ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಶಿಕ್ಷಣ ತೇರು ನಿರಂತರವಾಗಿ ಸಾಗಲು ಶ್ರಮಿಸುವ ಮೂಲಕ ಜಿಲ್ಲೆಯಲ್ಲಿ ರಾಜ್ಯಕ್ಕೆ ಮಾದರಿಯಾದ ಸುಸಜ್ಜಿತ ಗುರುಭವನ ನಿರ‍್ಮಾಣಕ್ಕೆ ತಾವೇ ನೇತೃತ್ವ ವಹಿಸುವುದಾಗಿ ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಭರವಸೆ ನೀಡಿದರು . ಜಿಲ್ಲಾ ರ‍್ಕಾರಿ ನೌಕರರ ಭವನದಲ್ಲಿ ಡಾ.ವೈ.ಎ.ಎನ್ ಅಭಿಮಾನಿಗಳ ಬಳಗ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ , ಈ ಸಂಬಂಧ ಮುಂದಿನವಾರವೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಗುರುಭವನ ಹಾಗೂ ನೌಕರರ ಭವನಗಳ ನರ‍್ಮಾಣದ ಸಂಬಂಧ ರ‍್ಚ ನಡೆಸುವುದಾಗಿ ತಿಳಿಸಿದರು . ಗುರುಭವನ ನರ‍್ಮಾಣ ಹಾಗೂ ನೌಕರರ ಭವನಕ್ಕೆ ಜಮೀನು ಒದಗಿಸುವ ಸಂಬಂಧ ಜಿಲ್ಲಾಧಿಕಾರಿಗಳ ಸ್ಪಂದಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು , ನಿಮಗಾಗಿ ಸ್ಪಂದಿಸುವ ಡಿಸಿ ಇದ್ದಾರೆ , ಈ ಕರ‍್ಯವನ್ನು ನಡೆಸಲು ಇದು ಸಕಾಲವಾಗಿದ್ದು , ತಮ್ಮ ಶಾಸಕರ ನಿಧಿ ಹಾಗೂ ಜಿಲ್ಲೆಯ ಕೈಗಾರಿಕೆಗಳ ಸಿಎಸ್‌ಆರ್ ನಿಧಿ ಪಡೆಯಲು ಪ್ರಯತ್ನ ನಡೆಸುವುದಾಗಿ ತಿಳಿಸಿದರು .
ನೌಕರರ ಭವನಕ್ಕೆ ಜಮೀನು ಮೀಸಲು
ನೌಕರರ ಭವನಕ್ಕೆ ಗುರುತಿಸಿ ಪ್ರಸ್ತಾವನೆ ಸಲ್ಲಿಕೆಯಾಗಿರುವ ಸಂಬಂಧಿತ ಜಮೀನು ಮೀಸಲಿಡುವ ಕುರಿತು ಡಿಸಿ ಒಳ್ಳೆಯ ಮನಸ್ಸಿನಿಂದ ಒಪ್ಪಿದ್ದಾರೆ , ಅವರಿಗೆ ಗುರುಭವನ ನರ‍್ಮಿಸುವ ಆಶಯವಿದ್ದು , ಈಗಾಗಲೇ ಗುರುಭವನ ಸಮಿತಿಗಳನ್ನು ರಚಿಸಿದ್ದಾರೆ ಎಂದರು .
ಜಿಲ್ಲೆಗೆ ಶಿಕ್ಷಣ ಪ್ರೇಮಿ , ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಡಿಡಿಪಿಐ ರೇವಣಸಿದ್ದಪ್ಪ , ರಾಜ್ಯದಲ್ಲೇ ಉತ್ತಮ ಬಿಇಒ ಎಂದು ಪ್ರಶಸ್ತಿ ಗಳಿಸಿರುವ ವೆಂಕಟರಾಮರೆಡ್ಡಿ ಅವರನ್ನು ಇಲ್ಲಿಗೆ ಬರುವಂತೆ ಮಾಡಿದ್ದೇನೆ , ಇದರಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ರ‍್ಷ ವ್ಯಕ್ತಪಡಿಸಿದರು .
ಚುನಾವಣಾ ನೀತಿ ಸ೦ಹಿತೆ ಅಡ್ಡಿ
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದ್ದು , ಇದಾದ ನಂತರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಸ್ಪಂದನೆ ನೀಡುವುದಾಗಿ ಭರವಸೆ ನೀಡಿದರು . ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಸಮಸ್ಯೆಗೆ ಪರಿಹಾರ ನೀಡಲಾಗಿದೆ , ಸಹಶಿಕ್ಷಕರಿಗೆ ಮುಖ್ಯಶಿಕ್ಷಕರಾಗಿ ಬಡ ನೀಡುವ ಕುರಿತು ೨೦೦ ಮಂದಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು . ವೃತ್ತಿ ಶಿಕ್ಷಕರ ವೇತನ ತಾರತಮ್ಯದ ಕುರಿತು ಮುಂದಿನ ವಾರವೇ ಸಚಿವರು ಮತ್ತು ಅಧಿಕಾರಿಗಳೊಂದಿಗೆ ರ‍್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು , ಹೆಲ್ತ್‌ಕರ‍್ಡ್ , ಕಾಲ್ಪನಿಕ ವೇತನ ಮತ್ತಿತರ ಸಮಸ್ಯೆಗಳ ಕುರಿತು ಕ್ರಮವಹಿಸುವುದಾಗಿ ತಿಳಿಸಿದರು
ಜಿಲ್ಲಾ ನೌಕರರ ಸಂಘದ ಪ್ರಧಾನ ಕರ‍್ಯರ‍್ಶಿ ಎಸ್.ಚೌಡಪ್ಪ , ಗುರುಭವನ , ರ‍್ಕಾರಿ ನೌಕರರ ಭವನ ನರ‍್ಮಾಣ ಕರ‍್ಯಕ್ಕೆ ತಾವೇ ಮುಂದಾಳತ್ವ ವಹಿಸಿ , ತಮ್ಮ ಶಾಸಕರ ನಿಧಿಯ ಜತೆಗೆ ಕಂಪನಿಗಳಿಂದ ಸಿಎಸ್‌ಆರ್ ನಿಧಿ ಕೊಡಿಸಲು ಸಭೆ ನಡೆಸಿ ಕ್ರಮವಹಿಸಲು ಮನವಿ ಮಾಡಿ , ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ವೈಎಎನ್ ಅವರ ಕರ‍್ಯಕ್ಕೆ ಧನ್ಯವಾದ ಸಲ್ಲಿಸಿದರು . ಪ್ರ : ಜಿಲ್ಲಾ ಪಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪಯ್ಯಗೌಡ , ಮುಂದಿನ ೫೦ ರ‍್ಷಗಳ ಭವಿಷ್ಯದ ದೃಷ್ಟಿಯಿಂದ ಸುಂದರ ಮತ್ತು ಸುಸಜ್ಜಿತ ಗುರುಭವನ ನರ‍್ಮಾಣಕ್ಕೆ ಸಹಕಾರ ನೀಡಲು ಮನವಿ ಮಾಡಿದರು .
ಮುಖ್ಯ ಶಿಕ್ಷಕರ ಸಂಘದ ರುದ್ರಪ್ಪ , ಮುಖ್ಯಶಿಕ್ಷಕರಿಗೆ ಎಕ್ಸಗೇಷಿಯಾ ಕೊಡಿಸಿ ಎಂದು ಮನವಿ ಮಾಡಿದರೆ , ನಾಗರಾಜ್ , ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ಸಮಸ್ಯೆಯನ್ನು ಗಮನಕ್ಕೆ ತಂದರು . ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕರ‍್ಯರ‍್ಶಿ ಎಂ.ನಾಗರಾಜ್ , ನೌಕರರ ಸಂಘದ ಜಂಟಿ ಕರ‍್ಯರ‍್ಶಿ ಶ್ರೀನಿವಾಸಲು , ಕರ‍್ಯಕಾರಿ ಸದಸ್ಯ ಬಿ.ಎ.ಕವಿತಾ , ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ , ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ , ಮರ‍್ಕಂಡೇಯ , ಆಂಜನೇಯ ಶಿಕ್ಷಕರ ಸಮಸ್ಯೆಗಳನ್ನು ಗಮನಕ್ಕೆ ತಂದರು . ಕರ‍್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ನರಸಿಂಹಯ್ಯ ರ‍್ಕಾರಿ ವಕೀಲ ಎಂ.ಪಿ.ನಾರಾಯಣಸ್ವಾಮಿ , ವಿಜಯಕುಮಾರ್ , ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್ , ಶಿಕ್ಷಕರ ಸಂಘದ ವಿವಿಧ ತಾಲ್ಲೂಕು ಅಧ್ಯಕ್ಷರಾದ ರವಿ , ನರಸಿಂಹ , ವಿನೋದ್‌ಬಾಬು , ಕರ‍್ಯರ‍್ಶಿ ಎಸ್.ನಾರಾಯಣಸ್ವಾಮಿ , ಗೌರವಾಧ್ಯಕ್ಷ ಆರ್.ನಾಗರಾಜ್ ಜಿಲ್ಲಾ ಉಪಾಧ್ಯಕ್ಷ ಓಬಳರೆಡ್ಡಿ , ಮುಖ್ಯಶಿಕ್ಷಕರ ತಾಲ್ಲೂಕು ಅಧ್ಯಕ್ಷ ದಾಸಪ್ಪ , ಸಹಶಿಕ್ಷಕರ ಸಂಘದ ಮೋಹನಾಚಾರಿ , ಮುಕುಂದ , ಶರಣಪ್ಪ ,ಬಡ್ತಿ ಶಿಕ್ಷಕರ ಸಂಘದ ನಾರಾಯಣರೆಡ್ಡಿ , ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು .