JANANUDI.COM NETWORK

ಬೆಂಗಳೂರು,ಮೇ.22: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದರೂ, ಇದರ ಜೊತೆಗೆ 9 ವರ್ಷ ಕೆಳಗಿನ 40 ಸಾವಿರ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ದೊರೆತಿದೆ.
ಕರ್ನಾಟಕದಲ್ಲಿ 9 ವರ್ಷದೊಳಗಿನ 39,846 ಮಕ್ಕಳಿಗೆ ಹಾಗೂ 10-19 ವರ್ಷ ವಯಸ್ಸಿನ 1,05,044 ಮಕ್ಕಳಿಗೆ ಕೊರೊನಾ ತಗುಲಿದೆ. ಈ ಅಂಕಿಅಂಶಗಳ ಪ್ರಕಾರ, ಎರಡನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬುದು ಸಾಬೀತಾಗಿದೆ.
ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿ ಎರಡನೇ ದಿನಗಳಲ್ಲಿ ಮನೆಯವರಿಗೆ ಹರಡಬಲ್ಲ. ಮಕ್ಕಳು ಅವರ ಸಂಪರ್ಕಕ್ಕೆ ಬರುವುದ್ರಿಂದ ಅವರಿಗೆ ಕೊರೊನಾ ಬೇಗ ಬರ್ತಿದೆ ಎನ್ನಲಾಗ್ತಿದೆ