JANANUDI.COM NETWORK
ನವದೆಹಲಿ ಮೇ.17;:ಕೊರೊನಾ ಸಾಂಕ್ರಮಿಕ ರೋಗದಿಂದ ಜಗತ್ತೆ ತತ್ತರಿಸುತ್ತಾ ಇರುವಾಗ ಔಷಧೀಯೇ ಇಲ್ಲದ ರೋಗ ಎಂದು ಹೈರನಾದ ಈ ಹೊತ್ತಲ್ಲಿ ಕೊರೋನಾಗೆ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಒ2 ಡಿಜೆ ಎಂಬ ಮದ್ದು ಕಂಡು ಹಿಡಿದಿದ್ದು, ಇಂದು ಲೋಕಾರ್ಪಣೆ ಆಗಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಈ ಔಷಧದ ಹತ್ತು ಸಾವಿರ ಪ್ಯಾಕೆಟ್ಗಳನ್ನು ಕೆಲವು ಆಸ್ಪತ್ರೆಗಳಿಗೆ ವಿತರಿಸಿಲಿದ್ದಾರೆ.
ಒ2 ಡಿಜೆ ಎಂಬ ಹೆಸರಿನ ಈ ಔಷಧವು ಮಾನವನ ದೇಹವನ್ನು ಸೇರಿಕೊಂಡಾಗ ವೈರಾಣುಗಳ ಬಲವನ್ನು ಕುಂದಿಸಿ, ಸೋಂಕು ಇತರ ಭಾಗಗಳಿಗೆ ಹರಡದಂತೆ ರಕ್ಷಾಕವಚ ನಿರ್ವಿುಸುತ್ತದೆ ಎಂದು ಹೇಳಲಾಗುತ್ತದೆ. ಈ ಔಷಧ ಬಳಸಿದ ಮೂರೇ ದಿನಗಳಲ್ಲಿ ಸೋಂಕಿತರು ಚೇತರಿಸಿಕೊಳ್ಳುವಂತೆ ಮಾಡುವ ಸಾಮರ್ಥ್ಯ ಇದಕ್ಕಿರುವುದು ಕ್ಲಿನಿಕಲ್ ಟ್ರಯಲ್ನಲ್ಲಿ ಇದು ಸಾಬೀತಾಗಿದೆ ಎಂದು ಡಿ.ಆರ್.ಡಿ.ಒ ತಿಳಿಸಿದೆ.
ಪುಡಿಯ ರೂಪದಲ್ಲಿರುವ ಈ ಔಷಧವನ್ನು ಸೋಂಕಿತರು ಯಾವುದೇ ಭಯವಿಲ್ಲದೆ ನೀರಿನಲ್ಲಿ ಬೆರೆಸಿ ಕುಡಿಯುವುದು, ಇದು ಕೋವಿಡ್ ರೋಗಿಗಳು ಶೀಘ್ರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗ ಬಹುದು ಎಂದು ಹೇಳಲಾಗುತ್ತದೆ. ಈ ಔಷಧದಿಂದ ಪ್ರಾಣಹಾನಿ ಕಡಿಮೆಯಾಗಲಿದೆ ಎಂದು ನಂಬಲಾಗುತ್ತದೆ.