಕ ಮದುವೆಯಾಗ ಬೇಕೆಂಬ ನಿಯಮವಿದೆ, ಹಾಗೆ ಗಂಡು ಹೆಣ್ಣಿಗೆ ಕಡ್ಡಾಯವಾಗಿ ವೈವಾಹಿಕ ಶಿಕ್ಷಣವನ್ನು ಪಡೆದು ಅರದ ಪ್ರಮಾಣ ಪತ್ರವನ್ನುಪಡೆಯಬೇಕಾಗಿದೆ. ಆದರೂ ವಿವಾಹ ವಿಚ್ಚೇದನಗಳು ನಡೆಯುತ್ತಲೇ ಇವೆ.
ಆದರೆ ಗೋವಾ ಸರಕಾರ ವಿಚ್ಚೇದನ ಆಗದಿರಲು, ಪ್ರಯತ್ನಿಸುವ ನಿಟ್ಟಿನಲ್ಲಿ ಸಾಗುತ್ತಾ, ಕಾನೂನು ಸಚಿವ ನಿಲೇಶ್ ಕಾಬ್ರಾಲ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಸಾರ್ವಜನಿಕ ಆಡಳಿತ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಕೌನ್ಸೆಲಿಂಗ್ ಯಾವ ರೀತಿ ನಡೆಯಬೇಕು ಎಂಬುದರ ರೂಪುರೇಷ ಸಿದ್ದಗೊಳಿಸುತ್ತಿದೆ. ಮದುವೆಗೆ ಮುನ್ನ ಕಡ್ಡಾಯವಾಗಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ವಧು-ವರರು ಒಳಗಾಗಬೇಕಾಗುತ್ತದೆ.ಎಂದು ತಿಳಿದು ಬಂದಿದೆ.
ಯುವ ಜೋಡಿಗಳಿಗೆ ಮದುವೆ ಬಗ್ಗೆ, ಬಂಧದ ಪಾವಿತ್ರ್ಯದ ಬಗ್ಗೆ ಕೌನ್ಸೆಲಿಂಗ್ ನೀಡಲಾಗುತ್ತದೆ. ವಧು-ವರರ ಮನೆಯಲ್ಲಿ ಪರಸ್ಪರ ಯಾವ ರೀತಿ ಇರಬೇಕು, ಯಾವ ರೀತಿ ನಡವಳಿಕೆ ಇರಬೇಕು ಎಂದು ವಿವರಿಸಲಾಗುತ್ತದೆ. ಧಾರ್ಮಿಕ ಸಂಸ್ಥೆಗಳು ಸರಕಾರದ ಈ ಯೋಜನೆ ಜೊತೆಗೆ ಕೈಜೋಡಿಸಬಹುದು ಎಂದು ಅವರು ಹೇಳಿದ್ದಾರೆ.
ನೂತನ ಕಾನೂನು ಪ್ರಕಾರ ಮೊದಲು ಯುವ ಜೋಡಿ ವಿವಾಹವಾಗುವ ಬಗ್ಗೆ ಸಮ್ಮತಿ ಸೂಚಿಸಿ ವಿವಾಹ ನೋಂದಣಾಧಿಕಾರಿ ಮುಂದೆ ಸಹಿ ಹಾಕಬೇಕು. ಸಹಿ ಹಾಕಿದ ದಿನದಿಂದ 15 ದಿನಗಳ ಒಳಗಾಗಿ, ಅದೇ ಸಕ್ಷಮ ಪ್ರಾಧಿಕಾರಿಯ ಮುಂದೆ 2ನೇ ಬಾರಿಗೆ ಸಹಿ ಹಾಕಬೇಕು ಮತ್ತು ಮೂರು ತಿಂಗಳ ಬಳಿಕ ವಿವಾಹ ಆಗಿರುವ ಬಗ್ಗೆ ಅಧಿಕೃತವಾಗಿ ನೋಂದಣಿ ಮಾಡಿಸಬೇಕಾಗಿದೆ.ತಿಳಿಸಿದೆ.