ಕುಂದಾಪುರ,ಫೆ.14: ಕಂಡ್ಲೂರು ಸಂತ ಅಂತೋನಿಯವರಿಗೆ ಸಮರ್ಪಿಸಲ್ಪಟ್ಟ ನೂತನ ಚರ್ಚ್ ಕಟ್ಟಡವನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಇವರು ತಮ್ಮ ದಿವ್ಯ ಹಸ್ತದಿಂದ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.
ಇದಕ್ಕೂ ಮೊದಲು ಚರ್ಚಿನ ಎದುರುಗಡೆ ನಿರ್ಮಾಣಗೊಂಡ ಮೇರಿ ಮಾತೆಯ ಗ್ರೊಟ್ಟೊವನ್ನು ಉಡುಪಿ ಧರ್ಮಪ್ರಾಂತ್ರದ ಮೊನ್ಸಿಂಝೊರ್ ಅ|ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಆಶಿರ್ವವಚನ ಮಾಡಿ ಉದ್ಘಾಟನೆ ಮಾಡಿದರು.
ಚರ್ಚಿನ ನೂತನ ಕಟ್ಟಡಕ್ಕೆ 2019 ರಲ್ಲಿ ಶಂಕುಸ್ಥಾಪನೆ ಮಾಡಿದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಈಗ ಪುರ್ಣಗೊಂಡ ನೂತನ ಚರ್ಚ್ ಕಟ್ಟಡವನ್ನು ಉದ್ಘಾಟನೆ ಮಾಡಿ ಆಶಿರ್ವಚಿಸಿ, ನೂತನ ಚರ್ಚ್ನ್ನು ಆಶಿರ್ವದಿಸುವ ಎಲ್ಲಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟು ಪವಿತ್ರ ಬಲಿದಾನದ ನೇತ್ರತ್ವನ್ನು ವಹಿಸಿಕೊಂಡು, ದಿವ್ಯ ಬಲಿದಾನವನ್ನು ಅರ್ಪಿಸಿ “ದೇವಾಲಯವು ದೇವರು ವಾಸಿಸುವ ಪವಿತ್ರ ಸ್ಥಳ, ಇದು ದೇವರ ಅಸ್ಥಿತ್ವವುಳ್ಳ ಜಾಗ ಇದು. ದೇವರು ನಮ್ಮ ಜತೆ ಇದ್ದು ನಮ್ಮ ಜತೆ ಜೀವಿಸುವ ಸ್ಥಳ. ದೇವಾಲಯವು ಸ್ವರ್ಗದ ದ್ವಾರವಾಗಿದೆ, ದೇವಾಲಯದ ದ್ವಾರದಿಂದ ಸರ್ವಶ್ವರನ ಮಹಿಮೆ ಪ್ರವೇಶಿಸಿ ದೇವಾಲಯದೊಳಗೆಲ್ಲ ತುಂಬುತ್ತದೆ, ಆದರಿಂದ ಇದು ಬಹು ಪವಿತ್ರ ಥಳವಾಗಿದೆ. ಆದರಿಂದ ನಾವೆಲ್ಲ ಈ ಥಳದಲ್ಲಿ ಭಯ ಭಕ್ತಿಯಿಂದ ನಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಶುಭ ಸಂದೇಶ ನೀಡಿದರು.
ಈ ಪವಿತ್ರ ಆಶಿರ್ವಚನ ಮತ್ತು ಬಲಿದಾನದ ಕಾರ್ಯಕ್ರಮದಲ್ಲಿ ಕಂಡ್ಲೂರು ಚರ್ಚಿನ ಧರ್ಮಗುರು ವಂ|ಕೆನ್ಯೂಟ್ ಬಾರ್ಬೊಜಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಮೊನ್ಸಿಂಝೊರ್ ಅ|ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿ ಧರ್ಮಪ್ರಾಂತ್ರದ ಛಾನ್ಸಲರ್ ಅ|ವಂ|ರೋಶನ್ ಡಿಸೋಜಾ, ಕುಂದಾಪುರ ವಲಯದ ಎಲ್ಲಾ ಚರ್ಚಿನ ಧರ್ಮಗುರುಗಳು, ಅತಿಥಿ ಧರ್ಮಗುರುಗಳು ಭಾಗಿಯಾದರು. ಧರ್ಮಗುರು ವಂ|ಸಿರಿಲ್ ಲೋಬೊ ಧಾರ್ಮಿಕ ಕಾರ್ಯಕ್ರಮವನ್ನು ನಿರೂಪಿಸಿದರು.
ನಂತರ ನೆಡದ ಸಭಾಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ವಂ|ಕೆನ್ಯೂಟ್ ಬಾರ್ಬೊಜಾ ಸ್ವಾಗತಿಸಿದರು. ಪಾಲನ ಮಂಡಳಿ ಕಾರ್ಯದರ್ಶಿ ಲವೀನಾ ಡೆಸಾ ವರದಿಯನ್ನು ವಾಚಿಸಿದರು, ಕಂಡ್ಲೂರು ಜಾಮಿಯಾ ಮಸೀದಿಯ ಇಮಾಮ್ ಮೌಲಾನ ಇಲಿಯಾಸ್ ನಾಡ್ವಿ ಇವರು ಸಂದೇಶ ನೀಡಿದರು. ಅ|ವಂ| ಸ್ಟ್ಯಾನಿ ತಾವ್ರೊ ಈ ಚರ್ಚಿನ ಕಾಮಗಾರಿಗಾಗಿ ನಮ್ಮ ವಂದನೀಯ ಬಿಷಪ್ ಜೆರಾಲ್ಡ್ ತುಂಬ ಮುತುವರ್ಜಿಯನ್ನು ವಹಿಸಿಕೊಂಡಿದ್ದರೆಂದು ತಿಳಿಸಿ, ನಿಮ್ಮ ಚರ್ಚಿನಲ್ಲಿ ನಮ್ಮ ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಹಿರಿಯ ಚರ್ಚ್ ಆದ ಕುಂದಾಪುರ ಚರ್ಚಿನ ಪಾಲಕಿ ರೋಜರಿಮಾತೆಯ ವರ್ಣಚಿತ್ರವನ್ನು ಹಾಕಿ, ರೋಜರಿ ಮಾತೆ ಈ ಕಡೆಯ ಎಲ್ಲಾ ಚರ್ಚಗಳ ಮಾತೆಯೆಂದು ಬಿಂಬಿಸಿದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಚರ್ಚಿನಲ್ಲಿ ಹಿಂದೆ ಸೇವೆ ನೀಡಿದ ಧರ್ಮಗುರುಗಳನ್ನು, ಇತರ ಧರ್ಮಗುರುಗಳನ್ನು, ಕಟ್ಟಡ ರಚನೆಯಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಲಾಯಿತು. ಚರ್ಚಿನ ಧರ್ಮಗುರು ವಂ| ವಂ|ಕೆನ್ಯೂಟ್ ಬಾರ್ಬೊಜಾ ಇವರನ್ನು ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಬಿಷಪರು ಸನ್ಮಾನಿಸಿದರು. ಬಿಷಪ್ ಜೆರಾಲ್ಡ್ ಲೋಬೊರವರನ್ನು ಫಾ|ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ಗೌರವಿಸಲಾಯಿತು. ಬಿಶಪರು “ಈ ನೂತನ ಕಟ್ಟಡ ಪೂರ್ಣಗೊಂದಿದಕ್ಕೆ ಸಂತೋಷವಾಗಿದೆ, ನಿಮ್ಮ ಶ್ರಮ ತ್ಯಾಗ ಮತ್ತು ಇತರ ಚರ್ಚುಗಳ ಉದಾರ ಮನಸ್ಸಿನವರಿಂದ ಇದು ಸಾಕಾರಗೊಂಡಿದೆ” ಎಂದು ಶುಭಕೋರಿ ಅಭಿನಂದಿಸಿದರು.ವೆನೀಶಾ ಡಿಸೋಜಾ ಮತ್ತು ಜ್ಯೋತಿ ಬುತೆಲ್ಲೊ ನಿರೂಪಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷ ವಿನೋದ್ ಡಿಸೋಜಾ ವಂದಿಸಿದರು.