JANANUDI.COM NETWORK
ಬೆಂಗಳೂರು,ಮೇ.11; ರಾಜ್ಯದಲ್ಲಿ ಇಂದು ಹೊಸದಾಗಿ 39,510 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 20,13,193 ಕ್ಕೆ ಏರಿಕೆಯಾಗಿದೆ. ಹಾಗೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 22,584 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇಂದಿನ ಸಂಖ್ಯೆಯೊಂದಿಗೆ ರಾಜ್ಯದಲ್ಲಿ ಕೊರೋನಾ ಸಕ್ರೀಯ ಪ್ರಕರಣಗಳ ಸಂಖ್ಯೆಯು 5,87,452 ಕ್ಕೆ ಏರಿಕೆಯಾಯ್ತು. ಮತ್ತು ರಾಜ್ಯದಲ್ಲಿ ಇಂದು 480 ಜನರು ಕೊರೋನಾ ಸೋಂಕಿಗೆ ಬಲಿಯಾದುದನ್ನು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಉಡುಪಿ ಜಿಲ್ಲೆಯಲ್ಲಿ 1083 ಸೊಂಕಿತರಾಗಿದ್ದಾರೆ, 3 ಮಂದಿ ಸಾವಿಗಿಡಾಗಿದ್ದಾರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 915 ಸೊಂಕಿತರಾದರೆ, 5 ಮಂದಿ ಸಾವಿಗೆ ತುತ್ತಾಗಿದ್ದಾರೆ
ಬೆಂಗಳೂರಿನಲ್ಲಿ ಇಂದು15,879 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇಂದು 259 ಜನರು ಕೊರೋನಾ ಕಾರಣದಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.