

ಕುಂದಾಪುರ, ಎ.13; ಕುಂದಾಪುರ ನಗರದ ಚಿಕ್ಕನಸಾಲು ರಸ್ತೆಯಲ್ಲಿ ಕೋಸ್ತಾ ಆಯುರ್ವೇದಿಕ್ ಕ್ಲಿನಿಕನ್ನು ಆದರ್ಶ ಆಸ್ಪತ್ರೆಯ ಎಂ.ಡಿ. ಜನರಲ್ ಮತ್ತು ಲ್ಯಾಪರೊಸ್ಕೊಪಿಕ್ ಶಸ್ತ್ರ ಚಿಕಿತ್ಸಕರಾದ ಡಾ।ಆದರ್ಶ್ ಹೆಬ್ಬಾರ್ ಉದ್ಘಾಟಿಸಿ (ಎ.11) ‘ಆಯುರ್ವೆದೀಕ್ ಡಾಕ್ಟರಾದ ಡಾ।ವಿಕ್ಟರ್ ಡಿಕೋಸ್ತಾ, ನಮ್ಮ ಆದರ್ಶ ಆಸ್ಪತ್ರೆಯಲ್ಲಿ ಸೇವಾ ನಿರತರಾಗಿದ್ದಾರೆ, ಇಂದು ಅವರು ಅರೆಕಾಲಿಕ ಕ್ಲಿನಿಕನ್ನು ಆರಂಭಿಸಿದ್ದಾರೆ, ಇವರು ತುಂಬ ಉತ್ತಮ ವೈದ್ಯರು, ವೈದ್ಯ ಇವರು ಸಾಧಿಸುವುದು ಇನ್ನೂ ಬಹಳಷ್ಟಿದೆ, ವೈದ್ಯ ವ್ರತ್ತಿಯಲ್ಲಿ ಹೆಜ್ಜೆ ಹೆಜ್ಜೆಗೂ ಕಲಿಯುವುದು ಬಹಳಶಸ್ಟು ಕಲಿಯುವುದಿದೆ. ವೈದ್ಯ ಮನುಷ್ಯರ ಆಯುಷ್ಯವನ್ನು ಹೆಚ್ಚಿಸಬಹುದಸ್ಟೇ, ಸಾವನ್ನು ತಪ್ಪಿಸಲಿಕ್ಕೆ ಆಗುವುದಿಲ್ಲ, ಸಾವು ನಿಶ್ಚಿತ, ಆದರೆ ವೈದ್ಯರು ಉತ್ತಮ ಸೇವೆ ನೀಡಿ ರೋಗಗಳನ್ನು ಗುಣ ಪಡಿಸಬಹುದು, ನಮ್ಮ ಆದರ್ಶ ಆಸ್ಪತ್ರೆಯಲ್ಲಿ ಉತ್ತಮವಾಗಿ ಸೇವೆ ನೀಡುತ್ತೀರುವ ವಿಕ್ಟರ್ ಡಿಕೋಸ್ತಾ, ಕ್ಲಿನಿಕನ್ನು ಆರಂಭಿಸಿ ಇದನ್ನು ಇಲ್ಲಿಯೇ ನಿಲ್ಲಿಸಬಾರದು, ಮುಂದೆ ಅವರ ಗುರಿ ದೊಡ್ಡದಾಗಿರಬೇಕು” ಎಂದು ಶುಭ ಹಾರೈಸಿದರು.
ಕ್ಲಿನಿಕನ್ನು ಆಶೀರ್ವದಿಸಿದ, ವಲಯ ಪ್ರಧಾನ ಧರ್ಮಗುರು, ರೋಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ, “ನವ ಯುವಕ ಕ್ಲಿನಿಕ್ ತೆರೆದು ಸಮಾಜಕ್ಕೆ ಸೇವೆ ನೀಡಲು ಮುಂದಾಗಿರುದು ಬಹಳ ಸಂತೋಷದ ವಿಚಾರ, ಅವರು ಸೇವೆ ನೀಡುವಾಗ ಪ್ರಮಾಣಿಕ, ಉತ್ತಮ ಸೇವೆ ನೀಡಬೇಕು, ಬಡವರ ಮೇಲೆ ಕಾಳಜಿ ಹೊತ್ತು, ಸಮಾಜಕ್ಕೆ ಆದರ್ಶ ಎಂಬಂತೆ ಸೇವೆ ನೀಡಬೇಕು, ಉತ್ತಮ ವೈದ್ಯರೆಂದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಆಶಿರ್ವವಚನ ನೀಡಿ ಅವರು, ಪವಿತ್ರ ಜಲದಿಂದ ಕ್ಲಿನಿಕನ್ನು ಆಶಿರ್ವದಿಸಿದರು.
ವೇದಿಕೆಯಲ್ಲಿ ಡಾ।ಪ್ರಸೂತಿ ತಜ್ಞೆ ಮಧು ಮಯೂರಿ ಹೆಬ್ಬಾರ್, ವಿಕ್ಟರ್ ಡಿಕೋಸ್ತಾ ಇವರ ಮಾತಾ ಪಿತರಾದ ವಿಜಯ ಡಿಕೋಸ್ತಾ, ಶರ್ಮಿಳಾ ಡಿಕೋಸ್ತಾ ಉಪಸ್ಥಿತರಿದ್ದರು.
ಕೋಸ್ತಾ ಕಿಲ್ನಿಕ್ ಇದರ ಮಾಲೀಕರಾದ ಡಾ।ವಿಕ್ಟರ್ ಡಿಕೋಸ್ತಾ ಸ್ವಾಗತಿಸಿದರು. ಎಂ.ಬಿ.ಬಿ.ಎಸ್ ಫೈನಲ್ ಪರೀಕ್ಷೆ ಬರೆದಿರುವ ಡಾ।ವಿಕ್ಟರ್ ಅವರ ಸಹೋದರ ವಿಶಾಲ್ ಡಿಕೋಸ್ತಾ, ಪುಷ್ಪ ನೀಡಿ ಸ್ವಾಗತಿಸಿದರು. ವಿಜಯ್ ಡಿಕೋಸ್ತಾ ವಂದಿಸಿದರು. ಸಾಹಿತಿ, ಪತ್ರಕರ್ತ, ವಾಳೆಯ ಗುರಿಕಾರರಾದ ಬರ್ನಾಡ್ ಡಿಕೋಸ್ತಾ ನಿರೂಪಿಸಿದರು.






































