ರಾಯಲ್ಪಾಡು : ಕೊರೋನಾ ಮಾಹಮಾರಿ ವೈರಸ್ ಹರಡದಂತೆ ನಿತ್ಯ ಜನಸಾಮಾನ್ಯರಿಗೆ ಅರಿವು; ಮೂಡಿಸಿವೈ.ಆರ್. ರಾಮಾಜನೇಯ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ರಾಯಲ್ಪಾಡು : ಕೊರೋನಾ ಮಾಹಮಾರಿ ವೈರಸ್ ಹರಡದಂತೆ ನಿತ್ಯ ಜನಸಾಮಾನ್ಯರಿಗೆ ಅರಿವು ಮೂಡಿಸಿ , ಜನರ ಆರೋಗ್ಯ ರಕ್ಷಣೆಗೆ ಪಣ ತೊಟ್ಟಿರುವ ಕೊರೋನಾ ವಾರಿಯರ್ಸ್‍ಗಳು ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆಂದು ಎಂದು ಮುಖಂಡ ವೈ.ಆರ್. ರಾಮಾಜನೇಯ ತಿಳಿಸಿದರು.
ಅಡ್ಡಗಲ್‍ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಆಶಾ ಕಾರ್ಯಕರ್ತೆಯರಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾದ ದಿನಸಿಕಿಟ್ ಹಾಗು ಸೀರೆಗಳನ್ನು ವಿತರಿಸಿ ಮಾತನಾಡಿದರು.
ಡಿಸಿಸಿ ಬ್ಯಾಂಕ್‍ವತಿಯಿಂದ ನೀಡಲಾದ ದಿನಸಿಕಿಟ್ ಹಾಗು ಸೀರೆಗಳನ್ನು ಶಾಸಕ ಕೆ.ಆರ್.ರಮೇಶ್‍ಕುಮಾರ್‍ರವರ ಮಾರ್ಗದರ್ಶನದಲ್ಲಿ ಹೋಬಳಿಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾಯಿತು ಎಂದರು.
ಡಾ||ಕೆ.ಆರ್.ಕವಿತ ಮಾತನಾಡಿ ಕೊರೋನಾ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು . ಕೊರೋನಾ ತಡೆಗಟ್ಟಲು ಹಗಲಿರಲು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯದ ಬಗ್ಗೆಯು ಕಾಳಜಿ ವಹಿಸುತ್ತಾ, ಜನರ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ಮರಿಮಾಕಲಪಲ್ಲಿ ವೇಣು, ಕಾರ್ಯಕರ್ತರಾದ ಶಿವರಾಜ್,ಹರಿ ಆರೋಗ್ಯ ಕೇಂದ್ರ ಸಿಬ್ಬಂದಿ ನಾಗರಾಜ್ ಇತರರು ಇದ್ದರು.