ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ರಾಯಲ್ಪಾಡು 1 : ಕರೋನಾ ವೈರಸ್ ರೋಗವು ಗ್ರಾಮೀಣ ಪ್ರದೇಶದಲ್ಲಿ ದಿನದಿನಕ್ಕೆ ಹೆಚ್ಚು ಹಬ್ಬುತ್ತಿದ್ದು ನಾಗರೀಕರು ಎಚ್ಚರಿಕೆಯಿಂದ ಇರಬೇಕು ಎಂದು ಪಿಡಿಒ ಚಂದ್ರಶೇಖರ್ ಸಲಹೆ ನೀಡಿದರು.
ಬುರಕಾಯಿಲಕೋಟೆ ಗ್ರಾಮವನ್ನು ಶುಕ್ರವಾರ ಸೀಲ್ಡೌನ್ ಮಾಡಿ ಮಾತನಾಡಿದರು.
ಗ್ರಾಮದಲ್ಲಿ ಒಟ್ಟು 10 ಜನರಿಗೆ ಕರೋನಾ ಪಾಸಿಟೀವ್ ಬಂದಿರುವುದರಿಂದ ಗ್ರಾ.ಪಂ. ಸದಸ್ಯ ಶಂಕರಪ್ಪ ನೇತೃತ್ವದಲ್ಲಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ. ಸೋಕಿಂತರನ್ನ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಕೇಂದ್ರಕ್ಕೆ ಆಂಬುಲೆನ್ಸ್ಗೆ ಕರೆ ಮಾಡಲು ಬೇಗ ಬಾರದೆ ಇರುವುದನ್ನು ಗಮನಿಸಿ , ತಡೆಮಾಡದೆ ಸೋಕಿಂತರು ತಮ್ಮ ಸ್ವಂತ ವಾಹನಗಳಲ್ಲಿ ತೆರಳಿ ತಾಲೂಕು ಕೋವಿಡ್ ಕೇಂದ್ರಕ್ಕೆ ತೆರಳಿದರು. ಗ್ರಾಮದಲ್ಲಿ ಸ್ಯಾನಿಟೈಸರ್ ಮಾಡಲಾಯಿತು.
ಗ್ರಾ.ಪಂ. ಸದಸ್ಯ ಶಂಕರಪ್ಪ, ಗ್ರಾಮದ ಮುಖಂಡರಾದ ಸೈಯದ್ ಫಾರೂಕ್ ,ಮಂಜುನಾಥ್,ಶ್ರೀನಿವಾಸ್,ಶ್ರೀರಾಮ್,ಮೌಲ ಹಾಗೂ ಜಲಗಾರರು ಇದ್ದರು