JANANUDI.COM NETWORK

ಒಡಿಶಾ,ಜೂ, 7: ಕೊರೊನಾ ಅಂದರೆ ಕೆಲವರು ತಮ್ಮ ತಂದೆ ತಾಯಿವರನ್ನೆ ದೂರ ಮಾಡಿರುವಾಗ,ಅವರ ಶವಗಳನ್ನು ಸಹ ಬೇಡವೆಂದು ಹೇಳುತ್ತಿರುವಾಗ ಒಡಿಶಾಲೊಂದು ಅಭೂತ ಪೂರ್ವ ಘಟನೆ ನಡೆದಿದೆ. ಸೊಸೆಯಬ್ಬಳು ತನ್ನ ಕೊರೊನಾ ಸೋಂಕಿತ ಮಾವನನ್ನು ಹೆಗಲ ಮೇಲೆ ಹೊತ್ತುಕೊಂಡು ಕೋವಿಡ್ ಕೇಂದ್ರಕ್ಕೆ ಸಾಗಿಸಿರುವ ಘಟನೆ ವರದಿಯಾಗಿದೆ.
ಒಡಿಶಾದ ನಿಹಾರಿಕಾ ಎಂಬ ಮಹಿಳೆ ಸಮಾಜ ಮೆಚ್ಚುವ ಕೆಲಸವನ್ನು ಮಾಡಿದ್ದು, ಮಾವನನ್ನು ಹೊತ್ತುಕೊಂಡು ಹೋಗುತ್ತಿರುವ ನಿಹಾರಿಕಾಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಹಾರಿಕಾ ಅವರ ಪತಿ ಸೂರಜ್ ಮನೆಯಲ್ಲಿರಲಿಲ್ಲ. ಹೀಗಾಗಿ ಮನೆಯ ಎಲ್ಲ ಜವಾಬ್ದಾರಿಯನ್ನು ನಿಹಾರಿಕಾ ನೋಡಿಕೊಳ್ಳುತ್ತಿದ್ದರು. ಪತಿಯ ತಂದೆ 75 ವರ್ಷದ ತಾಲೇಶ್ವರ್ ದಾಸ್ ಅವರಿಗೆ ಕೋವಿಡ್ 19 ಸೋಂಕು ದೃಡಪಟ್ಟಿದೆ. ಇದರಿಂದಾಗಿ ಜಿಲ್ಲಾಡಳಿತ ತಾಲೇಶ್ವರ ದಾಸ್ಗೆ ಆಸ್ಪತ್ರೆಗೆ ದಾಖಲಾಗಲು ಹಾಗೂ ನಿಹಾರಿಕಾಗೆ ಮನೆಯಲ್ಲೇ ಐಸೋಲೇಟ್ ಆಗಲು ಸೂಚಿಸಿತ್ತು. ಆದರೆ ಆಸ್ಪತ್ರೆಗೆ ತೆರಳಲು ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಮಹಿಳೆ ಮಾವನನ್ನು ಹೊತ್ತುಕೊಂಡು ತೆರಳಿದ್ದಾರೆ.ಕಡೆಗೆ ಮಾರ್ಗ ಮಧ್ಯೆ ಅವರಿಗೆ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿಕೊಡಲಾಯಿತು.
ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿ ನಾಗಾನ್ ಭೋಗೇಶ್ವರಿ ಸಿವಿಲ್ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. ಪತಿ ದೂರವಿದ್ದರೂ ಪತಿಯ ತಂದೆಯನ್ನು ನಿಹಾರಿಕಾ ಹೊತ್ತುಕೊಂಡು ಹೋದ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಮೆಚ್ಚುಗೆ ಆಕೆಗೆ ವ್ಯಕ್ತವಾಗಿದ್ದು ನೆಟ್ಟಿಗರು ನಿಹಾರಿಕಾಗೆ ಮಾದರಿ ಹೆಣ್ಣು ಎಂದು ಪ್ರೀತಿ ನೀಡಿದ್ದಾರೆ.